ಚಿತ್ರದುರ್ಗ: ಕಳಪೆ ರಸ್ತೆ ಕಾಮಗಾರಿಯ ಆರೋಪ ಹೊರಿಸಿ ಗ್ರಾಮಸ್ಥರು ಎಂಜಿನಿಯರ್‌ಗೆ (Engineer) ಕಲ್ಲೇಟು ಹೊಡೆದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ನಡೆದಿದೆ. ತಲೆಗೆ ಗಂಭೀರ ಗಾಯವಾಗಿರುವ ಹಿನ್ನೆಲೆ ಎಂಜಿನಿಯರ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಚಿತ್ರದುರ್ಗ ಜಿಲ್ಲೆಯ ಕಸವನಹಳ್ಳಿಯಲ್ಲಿ ನಡೆದಿದೆ. ಕಸವನಹಳ್ಳಿ ಪಿಡಬ್ಲ್ಯುಡಿ ಎಂಜಿನಿಯರ್ ನಾಗರಾಜ್‌ಗೆ ಗ್ರಾಮಸ್ಥರು ಸೇರಿಕೊಂಡು ಕಲ್ಲೆಸೆದಿದ್ದಾರೆ ಎನ್ನಲಾಗಿದೆ. ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಸವನಹಳ್ಳಿ ರಸ್ತೆ ಕಾಮಗಾರಿ ಮಾಡಲಾಗುತ್ತಿತ್ತು. ಆದರೆ ರಸ್ತೆ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
Advertisement
ರಸ್ತೆ ಕಾಮಗಾರಿ ವೀಕ್ಷಣೆಗೆಂದು ತೆರಳಿದ್ದ ವೇಳೆ ಎಂಜಿನಿಯರ್ ಅನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಗಲಾಟೆ ನಡೆದು, ನೂಕಾಟ, ತಳ್ಳಾಟದ ವೇಳೆ ನಾಗರಾಜ್ ಮೇಲೆ ಕಲ್ಲೆಸೆಯಲಾಗಿದೆ. ನಾಗರಾಜ್ ತಲೆಗೆ ಗಂಭೀರ ಗಾಯವಾಗಿರುವ ಹಿನ್ನೆಲೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಜ್ಯುವೆಲರಿ ಶಾಪ್‌ನಲ್ಲಿ ಕೈಚಳಕ – ಆಭರಣ ಖರೀದಿ ನೆಪದಲ್ಲಿ ನೆಕ್ಲೇಸ್ ಎಗರಿಸಿದ ಮಹಿಳೆ
Advertisement
Advertisement
ಘಟನೆ ಸಂಬಂಧ ಕಸವನಹಳ್ಳಿಯ ವೀರಕರಿಯಪ್ಪ ಮತ್ತಿತರರ ವಿರುದ್ಧ ಹಲ್ಲೆಯ ಆರೋಪ ಹೊರಿಸಲಾಗಿದೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆ
Web Stories