ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಮಾಣಪತ್ರ ವಿತರಿಸಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದ್ದು, ಇದೀಗ ಚಿತ್ರಕ್ಕೆ U/A ಪ್ರಮಾಣ ಪತ್ರ ನೀಡಲಾಗಿದೆ. ಇದನ್ನೂ ಓದಿ:ಮಗಳೊಂದಿಗಿನ ಮುದ್ದಾದ ಫೋಟೋ ಹಂಚಿಕೊಂಡ ಮಿಲನಾ
‘ಪುಷ್ಪ 2’ ಕಳ್ಳಸಾಗಣೆದಾರರ ಸಿನಿಮಾ ಆಗಿರುವ ಕಾರಣ ಕೆಲವು ಸಂಭಾಷಣೆಗಳು ಮತ್ತು ದೃಶ್ಯಗಳನ್ನು ಸಹ ಬದಲಾಯಿಸಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಯಾವುದೇ ಹೆಚ್ಚಿನ ಕಟ್‌ಗಳು ಇಲ್ಲದೆ ಯು/ಎ ಪ್ರಮಾಣ ಪತ್ರವನ್ನು ಸಿನಿಮಾಕ್ಕೆ ನೀಡಲಾಗಿದೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಅಭಿಷೇಕ್ ಶೆಟ್ಟಿ
ಇನ್ನೂ ಸಿನಿಮಾ ರಿಲೀಸ್‌ಗೂ ಮುನ್ನು ಶ್ರೀಲೀಲಾ ಸೊಂಟ ಬಳುಕಿಸಿರುವ ‘ಕಿಸ್ಸಿಕ್’ ಸಾಂಗ್ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಪುಷ್ಪರಾಜ್, ಶ್ರೀವಲ್ಲಿ ಜೋಡಿ ನೋಡಲು ಮತ್ತು ಶ್ರೀಲೀಲಾ ಐಟಂ ಡ್ಯಾನ್ಸ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇನ್ನೂ ‘ಪುಷ್ಪ ಪಾರ್ಟ್ 3’ ಬರುವ ಬಗ್ಗೆಯೂ ಹಿಂಟ್ ಸಿಕ್ಕಿದೆ. ಇದನ್ನೂ ಕೇಳಿ ಕೂಡ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾ ಡಿ.5ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ ಧನಂಜಯ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.