Pushpa 2: ಚಿತ್ರಕ್ಕೆ 330 ಕೋಟಿ ಸಂಭಾವನೆ ಪಡೆದ ಅಲ್ಲು ಅರ್ಜುನ್

Public TV
1 Min Read
ALLU ARJUN

ಲ್ಲು ಅರ್ಜುನ್ (Allu Arjun) ಮಹಾ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎನ್ನುವ ಬಿರುದಿಗೆ ಪಾತ್ರರಾಗಲಿದ್ದಾರೆ. ರಜನಿಕಾಂತ್ ಪಡೆದ ಸಂಭಾವನೆ ಮೀರಿಸಿ ಅಲ್ಲು ಖಜಾನೆ ತುಂಬಿಸಿಕೊಳ್ಳಲು ನಿಂತಿದ್ದಾರೆ. ಹಾಗಿದ್ದರೆ ಪುಷ್ಪ 2 (Pushpa 2) ಚಿತ್ರಕ್ಕೆ ಬನ್ನಿ ಜೇಬಿಗಿಳಿಸುವ ಕೋಟಿ ಎಷ್ಟು? ರಜನಿಕಾಂತ್, ಶಾರುಖ್, ಪ್ರಭಾಸ್, ಸಲ್ಲು ಕಕ್ಕಾಬಿಕ್ಕಿ ಆಗಿದ್ದೇಕೆ? ಇಲ್ಲಿದೆ ಮಾಹಿತಿ.

ALLU ARJUN 1

‘ಪುಷ್ಪ’ ಅಲ್ಲು ಅರ್ಜುನ್ ಎನ್ನುವ ಟಾಲಿವುಡ್ ನಟನನ್ನು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸ್ಟಾರ್ ಮಾಡಿದ ಸಿನಿಮಾ. ದಕ್ಷಿಣ ಭಾರತದಲ್ಲಿ ಇಂಥ ಕಲಾವಿದ ಇದ್ದಾನೆಂದು ತೋರಿಸಿದ ಸಿನಿಮಾ. ಅಲ್ಲು ಅರ್ಜುನ್‌ಗೆ ಮೊದಲ ಬಾರಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಸಿನಿಮಾ. ಇದೀಗ ಪುಷ್ಪ ನಟ ಸಂಭಾವನೆ ವಿಷಯದಲ್ಲಿ ಧಗಧಗಿಸುತ್ತಿದ್ದಾರೆ. ಈ ಚಿತ್ರಕ್ಕೆ ಬರೋಬ್ಬರಿ ಖಜಾನೆ ತುಂಬಿಸಿಕೊಳ್ಳುತ್ತಿರುವ ಮೊತ್ತ 330 ಕೋಟಿ ರೂಪಾಯಿ. ಭಾರತೀಯ ಚಿತ್ರರಂಗ ಆಕಾಶ ನೋಡುತ್ತಿದೆ. ಇದನ್ನೂ ಓದಿ:ಹಿರಿಯ ನಟಿ ಲೀಲಾವತಿ ಮನೆಯಲ್ಲಿ ಶಿವಣ್ಣ: ಆರೋಗ್ಯ ವಿಚಾರಣೆ

allu arjun 2

330 ಕೋಟಿಯಾ? ಅದು ಹೇಗೆ? ಉತ್ತರ ಇದೆ. ಸಿನಿಮಾ ಬಿಡುಗಡೆ ಮುನ್ನ ಮಾಡುವ ಬ್ಯುಸಿನೆಸ್ ಶೇ.33ರಷ್ಟು ಹಣ ಅಲ್ಲು ಸಂಭಾವನೆಯಾಗಿ ಕೇಳಿದ್ದಾರೆ. ಸ್ಯಾಟ್‌ಲೈಟ್, ಆಡಿಯೋ, ಡಿಜಿಟಲ್. ಥಿಯರಿಟಿಕಲ್, ಡಬ್ಬಿಂಗ್ ಹಕ್ಕು ಸೇರಿ ಸಾವಿರ ಕೋಟಿ ಬಿಜಿನೆಸ್ ಪಕ್ಕಾ. ಅದರ ಪ್ರಕಾರ 330 ಕೋಟಿ ಹಣ ಅಕೌಂಟ್‌ಗೆ ಜಮೆ ಮಾಡಲಿದ್ದಾರೆ. ರಜನಿಯ ಹೆಸರಿಡದ ಹೊಸ ಚಿತ್ರಕ್ಕೆ 210 ಕೋಟಿ ಪಡೆದಿದ್ದರು. ತಲೈವಾಗೆ ಅಲ್ಲು ಸೆಡ್ಡು ಹೊಡೆದರಾ? ಈ ಬಗ್ಗೆ ಗಾಸಿಪ್ ಅಡ್ದಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಅಲ್ಲು ಅರ್ಜುನ್‌ಗೆ ಜೋಡಿಯಾಗಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ಡಾಲಿ ಧನಂಜಯ್, ಅನಸೂಯ, ಫಹದ್ ಫಾಸಿಲ್ ಸೇರಿದಂತೆ ಅನೇಕರು ಪುಷ್ಪ ಪಾರ್ಟ್ 2ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ‘ಪುಷ್ಪ 2’ ಚಿತ್ರ ಬಹುಭಾಷೆಗಳಲ್ಲಿ ಅಬ್ಬರಿಸಲಿದೆ.

Share This Article