ಅಮರಾವತಿ: ‘ಪುಷ್ಪ 2’ (Pushpa 2) ಚಿತ್ರದ ಪ್ರೀಮಿಯರ್ ಶೋ ವೇಳೆ ಉಂಟಾದ ನೂಕುನುಗ್ಗಲಿನಿಂದ ಕಾಲ್ತುಳಿತಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ಅಲ್ಲು ಅರ್ಜುನ್ (Allu Arjun) ಇಂದು ಬೆಳಗ್ಗೆ ಬಿಡುಗಡೆಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ನಟನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿತು. ಆದರೆ, ಸಂಜೆ ವೇಳೆಗೆ ತೆಲಂಗಾಣ (Telangana) ಹೈಕೋರ್ಟ್ ನಟನಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಶಾರುಖ್ ಕೇಸ್ ಪ್ರಸ್ತಾಪ – ಬಂಧನವಾಗಿದ್ದ ಪುಷ್ಪರಾಜನಿಗೆ ಕೆಲ ಗಂಟೆಯಲ್ಲಿ ಜಾಮೀನು ಸಿಕ್ಕಿದ್ದು ಹೇಗೆ?
Advertisement
Advertisement
ಬಂಧನಕ್ಕೊಳಗಾದ ಒಂದೇ ದಿನದಲ್ಲಿ ನಟ ಜೈಲಿನಿಂದ ಹೊರಬಂದಿದ್ದಾರೆ. ಜೈಲಾಧಿಕಾರಿಗಳ ಕೈಗೆ ಜಾಮೀನು ಪ್ರತಿ ಸಿಕ್ಕಿದ್ದು, ತಂದೆ ಅಲ್ಲು ಅರವಿಂದ್ ಜೊತೆ ಅಲ್ಲು ಅರ್ಜುನ್ ಹೊರಟಿದ್ದಾರೆ. ಗೀತಾ ಆರ್ಟ್ಸ್ ಕಚೇರಿ ಕಡೆ ನಟ ತೆರಳಿದ್ದಾರೆ. ಇಲ್ಲಿಂದ ನೇರವಾಗಿ ತಮ್ಮ ನಿವಾಸದ ಕಡೆ ಹೊರಡಲಿದ್ದಾರೆ. ಮನೆಯ ಬಳಿ ಪೊಲೀಸರ ಭಾರೀ ಭದ್ರತೆ ಕಲ್ಪಿಸಲಾಗಿದೆ.
Advertisement
Advertisement
ಚಂಚಲಗೂಡ ಜೈಲಿನ ಎರಡನೇ ಗೇಟ್‌ನಿಂದ ನಟ ಇಂದು ಬೆಳಗ್ಗೆ ಬಿಡುಗಡೆಯಾದರು. ನಿನ್ನೆ ರಾತ್ರಿ ಜೈಲು ಬಳಿ ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಪ್ರಸಂಗ ಕೂಡ ನಡೆಯಿತು. ಇದನ್ನೂ ಓದಿ: ನಟ ಅನ್ನೋ ಕಾರಣಕ್ಕೆ ಆರೋಪ ಹೊರಿಸುವುದು ನೋಡಿದರೆ ಬೇಸರವಾಗುತ್ತದೆ: ರಶ್ಮಿಕಾ ಮಂದಣ್ಣ