ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ ಇದೇ ಡಿ.5ರಂದು ರಿಲೀಸ್ ಸಿದ್ಧವಾಗಿದೆ. ದೀಪಾವಳಿ ಹಬ್ಬದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಪುಷ್ಪ 2’ ಸಿನಿಮಾದಲ್ಲಿನ ಪುಷ್ಪರಾಜ್, ಶ್ರೀವಲ್ಲಿ ಜೊತೆಯಾಗಿರುವ ಮೊದಲ ಪೋಸ್ಟರ್ ಅನ್ನು ನಟಿ ಹಂಚಿಕೊಂಡಿದ್ದಾರೆ.
‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ದಂಪತಿಗಳಾಗಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾದ ಮೊದಲ ಭಾಗದಲ್ಲಿಯೇ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಲವ್ ಸ್ಟೋರಿ ಮತ್ತು ಕೆಮಿಸ್ಟ್ರಿ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಈಗ ‘ಪುಷ್ಪ 2’ ಚಿತ್ರದಲ್ಲಿನ ಇಬ್ಬರ ರೊಮ್ಯಾಂಟಿಕ್ ಪೋಸ್ಟರ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಪುಷ್ಪರಾಜ್ ಮತ್ತು ಶ್ರೀವಲ್ಲಿ ಕಣ್ಣಲ್ಲಿ ಕಣ್ಣೀಟ್ಟು ನೋಡುತ್ತಿರುವ ಲುಕ್ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
View this post on Instagram
ಇನ್ನೂ ಡಿ.6ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಒಂದು ದಿನ ಮುಂಚಿತವಾಗಿ ಡಿ.5ರಂದು ರಿಲೀಸ್ ಆಗುತ್ತಿದೆ. ‘ಪುಷ್ಪ 2’ ರಿಲೀಸ್‌ಗೂ ಮುನ್ನವೇ ‘ಪುಷ್ಪ 3’ ಬರೋದಾಗಿ ಕೂಡ ಚಿತ್ರದ ನಿರ್ಮಾಪಕ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.