ಅಲ್ಲು ಅರ್ಜುನ್ (Allu Arjun) ಸದ್ಯ ಬರ್ಲಿನ್ (Berlin) ವಿಮಾನ ಏರಿದ್ದಾರೆ. ಪುಷ್ಪ 2 ಸಿನಿಮಾದ ಶೂಟಿಂಗ್ ನಡೆಯುತ್ತಿದ್ದರೂ, ಈ ನಡುವೆ ಅವರು ಬರ್ಲಿನ್ ದೇಶಕ್ಕೆ ಹಾರಿದ್ದಾರೆ. ಆಗಸ್ಟ್ 15ಕ್ಕೆ ಪುಷ್ಪ 2 ಸಿನಿಮಾ ರಿಲೀಸ್ ಆಗುತ್ತಿದ್ದರೂ, ಇನ್ನೂ ಶೂಟಿಂಗ್ ಬಾಕಿ ಉಳಿದುಕೊಂಡಿದ್ದರೂ, ಏಕಾಏಕಿ ಅಲ್ಲು ವಿದೇಶಕ್ಕೆ ಹಾರಿದ್ದಕ್ಕೆ ಕಾರಣವಿದೆ.
ಸದ್ಯ ಬರ್ಲಿನ್ ನಲ್ಲಿ 74ನೇ ಬರ್ಲಿನ್ ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತಿದೆ. ಚಿತ್ರೋತ್ಸವದಲ್ಲಿ (Chirotsava) ಭಾಗಿ ಆಗುವುದಕ್ಕಾಗಿ ಭಾರತದಿಂದ ಕೆಲ ಕಲಾವಿದರು ಪ್ರಯಾಣ ಬೆಳೆಸಿದ್ದಾರೆ. ಅದರಲ್ಲೂ ಅಲ್ಲು ಕೂಡ ಒಬ್ಬರು. ಹೈದಾರಾಬಾದ್ ಏರ್ ಪೋರ್ಟ್ ನಿಂದ ಅಲ್ಲು ಪ್ರಯಾಣ ಶುರು ಮಾಡಿದ್ದಾರೆ.
ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿ ಆಗುವುದು ಪ್ರತಿಷ್ಠಿತ ಗೌರವ. ಆ ಗೌರವ ಸಿಗೋದು ತೀರಾ ಅಪರೂಪ. ಅದರಲ್ಲೂ ಭಾರತದಿಂದ ಅನೇಕರಿಗೆ ಇಂಥದ್ದೊಂದು ಗೌರವ ಪ್ರಾಪ್ತಿಯಾಗಿದೆ. ಈ ಬಾರಿ ಆ ಪಟ್ಟಿಯಲ್ಲಿ ಅಲ್ಲು ಕೂಡ ಇದ್ದಾರೆ. ಹಾಗಾಗಿ ಅವರು ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ.
ಪುಷ್ಪ 2 ಸಿನಿಮಾದ ಮತ್ತಷ್ಟು ದೃಶ್ಯಗಳು ಚಿತ್ರೀಕರಣ ಆಗಬೇಕು. ಐಟಂ ಡಾನ್ಸ್ ಕೂಡ ಶೂಟ್ ಆಗಬೇಕಿದೆಯಂತೆ. ಅದಕ್ಕಾಗಿ ನಾನಾ ಕಲಾವಿದರ ಹೆಸರು ಕೂಡ ಕೇಳಿ ಬಂದಿದೆ. ಅಲ್ಲು ವಾಪಸ್ಸಾದ ನಂತರ ಶೂಟಿಂಗ್ ಮುಂದುವರೆಯಲಿದೆ.