ಬೆಂಗಳೂರು: ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ತೂರಾಟ ನಡೆಸಿ ಅರೆಸ್ಟ್ ಆದವರ ಪರ ಶಾಸಕ ಜಮೀರ್ ಅಹ್ಮದ್‌ಖಾನ್ ನಿಂತಿದ್ದು, ಗಲಭೆಕೋರರಿಗೆ 5 ಸಾವಿರ ನಗದು ಹಾಗೂ ರಂಜಾನ್ ಫುಡ್‌ಕಿಟ್ ನೀಡಿ ಸಹಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದ್ದಂತೆ, ಶಾಸಕ ಜಮೀರ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Advertisement
ತಮ್ಮ ಮೇಲಿನ ಆರೋಪಗಳಿಗೆ ತೆರೆ ಎಳೆಯಲು ಮುಂದಾದ ಅವರು, ಕಳೆದ ಏಪ್ರಿಲ್ 17ನೇ ತಾರೀಖಿನಂದು ಬೆಂಗಳೂರು ತೊರೆದು ಧಾರ್ಮಿಕ ಯಾತ್ರೆಗಾಗಿ ಮೆಕ್ಕಾಗೆ ಬಂದಿದ್ದೇನೆ. ಈಗ ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೂ ನನಗೂ ಯಾವ ರೀತಿಯ ಸಂಬಂಧವೂ ಇಲ್ಲ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಗಲಭೆಕೋರರ ಕುಟುಂಬಕ್ಕೆ ಜಮೀರ್ ಫುಡ್‌ಕಿಟ್ ಹಂಚಿಕೆಗೆ ಬ್ರೇಕ್
Advertisement
ಇಷ್ಟಕ್ಕೂ ನಡೆದಿದ್ದೇನು?
ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ ನಡೆಸಿದವರಿಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಸಹಾಯ ಮಾಡುತ್ತಿದ್ದಾರೆ. ದೇಗುಲ, ಪೊಲೀಸ್ ಠಾಣೆಗೆ ಕಲ್ಲು ಹೊಡೆದವರಿಗೆ ಜಮೀರ್ ನೆರವು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು.
Advertisement
ಕಳೆದ 17 ನೇ ತಾರೀಖಿನಂದು ಬೆಂಗಳೂರು ತೊರೆದು ಧಾರ್ಮಿಕ ಯಾತ್ರೆಗಾಗಿ ಮಕ್ಕಾಗೆ ಬಂದಿದ್ದೇನೆ. ಈಗ ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೂ ನನಗೂ ಯಾವ ರೀತಿಯ ಸಂಬಂಧವೂ ಇಲ್ಲ.
ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು.
— B Z Zameer Ahmed Khan (@BZZameerAhmedK) April 29, 2022
Advertisement
ಇಂದು ಮಧ್ಯಾಹ್ನ 3:30ಕ್ಕೆ ಹುಬ್ಬಳ್ಳಿಯಲ್ಲಿ ಹಣ ಹಾಗೂ ಫುಡ್‌ಕಿಟ್ ಹಂಚಿಕೆ ಮಾಡಲಾಗುತ್ತಿದ್ದು, ಕಸಬಾ ಪೇಟೆ ಪೊಲೀಸ್ ಠಾಣೆ ಬಳಿಯ ಮಸ್ತಾನ್ ಷಾ ಶಾದಿ ಮಹಲ್‌ನಲ್ಲಿ ಬೆಂಬಲಿಗರ ಮೂಲಕ ಜಮೀರ್ ಅಹ್ಮದ್ ಸಹಾಯ ಮಾಡಲಿದ್ದರು. ರಂಜಾನ್ ಹಿನ್ನೆಲೆಯಲ್ಲಿ ಮೆಕ್ಕಾದಲ್ಲಿರುವ ಜಮೀರ್ ಅಹ್ಮದ್, ಅಲ್ಲಿಂದಲೇ ಗಲಭೆಕೋರರಿಗೆ ಸಹಾಯಹಸ್ತ ಚಾಚಿದ್ದರು. ಹುಬ್ಬಳ್ಳಿಯ ತಮ್ಮ ಬೆಂಬಲಿಗರ ಮೂಲಕ ರೇಶನ್ ಕಿಟ್ ಹಂಚಿಕೆ ಮಾಡಲಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್
ಮಾಧ್ಯಮಗಳಲ್ಲಿ ಈ ಕುರಿತು ವರದಿಗಳು ಬಿತ್ತರವಾಗುತ್ತಿದ್ದಂತೆ ಜಮೀರ್ ರೇಷನ್ ಕಿಟ್ ಹಂಚಿಕೆ ಮಾಡದಂತೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಬೆಂಬಲಿಗರು ರೇಷನ್ ಕಿಟ್ ಹಂಚಿಕೆ ಕಾರ್ಯಕ್ರಮ ರದ್ದು ಪಡಿಸಿದ್ದಾರೆ ಎಂದು ತಿಳಿದು ಬಂದಿತ್ತು.
ಈ ಕುರಿತು ಪ್ರಕಟಣೆ ನೀಡಿದ್ದ ಜಮೀರ್, ರಂಜಾನ್ ಹಬ್ಬದ ಸಮಯದಲ್ಲಿ ಪವಿತ್ರ ನಮಾಜ್ ವೇಳೆ ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಲಿ. ಜೊತೆಗೆ ಮತ್ತೊಮ್ಮೆ ತಪ್ಪು ಮಾಡದಂತೆ ಬುದ್ಧಿ ನೀಡಲೆಂದು ಅಲ್ಲಾಹ್ ಹಾಗೂ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಮೆಕ್ಕಾದಲ್ಲಿ ಪವಿತ್ರ ರಂಜಾನ್ ಆಚರಣೆ ಸೇವೆಯಲ್ಲಿ ತೊಡಗಿದ್ದೇನೆ. ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಹಿನ್ನೆಲೆಯಲ್ಲಿ ತಾಯಂದಿರಿಗೆ ಪುಟ್ಟ ಮಕ್ಕಳಿಗೆ ಸಹಾಯಹಸ್ತ ನೀಡಲಾಗುತ್ತಿದೆ. ಈ ಸಹಾಯ ಹಸ್ತ ಯಾವುದೇ ರೀತಿಯ ಬೇರೆ ಅರ್ಥ ಕಲ್ಪಿಸುವುದು ಬೇಡ. ತಪ್ಪು ಮಾಡಿದವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನೀಡುವ ಶಿಕ್ಷೆಗೆ ಒಳಪಡಲಿ. ನನ್ನ ಸಹಾಯಹಸ್ತ ಯಾವುದೇ ರೀತಿಯ ತಪ್ಪಿತಸ್ಥರಿಗೆ ಸಹಾಯ ಅಲ್ಲ ಹಾಗೂ ಉತ್ತೇಜನವೂ ಅಲ್ಲ ಎಂದು ಹೇಳಿದ್ದರು.