ರಾಯಚೂರು: 57.64 ಲಕ್ಷ ರೂ. ಮೊತ್ತದ ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪದ ಹಿನ್ನೆಲೆ ರಾಯಚೂರಿನ ಲಿಂಗಸುಗೂರು (Lingasuguru) ಪುರಸಭೆ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಅವರನ್ನು ಅಮಾನತುಗೊಳಿಸಲಾಗಿದೆ.ಇದನ್ನೂ ಓದಿ: ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್, ರಜತ್ ಬಂಧನ ಕೇಸ್‌ಗೆ ಟ್ವಿಸ್ಟ್ – ಮಧ್ಯರಾತ್ರಿಯೇ ಇಬ್ಬರೂ ರಿಲೀಸ್
ಈ ಹಿಂದೆ ಮಸ್ಕಿ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದಾಗ ಈ ಪ್ರಕರಣ ನಡೆದಿತ್ತು. ಕ್ರಿಯಾಯೋಜನೆಯಲ್ಲಿ ಇಲ್ಲದ ಕಾಮಗಾರಿಯನ್ನು ನಡೆಸಿ ಆರ್ಥಿಕ ನಷ್ಟವಾಗಿತ್ತು. ಜೊತೆಗೆ ಪೀಠೋಪಕರಣಗಳ ಅಳವಡಿಕೆಯಲ್ಲಿ ನಿಯಮ ಉಲ್ಲಂಘಿಸಿದ್ದರು. ಈ ಹಿನ್ನೆಲೆ ದುರುಗರಾಜ್ ವಟಗಲ್ ಎಂಬುವವರು ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಆರೋಪಗಳು ಸಾಬೀತಾಗಿದೆ. ಕರ್ತವ್ಯಲೋಪ, ಹಣ ದುರ್ಬಳಕೆ, ಭ್ರಷ್ಟಾಚಾರ ಆರೋಪದಡಿ ರಾಯಚೂರು (Raichuru) ಜಿಲ್ಲಾಧಿಕಾರಿ ನಿತೀಶ್.ಕೆ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು?