ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ‘ಪುಷ್ಪ 2’ ಚಿತ್ರದ ಹೊಸ ಪೋಸ್ಟರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದನ್ನೂ ಓದಿ:ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ನಟ ಶ್ರೀಮುರಳಿ
‘ಪುಷ್ಪ 2’ ಹೊಸ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ (Allu Arjun) ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಫಸ್ಟ್ ಹಾಫ್ ಲಾಕ್ ಮತ್ತು ಲೋಡ್ ಫುಲ್ ಫೈರ್ ಎಂದು ಶೀರ್ಷಿಕೆ ನೀಡಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಂಡ ರಿವೀಲ್ ಮಾಡದೇ ಇದ್ದರೂ ಪೋಸ್ಟರ್ ಲುಕ್ ನೋಡಿ ಬನ್ನಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇನ್ನೂ ಡಿಸೆಂಬರ್ 6ರಂದು ರಿಲೀಸ್ ಆಗುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.
View this post on Instagram
ಇನ್ನೂ ಡಿ.6ರಂದು ರಿಲೀಸ್ ಆಗಲಿದೆ ಎಂದು ದಿನಾಂಕವನ್ನು ಈ ಮೊದಲೇ ಘೋಷಿಸಿದ್ದರು. ಆದರೆ ಸುದೀರ್ಘವಾಗಿ ಶೂಟಿಂಗ್ ನಡೆಯುತ್ತಿದ್ದ ಕಾರಣ, ಈ ವರ್ಷದ ಅಂತ್ಯದಲ್ಲಿ ಸಿನಿಮಾ ಬಿಡುಗಡೆಯಾಗೋದು ಅನುಮಾನ ಎಂದು ಸುದ್ದಿ ಹರಿದಾಡುತ್ತಿತ್ತು. ಈಗ ಮತ್ತೊಮ್ಮೆ ರಿಲೀಸ್ ಕುರಿತು ಅಧಿಕೃತ ಅಪ್‌ಡೇಟ್ ಸಿಕ್ಕಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.