ನವದೆಹಲಿ: ಎಲ್‌ಜಿಬಿಟಿಕ್ಯು ಸಮುದಾಯಕ್ಕೆ (LGBT Community) ಸೇರಿದ ಜನರಿಗೆ, ಜಂಟಿ ಬ್ಯಾಂಕ್ ಖಾತೆಯನ್ನು ತೆರೆಯಲು ಅಥವಾ ಕ್ವೀರ್ ಸಂಬಂಧದಲ್ಲಿರುವ ವ್ಯಕ್ತಿಯನ್ನು ಫಲಾನುಭವಿಯಾಗಿ ನಾಮನಿರ್ದೇಶನ ಮಾಡಲು ಇನ್ನು ಮುಂದೆ ಯಾವುದೇ ನಿರ್ಬಂಧಗಳಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಸುಪ್ರೀಂಕೋರ್ಟ್ (Supremecourt) ಆದೇಶದ ಬಳಿಕ ಸರ್ಕಾರ ಈ ಆದೇಶ ಹೊರಡಿಸಿದೆ.
ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳಿಗೆ ಆಗಸ್ಟ್ 21 ರಂದು ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ತೃತೀಯಲಿಂಗಿಗಳೆಂದು ಗುರುತಿಸಿಕೊಳ್ಳುವ ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಲಭ್ಯವಿರುವ ಸೇವೆಗಳನ್ನು ಬಳಸಿಕೊಳ್ಳಲು ಸಹಾಯ ಮಾಡಲು ಎಲ್ಲಾ ಫಾರ್ಮ್ ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ‘ತೃತಿಯ ಲಿಂಗ’ ಎಂಬ ಪ್ರತ್ಯೇಕ ಕಾಲಮ್ ಅನ್ನು ಸೇರಿಸಲು ಆರ್‌ಬಿಐ 2015 ರಲ್ಲಿ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣೇಶನನ್ನು ಕೂರಿಸ್ತೀರಾ – ಪೊಲೀಸರ ಮಾರ್ಗಸೂಚಿಯಲ್ಲಿ ಏನಿದೆ?
2022 ರಲ್ಲಿ ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್, ತೃತೀಯಲಿಂಗಿ ಸಮುದಾಯಕ್ಕಾಗಿ ಪ್ರತ್ಯೇಕವಾಗಿ ‘ರೇನ್ಬೋ ಉಳಿತಾಯ ಖಾತೆ’ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯು ಹೆಚ್ಚಿನ ಉಳಿತಾಯ ದರಗಳು ಮತ್ತು ಡೆಬಿಟ್ ಕಾರ್ಡ್ ಕೊಡುಗೆಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ನೀಡಿತು. ಇದನ್ನೂ ಓದಿ: ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಕಿಡ್ನ್ಯಾಪ್ – ಕಾಂಗ್ರೆಸ್ ಶಾಸಕನ ಆಪ್ತರ ವಿರುದ್ಧ ದೂರು