ಮುಂಬೈ: ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದೆ. ಹಬ್ಬ ಆಚರಿಸಲು ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಭಕ್ತರು ಮನೆಗಳಿಗೆ ತಂದಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಕೆಲವರು ಜನಪ್ರಿಯ ಸಿನಿಮಾಗಳ ಸ್ಟೈಲ್ ಮಾದರಿಯ ಗಣೇಶ ಮೂರ್ತಿಗಳನ್ನು ಕೂರಿಸಿ ಗಮನ ಸೆಳೆದಿದ್ದಾರೆ.
‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಗಡ್ಡ ಸವರುವ ಸ್ಟೈಲ್ ದೇಶವಷ್ಟೇ ಅಲ್ಲ ವಿದೇಶದಲ್ಲೂ ಜನಪ್ರಿಯತೆ ಗಳಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವವರೂ ಈ ಸ್ಟೈಲ್ ಅನುಕರಿಸಿ ಖುಷಿಪಟ್ಟಿದ್ದರು. ಅದೇ ಮಾದರಿಯ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮುಂಬೈನಲ್ಲಿ ಭಕ್ತರು ಸುದ್ದಿಯಾಗಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಕುರ್ತಾ-ಪೈಜಾಮ್ ಧರಿಸಿ ಗಡ್ಡ ಸವರುವ ಮಾದರಿಯಲ್ಲೇ ಗಣೇಶ ಮೂರ್ತಿ ರೂಪಿಸಲಾಗಿದೆ. ಮೂರ್ತಿಯ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಫ್ರೀ ಗಣೇಶನಿಗಾಗಿ ಮುಗಿಬಿದ್ದ ಯುವಕರು
ಕಲಾವಿದರ ಪ್ರತಿಭೆ ಹಾಗೂ ಅಭಿಮಾನಿಗಳ ಫ್ಯಾನ್ಸ್ ಕ್ರೇಜ್‌ನ್ನು ಕೆಲವರು ಹೊಗಳಿದ್ದಾರೆ. ವಿಗ್ರಹ ತಯಾರಕರ ಸೃಜನಶೀಲತೆಯನ್ನು ಹಲವರು ಇಷ್ಟಪಡದೇ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ದೇವ ಗಣಪನನ್ನು ನಾವು ದೇವರಂತೆಯೇ ಭಾವಿಸಬೇಕು. ದೇವರು ಎಂದು ಭಾವಿಸುವವರು ಈ ರೀತಿ ಮಾಡುವುದಿಲ್ಲ. ನೀವು ಅಲ್ಲು ಅರ್ಜುನ್ ಅಭಿಮಾನಿಗಳಾಗಿದ್ದರೆ, ದಯವಿಟ್ಟು ಅಭಿಮಾನವನ್ನು ಹಾಗೆಯೇ ಇಟ್ಟುಕೊಳ್ಳಿ. ಈ ರೀತಿಯ ಕೆಲಸಗಳನ್ನು ಮಾಡಬೇಡಿ ಎಂದು ಸಿನಿಮಾ ಮಾದರಿ ಗಣಪ ಮೂರ್ತಿ ಪ್ರತಿಷ್ಠಾಪಿಸಿರುವವರ ಕುರಿತು ಕೆಲವರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ
ದೇವರು ಗಣಪತಿಯನ್ನು ನೀವು ಅಪಹಾಸ್ಯ ಮಾಡುತ್ತಿದ್ದೀರಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ‘ಪುಷ್ಪʼ ಡಿಸೆಂಬರ್ 2021ರಲ್ಲಿ ತೆರೆ ಕಂಡಿತು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಚಿತ್ರವು ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತು.