ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ ಎಡವಟ್ಟಿನ ನಿರ್ಧಾರ ಕೈಗೊಂಡಿದೆ. ಕೆಇಎ (KEA) ಪರೀಕ್ಷೆಯಲ್ಲಿ ಹಿಜಬ್ (Hijab) ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದು, ವಿವಾದಕ್ಕೆ ಕಾರಣವಾಗಿದೆ.
ನವೆಂಬರ್ 18 ಮತ್ತು 19ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ವಿವಿಧ ನಿಗಮ-ಮಂಡಳಿಗಳ ಪರೀಕ್ಷೆಗೆ ಅಭ್ಯರ್ಥಿಗಳು ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಮೊದಲ ಹಂತದ ಪರೀಕ್ಷೆ ವೇಳೆಯೂ ಹಿಜಬ್ ಅವಕಾಶ ಕೊಟ್ಟಿದ್ದ ಕೆಇಎ ನಿರ್ಧಾರಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಪ್ರತಿಭಟನೆ ಕೂಡ ನಡೆಸಿದ್ದವು. ಈ ಎಲ್ಲಾ ವಿರೋಧದ ಬಳಿಕವೂ ಎರಡನೇ ಹಂತದ ನಿಗಮ-ಮಂಡಳಿ ಪರೀಕ್ಷೆಗೆ ಕೆಇಎ ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಇದನ್ನೂ ಓದಿ: ಸೋಮಶೇಖರ್ ನಮಗೆ ಬಹಳ ವಿಶೇಷ, ನಾವಿಬ್ರು ಸ್ನೇಹಿತರು: ಜಿ ಪರಮೇಶ್ವರ್
Advertisement
Advertisement
ಈ ಸಂಬಂಧ ಕೆಇಎ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಹಿಜಬ್ ಧರಿಸುವ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಕೆಇಎ ಸೂಚನೆ ನೀಡಿದೆ. ಇನ್ನು ನಿಗಮ-ಮಂಡಳಿ ಪರೀಕ್ಷೆಗೆ ಟಫ್ ಡ್ರೆಸ್ ಕೋಡ್ (Dress Code) ಜಾರಿ ಮಾಡಿದ್ದರೂ ಹಿಜಬ್‌ಗೆ ಅವಕಾಶ ಕೊಟ್ಟಿರುವುದು ಕೆಲವು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಶೀಘ್ರವೇ ಸಮ-ಬೆಸ, ಕೃತಕ ಮಳೆ ಬಗ್ಗೆ ನಿರ್ಧಾರ: ಗೋಪಾಲ್ ರೈ
Advertisement
Advertisement
ಕೆಇಎ ಡ್ರೆಸ್ ಕೋಡ್ ರೂಲ್ಸ್ ಏನು?
* ಪರೀಕ್ಷೆಯ ದಿನದಂದು ತುಂಬುತೋಳಿನ ಶರ್ಟ್ ಧರಿಸುವಂತಿಲ್ಲ.
* ಅಭ್ಯರ್ಥಿಗಳಿಗೆ ಜೇಬು ಇಲ್ಲದ ಅಥವಾ ಕಡಿಮೆ ಜೇಬಿರುವ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಸೂಚನೆ.
* ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುವುದಿಲ್ಲ.
* ಧರಿಸುವ ಬಟ್ಟೆಗಳು ಹಗುರವಾಗಿದ್ದು, ದೊಡ್ಡ ಎಂಬ್ರಾಯಿಡರಿ, ಜಿಪ್ ಪಾಕೆಟ್‌ಗಳು, ದೊಡ್ಡ ಬಟನ್‌ಗನ್ನು ಹೊಂದಿರಬಾರದು.
* ಅಭ್ಯರ್ಥಿಗಳು ಶೂ ಹಾಕಿಕೊಂಡು ಪರೀಕ್ಷೆಗೆ ಹಾಜರಾಗುವುದನ್ನು ಕಟ್ಟುನಿಟ್ಟಾಗಿ ನಿಷೇಧ.
* ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು.
* ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಅಭ್ಯರ್ಥಿಯು ಕುತ್ತಿಗೆಯ ಸುತ್ತ ಲೋಹದ ಆಭರಣ ಧರಿಸುವುದು, ಅಥವಾ ಕಿವಿಯೋಲೆ, ಉಂಗುರ, ಕಡಗ ಧರಿಸುವುದನ್ನು ನಿರ್ಬಂಧಿಸಲಾಗಿದೆ.
* ಬ್ಲೂಟೂತ್ ಸಾಧನ ಬಳಕೆಗೆ ಆಸ್ಪದವಾಗಬಾರದೆಂದು ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರ ಧರಿಸುವುದನ್ನು, ಅಂತೆಯೇ, ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ರೀತಿಯಲ್ಲಿ ಯಾವುದೇ ವಸ್ತ್ರ ಅಥವಾ ಸಾಧನ ಧರಿಸುವುದನ್ನು ನಿಷೇಧಿಸಲಾಗಿದೆ.
* ಯಾವುದೇ ರೀತಿಯ ಮಾಸ್ಕ್ ಸಹ ಧರಿಸುವಂತಿಲ್ಲ. ಇದನ್ನೂ ಓದಿ: ಹೆಚ್‍ಡಿಕೆ ತಿಹಾರ್ ಜೈಲಿಗೆ ಹೋಗುವ ತಪ್ಪೇನು ಮಾಡಿಲ್ಲ: ಕಾಂಗ್ರೆಸ್‍ಗೆ ಜೆಡಿಎಸ್ ಟಾಂಗ್