ಬೆಂಗಳೂರಿನ ಬೆಡಗಿ ಶ್ರೀಲೀಲಾಗೆ (Sreeleela) ತೆಲುಗಿನಲ್ಲಿ ಭಾರೀ ಬೇಡಿಕೆ. ಅದರಲ್ಲೂ ಅಲ್ಲು ಅರ್ಜುನ್ (Allu Arjun) ಜೊತೆ ಶ್ರೀಲೀಲಾ ಸೊಂಟ ಬಳುಕಿಸಿದ ಮೇಲಂತೂ ಪಡ್ಡೆಹುಡುಗರ ಹಾರ್ಟ್‌ಗೆ ಟಾನಿಕ್ ಕೊಟ್ಟಂತೆ ಆಗಿದೆ. ಹೀಗಿರುವಾಗ ಈ ಸಿನಿಮಾದ ಕಿಸ್ಸಿಕ್ ಫುಲ್ ಸಾಂಗ್ ಚಿತ್ರತಂಡ ಬಿಡುಗಡೆ ಮಾಡಿದೆ.
ಅಲ್ಲು ಅರ್ಜುನ್ ಜೊತೆ ನಟಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ನಟಿಯ ಮಾದಕ ನೋಟ, ಡ್ಯಾನ್ಸ್ ಎಲ್ಲವೂ ನೋಡುಗರಿಗೆ ಕಿಕ್ ಕೊಟ್ಟಿದೆ. ಸಖತ್ ಆಗಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಯೂಟ್ಯೂಬ್‌ನಲ್ಲಿ ಸಖತ್ ವಿವ್ಸ್ ಗಿಟ್ಟಿಸಿಕೊಂಡಿದೆ. ಇದನ್ನೂ ಓದಿ:ಸ್ಪೆಷಲ್ ಸಾಂಗ್‌ಗೆ ನೇಹಾ ಶೆಟ್ಟಿ ಗ್ರೀನ್ ಸಿಗ್ನಲ್
ಇನ್ನೂ ಈ ಚಿತ್ರ 1508 ಕೋಟಿ ರೂ. ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಬೀಗಿದೆ. ಪುಷ್ಪರಾಜ್ ಮತ್ತು ಶ್ರೀವಲ್ಲಿ ಮೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಸ್ಪೆಷಲ್ ಸಾಂಗ್‌ಗೆ ನೇಹಾ ಶೆಟ್ಟಿ ಗ್ರೀನ್ ಸಿಗ್ನಲ್
‘ಪುಷ್ಪ 2’ (Pushpa 2) ಚಿತ್ರ ಡಿ.5ರಂದು ಬಹುಭಾಷೆಗಳಲ್ಲಿ ತೆರೆಕಂಡಿತ್ತು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ, ಫಹಾದ್ ಫಾಸಿಲ್, ಜಗಪತಿ ಬಾಬು, ತಾರಕ್ ಪೊನ್ನಪ್ಪ ಸೇರಿದಂತೆ ಅನೇಕರು ನಟಿಸಿದರು.