ಚಿತ್ರದುರ್ಗ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಡಿಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ ಏನು ಹೇಳುತ್ತಿದ್ದಾರೋ ಗೊತ್ತಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ, ಈ ಸಮ್ಮಿಶ್ರ ಸರ್ಕಾರ ಖಂಡಿತವಾಗಿಯೂ 5 ವರ್ಷ ಪೂರೈಸುತ್ತದೆ ಎಂದುಂ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.
Advertisement
ಮೈತ್ರಿ ಸರ್ಕಾರ ರಚನೆ ವೇಳೆಯೇ ಐದು ವರ್ಷದ ಒಪ್ಪಂದ ಆಗಿದೆ. ನೀವು ತಿರುಗಿಸಿ ಅದನ್ನೇ ಕೇಳಿದರೆ ನಾನು ಅದನ್ನೇ ಹೇಳ್ತೀನಿ ಎಂದು ಪತ್ರಕರ್ತರ ಮೇಲೆ ಗರಂ ಆದ್ರು. ರಾಜಕಾರಣದಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತೆ ಅಂತಾ ಯಾರೂ ಹೇಳೋಕಾಗಲ್ಲ ಎನ್ನುವ ಮೂಲಕ ಮತ್ತೆ ಸರ್ಕಾರದ ಅನಿಶ್ಚಿತತೆಯನ್ನು ಖಾತ್ರಿ ಮಾಡಿದ್ದಾರೆ.
Advertisement
ಸಿದ್ದರಾಮಯ್ಯ ಹೇಳಿದ್ದೇನು?: ಪಾರ್ಲಿಮೆಂಟ್ ಎಲೆಕ್ಷನ್ ವರೆಗೂ ಸಮ್ಮಿಶ್ರ ಸರ್ಕಾರ ಇರುತ್ತೆ. ಪಾರ್ಲಿಮೆಂಟ್ ಎಲೆಕ್ಷನ್ ಬಳಿಕ ಏನು ಬೆಳವಣಿಗೆ ಆಗುತ್ತೆ ನೋಡೋಣ ಎಂದು ಸಿದ್ದರಾಮಯ್ಯನವರು ಆಪ್ತರ ಬಳಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
Advertisement
ಪರಮೇಶ್ವರ್ ಚಿತ್ರದುರ್ಗ ಮಾರ್ಗವಾಗಿ ಹೊಸಪೇಟೆಗೆ ತೆರಳುವ ವೇಳೆ ಪರಮೇಶ್ವರ್ ಅಭಿಮಾನಿಗಳಿಂದ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೆದ್ದಾರಿ ಮಧ್ಯೆ ಛಲವಾದಿ ಸಮುದಾಯದ ಮುಖಂಡರು ಗೃಹ ಸಚಿವರಿಗೆ ಸನ್ಮಾನ ಮಾಡಿದರು. ಈ ಮಾರ್ಗವಾಗಿ ತುರ್ತು ಸೇವೆಗಾಗಿ ಜಿಲ್ಲಾಸ್ಪತ್ರೆಗೆ ತೆರಳುತ್ತಿದ್ದ ಅಂಬ್ಯುಲೆನ್ಸ್ ಗೆ ಚಿತ್ರದುರ್ಗ ಡಿಸಿ ವಿವಿ ಜೋತ್ಸ್ನಾ ಕಾರು ಅಡ್ಡಿಮಾಡಿತು. ತಡವಾಗಿ ಎಚ್ಚೆತ್ತ ಪೊಲೀಸರು ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದಾರೆ.