ಮಂಗಳೂರು: ಲವ್ ಜಿಹಾದ್ ಪ್ರಕರಣವನ್ನು ಸುಪ್ರೀಂಕೋರ್ಟ್ ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿದ ಬೆನ್ನಲ್ಲೇ ನಮ್ಮ ರಾಜ್ಯದ ಕರಾವಳಿಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
ಪ್ರೀತಿಯ ನೆಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರುವಾಜೆಯ ಪಿಎಫ್‍ಐ ಕಾರ್ಯಕರ್ತ ಹಕೀಂ(20) ಎಂಬಾತ ಲವ್ ಜಿಹಾದ್‍ಗೆ ಯತ್ನಿಸಿದ್ದಾನೆ ಎನ್ನಲಾಗುತ್ತಿದೆ. ಹಕೀಂ ಬಡ ವಿದ್ಯಾರ್ಥಿನಿಯೊಬ್ಬಳ ಜೊತೆ ಪ್ರೀತಿಯ ಹೆಸರಲ್ಲಿ ಮತಾಂತರಕ್ಕೆ ಯತ್ನಿಸಿದ್ದಾನೆ. ನನ್ನನ್ನು ಪ್ರೀತಿಸದಿದ್ರೆ ನಿನ್ನ ತಂದೆಯನ್ನ ಕೊಲ್ಲುತ್ತೇನೆ. ನಿಮ್ಮಪ್ಪನ ಅಂಗಡಿಗೆ ಬೆಂಕಿ ಹಾಕ್ತೀನಿ ಅಂತ ಬೆದರಿಸಿದ್ದ ಎಂದು ತಿಳಿದುಬಂದಿದೆ.
Advertisement
ಅಷ್ಟೇ ಅಲ್ಲದೇ ಹಕೀಂ, ನೀನು ಬಳೆ ಹಾಕ್ಬೇಡ, ಹೂ ಮುಡಿಬೇಡ, ರಂಜಾನ್ ಟೈಮಲ್ಲಿ ಉಪವಾಸ ಮಾಡು ಅಂತಾ ಹೊಸ ವರಸೆ ಶುರು ಮಾಡಿದ್ದ. ಯುವತಿಯನ್ನ ಬೆದರಿಸಿ ಆಗಸ್ಟ್ 14ರಂದು ಕಿವಿಯೋಲೆ ಲಪಟಾಯಿಸಿದ್ದ. ಈ ವಿಷಯ ಮನೆಯಲ್ಲಿ ತಿಳಿದು ವಿಚಾರಿಸಿದಾಗ ಸತ್ಯ ಬಯಲಾಗಿದೆ.
Advertisement
ಸದ್ಯ ಹಕೀಂ ಸೇರಿ ಮೂವರ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿ 5 ದಿನ ಕಳೆದಿದೆ. ಆದ್ರೂ ಬಂಧನ ಆಗಿಲ್ಲ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.