ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಹೆಚ್‌ಡಿಕೆ ಸಿಡಿಸಿದ 60% ಕಮೀಷನ್ ಬಾಂಬ್ ಸಾಕಷ್ಟು ಸದ್ದು ಮಾಡ್ತಿದೆ. ಕಮೀಷನ್ ಆರೋಪ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಜಟಾಪಟಿ ತೀವ್ರಗೊಂಡಿದೆ. ಬಿಜೆಪಿ ಕೂಡಾ ಜೆಡಿಎಸ್ ಜೊತೆ ಕಮೀಷನ್ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳಲು ಮುಂದಾಗಿದೆ.
ಹಲವು ಹಗರಣಗಳ ಸುಳಿಯಲ್ಲಿ ಸಿಕ್ಕಿಕೊಂಡ ಸರ್ಕಾರಕ್ಕೆ ಈಗ ಕಮೀಷನ್ ಉರುಳು. ಕೇಂದ್ರ ಸಚಿವ ಹೆಚ್‌ಡಿಕೆ (HD Kumaraswamy) ನಿನ್ನೆ 60% ಕಮೀಷನ್ ಆರೋಪ ಮಾಡಿದ್ದರು. ಸಚಿವರು ನೇರವಾಗಿಯೇ ವಿಧಾನಸೌಧದಲ್ಲಿ ಕಮೀಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಹೆಚ್‌ಡಿಕೆ ಆರೋಪ ಈಗ ರಾಜ್ಯ ರಾಜಕಾರಣದಲ್ಲಿ ಕಿಚ್ಚು ಹಚ್ಚಿದೆ. ಈ ಬೆನ್ನಲ್ಲೇ ಬಿಜೆಪಿ ನಾಯಕರು ಅಖಾಡಕ್ಕಿಳಿದಿದ್ದಾರೆ.ಇದನ್ನೂ ಓದಿ: ದರ್ಶನ್, ಗ್ಯಾಂಗ್‌ಗೆ ಮತ್ತೆ ಶಾಕ್ – ಜಾಮೀನು ರದ್ದು ಕೋರಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಕೆ
Advertisement
Advertisement
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ನವರು ನಮ್ಮ ಮೇಲೆ 40% ಆರೋಪ ಮಾಡಿದಾಗ ಯಾವ ದಾಖಲೆಯನ್ನೂ ಕೊಡಲಿಲ್ಲ. ಇದುವರೆಗೂ ಕೊಟ್ಟಿಲ್ಲ. ಈಗ ಅವರ ಸರ್ಕಾರದ ಮೇಲೆ 60% ಆರೋಪ ಬಂದಾಕ್ಷಣ ದಾಖಲೆ ಕೇಳುತ್ತಿದ್ದಾರೆ. ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿತುಳುಕ್ತಿದೆ. ಏನೂ ಆಗಿಲ್ಲ ಎಂದು ಸಿಎಂ ಭ್ರಷ್ಟಾಚಾರ ಮುಚ್ಚಿಕೊಳ್ಳುವ ಪ್ರಯತ್ನ ಪಡ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ಇನ್ನೂ ಬೆಂಗಳೂರಿನಲ್ಲಿ ಮಾತಾಡಿದ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವಥ ನಾರಾಯಣ, ಹೆಚ್‌ಡಿಕೆ ಆರೋಪ ಸಮರ್ಥಿಸಿಕೊಂಡರು. ಇದು 60% ಕಮೀಷನ್ ಸರ್ಕಾರ ಅಷ್ಟೇ ಅಲ್ಲ ಕಮೀಷನ್‌ನಲ್ಲಿ 100% ದಾಟಿರುವ ಸರ್ಕಾರ. ಎಲ್ಲ ಇಲಾಖೆಗಳಲ್ಲೂ ಸಚಿವರು ಕಮೀಷನ್ ದಂಧೆಗಿಳಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು…
Advertisement
ಇನ್ನೂ ಹೆಚ್‌ಡಿಕೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ನಿನ್ನೆ, ದಾಖಲೆ ಕೊಡಲಿ ಎಂದು ಸವಾಲೆಸೆದಿದ್ದರು. ಈ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಸಹ ಹೆಚ್‌ಡಿಕೆಗೆ ಇಂದು ಟಾಂಗ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿರುವ ಪ್ರಿಯಾಂಕ್ ಖರ್ಗೆ, ಕುಮಾರಸ್ವಾಮಿ ಅವರ ಬಳಿ 60% ಆರೋಪಕ್ಕೂ ಒಂದು ಪೆನ್‌ಡ್ರೈವ್ ಇರಬೇಕು. ಪೆನ್‌ಡ್ರೈವ್ ಬಿಡಲಿ ಯಾರು ಬೇಡ ಅಂತಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ದಾಖಲೆ ಇಟ್ಟು ಮಾತಾಡಬೇಕು. ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ ಕೇಂದ್ರ ಸಚಿವರಾಗಿ ಹೀಗೆ ಬೀದಿಯಲ್ಲಿ ಹೋಗೋ ತರ ಮಾತನಾಡಿದರೆ ಏನು ಉತ್ತರ ಕೊಡೋಕೆ ಆಗುತ್ತದೆ ಎಂದು ಟಕ್ಕರ್ ಕೊಟ್ಟರು.
ಒಟ್ಟಿನಲ್ಲಿ ಸದ್ಯಕ್ಕೆ 60% ಕಮೀಷನ್ ಆರೋಪಾಸ್ತ್ರ ಸದ್ದು ಮಾಡ್ತಿದೆ. ಈ ಅಸ್ತ್ರವನ್ನೂ ಸರ್ಕಾರದ ವಿರುದ್ಧ ಪರಿಣಾಮಕಾರಿ ಪ್ರಯೋಗಕ್ಕೆ ಜೆಡಿಎಸ್ ಜೊತೆ ಬಿಜೆಪಿ ತಯಾರಿ ಮಾಡಿಕೊಳ್ತಿದೆ. ಆ ಮೂಲಕ 40% ಆರೋಪದ ಸೇಡಿಗೆ ಕೇಸರಿ ಪಡೆ ಮುಂದಾಗಿದೆ.ಇದನ್ನೂ ಓದಿ: 2028ಕ್ಕೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ