ಬಹುನಿರೀಕ್ಷಿತ ‘ಪುಷ್ಪ 2’ (Pushpa 2) ಸಿನಿಮಾ ಇದೀಗ ಕಲರ್‌ಫುಲ್ ಪೋಸ್ಟರ್‌ವೊಂದು ಹೊರಬಿದ್ದಿದೆ. ಅಲ್ಲು ಅರ್ಜುನ್ (Allu Arjun) ಜೊತೆ ಸ್ಟೈಲ್ ಆಗಿ ಪೋಸ್ ಕೊಡುತ್ತಾ ನಟಿ ಸಿಹಿಸುದ್ದಿಯೊಂದು ನೀಡಿದ್ದಾರೆ. ಪುಷ್ಪ 2 ಬಗ್ಗೆ ನಟಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ರೇವ್ ಪಾರ್ಟಿ ಪ್ರಕರಣ: ಗೈರಾದ ಹೇಮಾ & ಟೀಂಗೆ ಸಿಸಿಬಿ 2ನೇ ನೋಟಿಸ್
ಅಲ್ಲು ಅರ್ಜುನ್ ಸ್ಟೈಲೀಶ್ ಆಗಿ ಕೈಚಾಚಿ ನಿಂತು ಕೊಂಡಿದ್ದಾರೆ. ಅವರ ಜೊತೆ ಮಸ್ತ್ ಆಗಿ ನಟಿ ಪೋಸ್ ನೀಡಿದ್ದಾರೆ. ನಿಮ್ಮ ಪುಷ್ಪ ಮತ್ತು ಶ್ರೀವಲ್ಲಿ ಎಂದು ನಟಿ ಅಡಿಬರಹ ನೀಡಿದ್ದಾರೆ. ಐಕಾನ್ ಸ್ಟಾರ್ ಜೊತೆ ರಶ್ಮಿಕಾ (Rashmika Mandanna) ಹೆಜ್ಜೆ ಹಾಕಿರುವ ‘ಪುಷ್ಪ 2’ ಕಪಲ್ ಸಾಂಗ್ ನಾಳೆ (ಮೇ 29) ಬೆಳಿಗ್ಗೆ 11:07ಕ್ಕೆ ರಿಲೀಸ್ ಮಾಡುವುದಾಗಿ ನಟಿ ತಿಳಿಸಿದ್ದಾರೆ. ಇದೀಗ ನಟಿ ಶೇರ್ ಮಾಡಿರುವ ನಯಾ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಂದಹಾಗೆ, ಈ ಹಾಡು ತೆಲುಗು, ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಪುಷ್ಪ 2 ಸಾಂಗ್ ರಿಲೀಸ್ ಆಗುತ್ತಿದೆ.
View this post on Instagram
‘ಪುಷ್ಪ’ ಪಾರ್ಟ್ ಒಂದರಲ್ಲಿ ಒಂದಕ್ಕಿಂತ ಒಂದು ಸಾಂಗ್ ಅದ್ಭುತವಾಗಿ ಮೂಡಿ ಬಂದಿತ್ತು. ಆ ಹಾಡುಗಳು ಯೂಟ್ಯೂಬ್‌ನಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿತ್ತು. ಹಾಗಾಗಿ ಇದರ ಸೀಕ್ವೆಲ್‌ನಲ್ಲಿ ಆ್ಯಕ್ಷನ್ ಸೀನ್‌ಗಳಿಗೆ ಮಹತ್ವ ಕೊಡುವ ಹಾಗೇ ಹಾಡಿಗಳಿಗೂ ಪ್ರಾಮುಖ್ಯತೆ ನೀಡಿದೆ ಚಿತ್ರತಂಡ. ಹಾಗಾದ್ರೆ ಆ ಕಲರ್‌ಫುಲ್ ಕಪಲ್ ಸಾಂಗ್ ಹೇಗಿರಲಿದೆ ಎಂಬುದನ್ನು ಮೇ 29ರವರೆಗೆ ಕಾದುನೋಡಬೇಕಿದೆ.
ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ. ಜೊತೆಗೆ ಅನಸೂಯ, ಡಾಲಿ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಇದೇ ಆಗಸ್ಟ್ 15ಕ್ಕೆ ‘ಪುಷ್ಪ 2’ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.