‘ಪುಷ್ಪ 2’ ಕಾಲ್ತುಳಿತ ಪ್ರಕರಣ: ಸಿಎಂ ರೇವಂತ್‌ ರೆಡ್ಡಿರನ್ನು ಭೇಟಿಯಾದ ಅಲ್ಲು ಅರ್ಜುನ್‌ ತಂದೆ

Public TV
1 Min Read
allu aravind 1

ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ಅವರನ್ನು ಇಂದು (ಡಿ.26) ಅಲ್ಲು ಅರವಿಂದ್‌ ಭೇಟಿಯಾಗಿದ್ದಾರೆ. ‘ಪುಷ್ಪ 2’ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಸಿಎಂ ರೇವಂತ್ ರೆಡ್ಡಿರನ್ನು ಅಲ್ಲು ಅರವಿಂದ್ ಭೇಟಿ ಮಾಡಿದ್ದಾರೆ. ಇದನ್ನೂ ಓದಿ:BBK 11: ರಜತ್ ರಂಪಾಟಕ್ಕೆ ಚೈತ್ರಾ ಕುಂದಾಪುರ ಗಪ್‌ಚುಪ್‌

allu arjun revanth reddy

‘ಪುಷ್ಪ 2’ ಪ್ರೀಮಿಯರ್ ವೇಳೆ, ಮಹಿಳೆ ಸಾವನ್ನಪ್ಪಲು ಅಲ್ಲು ಅರ್ಜುನ್ ಕಾರಣ ಎಂದು ರೇವಂತ್ ರೆಡ್ಡಿ ಕೆಂಡ ಕಾರಿದ್ದರು. ಈ ಹಿನ್ನೆಲೆ ಅಲ್ಲು ಅರವಿಂದ್‌ (Allu Aravind) ಜೊತೆಯಾಗಿ ನಟರಾದ ವೆಂಕಟೇಶ್, ನಿತಿನ್, ನಾಗಾರ್ಜುನ, ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಸಾಥ್ ನೀಡಿದ್ದಾರೆ. ರೇವಂತ್ ರೆಡ್ಡಿರನ್ನು ಭೇಟಿಯಾಗಿ ರಾಜಿ ಆಗಲು ಮಾತುಕತೆ ನಡೆಸಿದ್ದಾರೆ.

allu aravind

ಇನ್ನೂ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮೃತ ಮಹಿಳೆ ಕುಟುಂಬಕ್ಕೆ ಅಲ್ಲು ಅರ್ಜುನ್ ತಂದೆ ಮತ್ತು ಪುಷ್ಪ 2 ಟೀಮ್ ಸೇರಿ 2 ಕೋಟಿ ರೂ. ಪರಿಹಾರವನ್ನು ನೀಡೋದಾಗಿ ಘೋಷಿಸಿದ್ದಾರೆ.

Share This Article