DistrictsKarnatakaLatestMain PostRaichur

ಅಲ್ಲು ಅರ್ಜುನ್ ಪೋಸ್ಟರ್‌ಗೆ ಟಗರು ಬಲಿ ಕೊಟ್ಟು ಹಾರ ಹಾಕಿದ ಅಭಿಮಾನಿಗಳು

ರಾಯಚೂರು: ತೆಲುಗಿನ ಪುಷ್ಪ ಚಿತ್ರ ಬಿಡುಗಡೆ ಹಿನ್ನೆಲೆ ನಟ ಅಲ್ಲು ಅರ್ಜುನ್ ಕಟೌಟ್‍ಗೆ ಅಭಿಮಾನಿಗಳು ಟಗರಿನ ತಲೆ ಕಡಿದು ಲಿಂಬೆ ಹಾರ ಹಾಕಿ ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ.

ನಗರದ ಪೂರ್ಣಿಮಾ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದ್ದು ಚಿತ್ರಮಂದಿರದ ಹೊರಗಡೆ ಟಗರು ಬಲಿಕೊಟ್ಟು ಹಾರ ಹಾಕಿ ಸಂಭ್ರಮಾಚರಣೆ ಮಾಡಿದ್ದಾರೆ. ರಾಯಚೂರಿನಲ್ಲಿ ಇದೇ ಮೊದಲ ಬಾರಿಗೆ ಪ್ರಾಣಿ ತಲೆ ಕಡಿದು ಅಭಿಮಾನಿಗಳು ಹಾರ ಹಾಕಿದ್ದಾರೆ. ಇದನ್ನೂ ಓದಿ: ಪತಿ ಜೊತೆಗೆ ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚಿಂಚೋಳಿ

ಬೆಳಗಿನ ಜಾವ ಕಟೌಟ್‍ಗೆ ಲಿಂಬೆ ಹಾರದ ಜೊತೆ ಟಗರಿನ ತಲೆಯನ್ನೂ ಹಾಕಿ ಅತಿಯಾದ ಅಭಿಮಾನ ತೋರಿದ್ದಾರೆ. ಸಿನಿಮಾ ನೋಡಲು ಬಂದ ಪ್ರೇಕ್ಷಕರು ಟಗರಿನ ತಲೆ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ ಗಡಿಯಲ್ಲಿರುವುದರಿಂದ ರಾಯಚೂರಿನಲ್ಲಿ ತೆಲುಗು ಸಿನಿಮಾ ನಟರಿಗೆ ಹೆಚ್ಚು ಅಭಿಮಾನಿಗಳಿದ್ದಾರೆ. ಇದನ್ನೂ ಓದಿ: ಅರೆ ನಗ್ನ ಫೋಟೋ ಶೇರ್ ಮಾಡಿದ ನಟಿ ಇಲಿಯಾನಾ

Leave a Reply

Your email address will not be published.

Back to top button