ಬಿಹಾರದಲ್ಲಿ ನಡೆಯಲಿದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಟ್ರೈಲರ್ ಲಾಂಚ್

Public TV
1 Min Read
rashmika mandanna 1

ಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ಟ್ರೈಲರ್ ನವೆಂಬರ್ 17ರಂದು ರಿಲೀಸ್ ಆಗಲಿದೆ. ಆದರೆ ಡಿಜಿಟಲ್ ಲಾಂಚ್ ಮಾಡುವ ಬದಲು ಬಿಹಾರದ ಪಾಟ್ನಾದಲ್ಲಿ ಬೃಹತ್ ವೇದಿಕೆ ನಿರ್ಮಿಸಿ, ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಟ್ರೈಲರ್ ರಿಲೀಸ್ ಮಾಡಲಿದೆ ಚಿತ್ರತಂಡ.

rashmika mandanna 4

ಇದೇ ನವೆಂಬರ್ 17ರಂದು ಬಿಹಾರದ ಗಾಂಧಿ ಮೈದಾನ ಪಾಟ್ನಾದಲ್ಲಿ ‘ಪುಷ್ಪ 2’ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಪುಷ್ಪ 2’ ಟೀಮ್ ಕಲಾವಿದರು ಮತ್ತು ಇಡೀ ತಂಡ ಭಾಗವಹಿಸಲಿದೆ. ಬಹುಭಾಷೆಗಳಲ್ಲಿ ರಿಲೀಸ್ ಈ ಸಿನಿಮಾ ತೆರೆಕಾಣಲಿದೆ. ಹಾಗಾಗಿ ಅಭಿಮಾನಿಗಳ ಎದುರು ಟ್ರೈಲರ್ ರಿಲೀಸ್ ಮಾಡಿದ್ರೆ, ಮತ್ತಷ್ಟು ಜನರಿಗೆ ಕನೆಕ್ಟ್ ಆಗುಬಹುದು ಎಂಬ ಕಾರಣಕ್ಕೆ ತಂಡ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ:‌’ಬಿಗ್‌ ಬಾಸ್’ ಎಲಿಮಿನೇಷನ್‌ ಬಳಿಕ ಮತ್ತೆ ಕಿರುತೆರೆಯಲ್ಲಿ ಯಮುನಾ ಬ್ಯುಸಿ

ಇನ್ನೂ ಇದೇ ಡಿ.5ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್ (Allu Arjun), ರಶ್ಮಿಕಾ, ಡಾಲಿ, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಸಿನಿಮಾದಲ್ಲಿ ಐಟಂ ಡ್ಯಾನ್ಸ್‌ನಲ್ಲಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ.

Share This Article