ಬೆಂಗಳೂರು: ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ನಗರದ ಬಹುತೇಕ ಎಲ್ಲ ದೇವಾಲಯಗಳು ಬಂದ್ ಆಗಲಿದೆ.
ಗುರುವಾರ ಬೆಳಗ್ಗೆ 7 ಗಂಟೆಯಿಂದ 12 ಗಂಟೆವರೆಗೂ ದೇವಾಲಯಗಳು ಬಂದ್ ಆಗಲಿದೆ. ದೇವಸ್ಥಾನದ ಗರ್ಭಗುಡಿಯೊಳಗಿನ ಮೂಲ ಮೂರ್ತಿ ಹಾಗೂ ಎಲ್ಲ ಆಹಾರ ಸಾಮಾಗ್ರಿಗೂ ದರ್ಬೆ ಹಾಕಿ ಬಂದ್ ಮಾಡಲಾಗಿರುತ್ತದೆ. 12 ಗಂಟೆಗೆ ದೇವಾಲಯ ಮೂರ್ತಿ ಹಾಗೂ ಗೋಪುರ ಎಲ್ಲದರ ಶುದ್ಧೀಕರಣ ಕಾರ್ಯ ಆರಂಭಗೊಳ್ಳಲಿದೆ.
Advertisement
Advertisement
ಅದೇ ರೀತಿ ಸಂಜೆ 4 ಗಂಟೆಗೆ ಮತ್ತೆ ದೇವಾಲಯ ಓಪನ್ ಆಗಲಿದ್ದು, ಶಾಂತಿ ಹೋಮ, ಗ್ರಹ ದೋಷ ನಿವಾರಣೆ ಹೋಮ ನಡೆಯಲಿದೆ. ದರ್ನುಮಾಸ ಹಿನ್ನೆಲೆಯಲ್ಲಿ ಮುಂಜಾನೆ 5 ಗಂಟೆಗೆ ದೇವಾಲಯ ತೆರೆದಿರುತ್ತದೆ. ಹೀಗಾಗಿ ಸೂರ್ಯ ಗ್ರಹಣ ಆರಂಭದ ಮುನ್ನವೇ ಕ್ಲೋಸ್ ಮಾಡಲಾಗಿರುತ್ತದೆ. ಅದೇ ರೀತಿ ಗ್ರಹಣ ಕಾಲ ಮುಕ್ತಿಯಾದರು ದೇವಾಲಯದಲ್ಲಿ ಪೂಜೆ ಇರಲ್ಲ, ಕಾರಣ ಮಧ್ಯಾಹ್ನ ಸಮಯದಲ್ಲಿ ಪೂಜೆ ಕಾರ್ಯ ಮಾಡುವಂತಿಲ್ಲ.
Advertisement
ಗವಿಗಂಗಾಧರೇಶ್ವರ ದೇವಸ್ಥಾನ ಬೆಳಗ್ಗೆ 7:30ಕ್ಕೆ ಬಂದ್ ಆಗಿ, ಸಂಜೆ 4:00 ಗಂಟೆಗೆ ಓಪನ್ ಆಗಲಿದೆ. ಬನಶಂಕರಿ ದೇವಸ್ಥಾನ ಬೆಳಗ್ಗೆ 7:45ಕ್ಕೆ ಕ್ಲೋಸ್ ಮಾಡಿ ಸಂಜೆ 5:00 ಗಂಟೆಗೆ ತೆರೆಯಲಾಗುತ್ತದೆ. ಕಾಡುಮಲ್ಲೇಶ್ವರ ದೇವಾಲಯ ಬೆಳಗ್ಗೆ 7:30ಕ್ಕೆ ಬಂದ್ ಆಗಿ ಸಂಜೆ 5:00 ಗಂಟೆಗೆ ಓಪನ್ ಮಾಡಲಾಗುತ್ತದೆ. ನರಸಿಂಹ ದೇವ ದೇವಸ್ಥಾನ ಬೆಳಗ್ಗೆ 7:15 ಗಂಟೆಗೆ ಬಾಗಿಲು ಕ್ಲೋಸ್ ಮಾಡಿ ಸಂಜೆ 4:30ಕ್ಕೆ ತೆರೆಯಲಾಗುತ್ತದೆ. ಗಂಗಮ್ಮ ದೇವಿ ದೇವಸ್ಥಾನ ಬೆಳಗ್ಗ 7:00ಗಂಟೆಗೆ ಕ್ಲೋಸ್ ಮಾಡಿ ಸಂಜೆ 4:00ಗಂಟೆಗೆ ಓಪನ್ ಮಾಡಲಾಗುತ್ತೆ. ಇನ್ನು ದೊಡ್ಡ ಗಣಪತಿ ದೇವಾಲಯ ಕೂಡ ಬೆಳಗ್ಗೆ 7:30ಕ್ಕೆ ಬಂದ್ ಮಾಡಿ ಸಂಜೆ 5:00ಗೆ ಓಪನ್ ಮಾಡಲಾಗುತ್ತೆ.
Advertisement
ಹೀಗೆ ನಗರದ ಹಲವು ದೇವಾಲಯಗಳು ಬೆಳಗ್ಗೆ ತೆರೆಯುವುದು ಹಾಗೂ ಮುಚ್ಚಲಾಗುತ್ತದೆ.