ಕಲಬುರಗಿ: ಕಲಬುರಗಿ-ಬೆಂಗಳೂರು ಮಧ್ಯೆ ಶುಕ್ರವಾರದಿಂದ ಏರ್ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್ ಏರ್ ವಿಮಾನ ಸಂಚಾರ ಆರಂಭಿಸಿದ್ದು, ವಾರದ ಎಲ್ಲ ದಿನವೂ ಸಂಚಾರ ನಡೆಸಲಿದೆ. ಶುಕ್ರವಾರ ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಟು 11.25ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮೊದಲ ಫ್ಲೈಟ್ ಇಳಿಯಬೇಕಿತ್ತು. ಆದರೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜು ಕವಿದಿದ್ದರಿಂದ 11.50ಕ್ಕೆ ಅಲ್ಲಿಂದ ಟೇಕಾಫ್ ಆಗಿ ಮಧ್ಯಾಹ್ನ 12.45ಕ್ಕೆ ಕಲಬುರಗಿಯಲ್ಲಿ ಇಳಿದಿದೆ.
ಎಟಿಆರ್-72 ಮಾದರಿಯ ವಿಮಾನ ನಗರದ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವಾಟರ್ ಸೆಲ್ಯೂಟ್ ಮೂಲಕ ಎರಡು ಅಗ್ನಿಶಾಮಕದಳದ ವಾಹನಗಳು ವಿಮಾನವನ್ನು ಸ್ವಾಗತಿಸಿದವು. ಈಗಾಗಲೇ ಕಲಬುರಗಿ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ನ ವಿಮಾನ ವಾರದಲ್ಲಿ ಮೂರು ದಿನ ಹಾರಾಟ ನಡೆಸುತ್ತಿದೆ. ಆದರೆ ಪ್ರಯಾಣಿಕರ ಸಂಖ್ಯೆ ಏರಿಕೆ ಹಾಗೂ ರಾಜ್ಯ ಸರ್ಕಾರದ ಮೂತುವರ್ಜಿಯಿಂದ ಕೊನೆಗೂ ಕಲಬುರಗಿ ಜನರ ಬಹುದಿನಗಳ ಬೇಡಿಕೆಯಾಗಿದ ನಿತ್ಯವೂ ವಿಮಾನ ಹಾರಾಟದ ಕನಸ್ಸು ಇದೀಗ ನನಸಾಗಿದೆ.
Advertisement
Advertisement
ಅಲಯನ್ಸ್ ಏರ್ ಸಂಸ್ಥೆಯ ಈ ವಿಮಾನ ಮಂಗಳವಾರ ಹೊರತುಪಡಿಸಿ ಉಳಿದ ಆರು ದಿನ ಮೈಸೂರಿನಿಂದ ಬೆಳಗ್ಗೆ 8.30ಕ್ಕೆ ಹೊರಟು 9.10ಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಇದೇ ವಿಮಾನ ಬೆಂಗಳೂರಿನಿಂದ 9.50ಕ್ಕೆ ಹೊರಟು 11.20ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.
Advertisement
ಕಲಬುರಗಿಯಿಂದ ಬೆಳಗ್ಗೆ 11.50ಕ್ಕೆ ಹೊರಟು ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ 2 ಗಂಟೆಗೆ ಹೊರಟು 2.50ಕ್ಕೆ ಮೈಸೂರು ತಲುಪಲಿದೆ. ಪ್ರತಿ ಮಂಗಳವಾರ ಮೈಸೂರಿನಿಂದ ಬೆಳಗ್ಗೆ 10.25ಕ್ಕೆ ಹೊರಟು 11.05ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ 11.40ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ಕಲಬುರಗಿಗೆ ಬರಲಿದೆ. ಮತ್ತೆ ಅದೇ ವಿಮಾನ ಕಲಬುರಗಿಯಿಂದ ಮಧ್ಯಾಹ್ನ 1.45 ಗಂಟೆಗೆ ಹೊರಟು 3.25ಕ್ಕೆ ಬೆಂಗಳೂರು ತಲುಪಲಿದ್ದು, ಅಲ್ಲಿಂದ 3.45ಕ್ಕೆ ಹೊರಟು ಸಂಜೆ 4.40ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿದೆ.
Advertisement
ಆದರೆ ಬೆಳಗ್ಗೆ 7 ಗಂಟೆಗೆ ಕಲಬುರಗಿಯಿಂದ ಬೆಂಗಳೂರಿಗೆ ಹೊರಟು ಮತ್ತೆ ಸಂಜೆ 8 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಬಿಡುವಂತಹ ಒಂದು ವಿಮಾನ ಸಂಚಾರ ಆರಂಭಿಸಬೇಕು ಎಂಬುದು ಹಲವು ಜನರ ಬಯಕೆಯಾಗಿದೆ. ಈ ಸಮಯದಲ್ಲಿ ವಿಮಾನ ಹಾರಾಟವಾದರೆ ಬೆಳಗ್ಗೆ ಬೆಂಗಳೂರಿಗೆ ತಲುಪಿ ಕೆಲಸ ಮುಗಿಸಿ ರಾತ್ರಿ ಮನೆ ಸೇರಬಹುದು ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ.