ಬೆಂಗಳೂರು: ಮೆಡಿಕಲ್ ಕೌನ್ಸಿಲಿಂಗ್ ಕಮಿಟಿ (MCC) ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, ಅಲ್ಲಿ ಸೀಟು ಸಿಕ್ಕಿ ಅದನ್ನೇ ಉಳಿಸಿಕೊಳ್ಳಲು ಇಚ್ಛಿಸುವವರು ಶುಕ್ರವಾರ (ಸೆ.20) ಬೆಳಗ್ಗೆ 11 ಗಂಟೆಯೊಳಗೆ ಕೆಇಎ (KEA) ಮೂಲಕ ಹಂಚಿಕೆಯಾಗಿರುವ ವೈದ್ಯಕೀಯ ಸೀಟನ್ನು ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅಂತಹವರು, ನಾಳೆ (ಶುಕ್ರವಾರ) ಕೆಇಎ ಕಚೇರಿಗೆ ಖುದ್ದಾಗಿ ಬಂದು ರದ್ದುಪಡಿಸಿಕೊಳ್ಳಬೇಕು. 10,000 ರೂ. ದಂಡ ವಿಧಿಸಿ, ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಸೀಟು ರದ್ದುಪಡಿಸಿಕೊಳ್ಳುವ ಸಮಯದಲ್ಲಿ ಅಖಿಲ ಭಾರತ ಕೌನ್ಸಿಲಿಂಗ್‌ನಲ್ಲಿ ಹಂಚಿಕೆಯಾದ ಸೀಟುಗಳ ವಿವರವನ್ನೂ ಸಲ್ಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ (H Prasanna) ತಿಳಿಸಿದ್ದಾರೆ.ಇದನ್ನೂ ಓದಿ: ವಿಶ್ವಾದ್ಯಂತ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 8 ಪ್ರಾಧ್ಯಾಪಕರು
Advertisement
ಈ ಪ್ರಕ್ರಿಯೆ ನಂತರ ಕೆಇಎನಲ್ಲಿ ರದ್ದಾದ ಎಲ್ಲಾ ಸೀಟುಗಳನ್ನು ಪರಿಗಣಿಸಿ ಮತ್ತು ಅರ್ಹ ಅಭ್ಯರ್ಥಿಗಳು ಎರಡನೇ ಸುತ್ತಿಗೆ ನಮೂದಿಸಿದ ಅದೇ ಆದ್ಯತಾ ಕ್ರಮದಲ್ಲಿನ ಆಯ್ಕೆಗಳೊಂದಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ‘ರೀ ರನ್’ ಮಾಡಿ, ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಹಂತದಲ್ಲಿ ಆಯ್ಕೆಗಳ ಆದ್ಯತೆಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಚೆನ್ನೈ ರಸ್ತೆಯಲ್ಲಿ ಪೀಸ್ ಪೀಸ್ ಮಾಡಿದ ಮಹಿಳೆಯ ಶವ ತುಂಬಿದ ಸೂಟ್‍ಕೇಸ್ ಪತ್ತೆ – ಕೊಲೆಯಾಗಿದ್ದು ಸೆಕ್ಸ್ ವರ್ಕರ್!
Advertisement
Advertisement
ಇತರೆ ಅಭ್ಯರ್ಥಿಗಳಿಗೆ ದಂಡವಿಲ್ಲದೆ ಯಾವುದೇ ಸೀಟನ್ನು ರದ್ದುಪಡಿಸುವುದಿಲ್ಲ. ಮುಂದಿನ ಪ್ರಕ್ರಿಯೆ ಮತ್ತು ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರಸನ್ನ ವಿವರಿಸಿದ್ದಾರೆ.ಇದನ್ನೂ ಓದಿ: ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಜಿಯೋ – ಗಾಜನೂರು, ಪೆದ್ದನಪಾಳ್ಯ, ಹುಗ್ಯಂನಂಥ ಗ್ರಾಮಗಳಲ್ಲೂ ಟವರ್
Advertisement