ಹೈದರಾಬಾದ್: ಟಾಲಿವುಡ್ ನಟ ಅಲ್ಲು ಅರ್ಜುನ್ ಮಗಳಾದ ಅಲ್ಲು ಅರ್ಹಾ ಚೆಸ್ ಆಡುವ ಮೂಲಕವಾಗಿ ನೊಬೆಲ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದಾಳೆ.
Advertisement
ಅಲ್ಲು ಅರ್ಹಾ ಕುಟುಂಬದ ಸದಸ್ಯರ ಎದುರು ಚೆಸ್ ಆಡಿದ್ದಾಳೆ. ಈ ವೀಡಿಯೋವನ್ನು ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಅಲ್ಲು ಅರ್ಹಾಗೆ ನೊಬೆಲ್ ವರ್ಲ್ಡ್ ರೆಕಾರ್ಡ್ ನೀಡಿ ಗೌರವಿಸಲಾಗಿದೆ. ಇದು ಅಲ್ಲು ಅರ್ಜುನ್ ಕುಟುಂಬಕ್ಕೆ ಖುಷಿ ನೀಡಿದೆ. ಅಲ್ಲು ಅರ್ಹಾ ಕೂಡ ಚಿತ್ರರಂಗಕ್ಕೆ ಬರುತ್ತಿದ್ದಾಳೆ. ಈ ಮಧ್ಯೆ ಅವಳ ಹೆಸರಲ್ಲಿ ನೊಬೆಲ್ ದಾಖಲೆ ನಿರ್ಮಾಣ ಆಗಿದೆ. ಅತಿ ಚಿಕ್ಕ ವಯಸ್ಸಿಗೆ ಅಲ್ಲು ಅರ್ಹಾ ಚೆಸ್ ಟ್ರೇನರ್ ಆಗಿದ್ದಾಳೆ.
Advertisement
View this post on Instagram
Advertisement
ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾಗೆ ಇನ್ನೂ 5ರ ಪ್ರಾಯವಾಗಿದೆ. ಈ ಪುಟಾಣಿಗೆ ಸಮಂತಾ ಅಕ್ಕಿನೇನಿ ನಟನೆಯ ಶಾಕುಂತಲಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಸಮಂತಾ ಅವರು ಶಕುಂತಲೆಯ ಪಾತ್ರ ಮಾಡಿದ್ದು, ಶಕುಂತಲೆ ಪುತ್ರ ಭರತನ ಪಾತ್ರಕ್ಕೆ ಅಲ್ಲು ಅರ್ಹಾ ಬಣ್ಣ ಹಚ್ಚಿದ್ದಾಳೆ. ಈ ವಿಚಾರವನ್ನು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಆರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಅಲ್ಲ, ಕೇವಲ ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವ: ಕಿಮ್ಮನೆ ರತ್ನಾಕರ್
Advertisement
View this post on Instagram
ಶಾಕುಂತಲಂ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಕ್ಷಣ. ಇಂಥ ಸುಂದರ ಸಿನಿಮಾದಲ್ಲಿ ನನ್ನ ಮಗಳಿಗೆ ಚೊಚ್ಚಲ ಸಿನಿಮಾವಾಗಿದೆ ಎಂದು ಬರೆದುಕೊಂಡ ಅಲ್ಲು ಅರ್ಜುನ್ ಚಿತ್ರ ತಂಡಕ್ಕೆ ಶುಭ ಕೋರಿದ್ದರು. ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ಅಲ್ಲು ಅರ್ಹಾ ಅವಳ ಹೆಸರಿನಲ್ಲಿ ನೊಬೆಲ್ ದಾಖಲೆಯನ್ನು ಬರೆದುಕೊಂಡಿದ್ದಾಳೆ.