ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ (Comgress Government) 2 ವರ್ಷ ಪೂರೈಸುತ್ತಿರುವ ಹೊತ್ತಿನಲ್ಲೇ ಸಾಲು ಸಾಲು ಕಮಿಷನ್ ಆರೋಪ ಎದುರಿಸುತ್ತಿದೆ. ಇತ್ತೀಚೆಗಷ್ಟೇ ಕಾಮಗಾರಿಗಳ ಹಣ ಬಿಡುಗಡೆಗೆ ಕಾಣದ ಕೈಗಳು, ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ ಎಂದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ (Contractors’ Association) ಬಾಂಬ್ ಸಿಡಿಸಿತ್ತು. ಈ ಬೆನ್ನಲ್ಲೇ ಎಪಿಎಂಸಿ ವ್ಯಾಪಾರಿಗಳು ಸರ್ಕಾರದ ವಿರುದ್ಧ ಕಮೀಷನ್ ಬಾಂಬ್ ಸಿಡಿಸಿದ್ದಾರೆ.
ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿಯ (AMPC) ಅಧಿಕಾರಿಗಳು 50 ಸಾವಿರ ರೂ. ಮಳಿಗೆಗಳಿಗೆ 20-30 ಲಕ್ಷ ರೂ. ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಸೇರಿದಂತೆ ಎಪಿಎಂಸಿ ಕಾರ್ಯದರ್ಶಿಗಳ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (ED) ದೂರು ನೀಡಲಾಗಿದೆ. ಇದನ್ನೂ ಓದಿ: PWDಯಲ್ಲಿ ಸತೀಶ್ ಕುಟುಂಬಸ್ಥರ ದರ್ಬಾರ್, ನೀರಾವರಿಯಲ್ಲಿ ಬೋಸರಾಜು ಮಗ ಹಸ್ತಕ್ಷೇಪ – ಸಿಡಿದ ಗುತ್ತಿಗೆದಾರರ ಸಂಘ
ದಾಸರನಪುರ ಎಪಿಎಂಸಿ ಮಳಿಗೆ ಹಂಚಿಕೆಯಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆದಿದೆ. ಮಳಿಗೆ ಬೇಕಾದ್ರೆ ವ್ಯಾಪಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ. ವಿಚಿತ್ರ ಅಂದ್ರೆ ಇಲ್ಲಿ ಸರ್ಕಾರಿ ನೌಕರರನ್ನೇ ಬ್ರೋಕರ್‌ಗಳನ್ನಾಗಿ ಮಾಡಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವರ ಹೆಸರನ್ನೂ ಉಲ್ಲೇಖಿಸಿ ವ್ಯಾಪಾರಿ ಅರುಣ್ ಪರಮೇಶ್ ಜಾರಿನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಣಾ ಇರೋ ಸೆಲ್‌ಗೆ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ – ಕೋಟೆಯಾಗಿ ಬದಲಾದ NIA ಕಚೇರಿ
ಏನಿದು ಪ್ರಕರಣ, ಆರೋಪ ಏನು?
ಎಪಿಎಂಸಿಯಿಂದ ದಾಸನಪುರಕ್ಕೆ ಮಳಿಗೆಗಳು ಶಿಫ್ಟ್ ಆಗಿದ್ದು, ಇಲ್ಲಿ ಮಳಿಗೆಗಳ ಹಂಚಿಕೆಗೆ ದುಡ್ಡು ಡಿಮ್ಯಾಂಡ್ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಒಂದೊಂದು ಸಾಲಿನ ಮಳಿಗೆಗಳಿಗೆ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ. 50 ಸಾವಿರ ರೂ. ಮುಂಗಡ ಹಣ ಪಡೆಯಬೇಕಾದ ಜಾಗದಲ್ಲಿ 20 ರಿಂದ 30 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡ್ತಿದ್ದಾರೆ. ಅಧಿಕಾರಿಗಳಿಂದ ನೇರವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳ| ಹಿಂಸಾಚಾರಕ್ಕೆ ತಿರುಗಿದ ವಕ್ಫ್ ಪ್ರತಿಭಟನೆ – ವಾಹನಗಳಿಗೆ ಬೆಂಕಿ, ರೈಲುಗಳ ಮೇಲೆ ಕಲ್ಲು
ಒಟ್ಟು 103 ಮಳಿಗೆಗಳಿಗೆ 105 ಅರ್ಜಿ ಬಂದಿದೆ. ಇಲ್ಲಿ ವ್ಯಾಪಾರ ಹೆಚ್ಚಾಗಿ ಆಗುವ ಮಳಿಗೆಗಳು, ಮುಂಭಾಗದ ಮಳಿಗೆಗಳಿಗೆ ಪ್ರತ್ಯೇಕ ದರ ಫಿಕ್ಸ್ ಮಾಡಿದ್ದಾರೆ. ಈಗಾಗಲೇ 9 ಕೋಟಿ ಕಲೆಕ್ಟ್ ಆಗಿದೆ. ಮಾರ್ಚ್ 29ರ ಸಂಜೆಯೊಳಗೆ ವ್ಯಾಪಾರಿಗಳ ಬಳಿ ಡೀಲ್ ಮಾಡಿದ್ದಾರೆ. ರೈತರಿಗೆ ಅನುಕೂಲ ಮಾಡಿಕೊಡಬೇಕಾದವರೇ ಭ್ರಷ್ಟಾಚಾರ ಮಾಡಿದ್ದಾರೆ. ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಸಚಿವ ಶಿವಾನಂದ ಪಾಟೀಲ್ ಅವರೂ ಶಾಮೀಲಾಗಿದ್ದಾರೆ ಅನ್ನೋ ಮಾಹಿತಿ ಇದೆ. ಅವರ ವಿರುದ್ಧವೂ ಇಡಿಗೆ ದೂರು ಕೊಡಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳಿಗೂ ಪತ್ರ ಬರೆಯುತ್ತೇವೆ ಎಂದು ದೂರುದಾರ ಅರುಣ್ ಪರಮೇಶ್ ಹೇಳಿದ್ದಾರೆ.