ಕನ್ನಡ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ನಟಿ ರಾಣಿ ಗುರುತರ ಆರೋಪಗಳನ್ನು ಮಾಡಿದ್ದರು. ಸಂಘದಲ್ಲಿ ಹಣದ ದುರುಪಯೋಗ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್, ಮಹಿಳೆಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎನ್ನುವುದು ರಾಣಿ ಆರೋಪವಾಗಿತ್ತು. ರಾಣಿ ಅವರ ಆರೋಪಕ್ಕೆ ಅಧ್ಯಕ್ಷ ಡಿಂಗ್ರಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ರಾಣಿ ಆರೋಪ ಎಲ್ಲವೂ ನಿರಾಧಾರ ಎಂದು ತಿಳಿಸಿದ್ದಾರೆ.
‘ರಾಣಿ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕ್ತಿವಿ. ಪೋಷಕ ಕಲಾವಿದರ ಸಂಘದ ಹಣ ದುರುಪಯೋಗ ಮಾಡಿಲ್ಲ. ಅವರು ಸಂಘದ ಆವರಣದಲ್ಲಿ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ಶುರು ಮಾಡಿದ್ರು. ಹಾಗಾಗಿ ಅವರನ್ನು ಸಂಘದಿಂದ ಉಚ್ಚಾಟನೆ ಮಾಡಿದ್ದೇವೆ. ಈಗ ನಾವು ಕಾರ್ಯಕ್ರಮ ಮಾಡ್ತಿದ್ದಿವಿ. ಅದನ್ನು ವಿರೋಧಿಸೋಕೆ ಈ ರೀತಿ ಆರೋಪ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಕಳಿಸಿರೋದು ಸುಳ್ಳು ಮಾಹಿತಿ. ನಾವೇ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ’ ಎಂದಿದ್ದಾರೆ ಡಿಂಗ್ರಿ ನಾಗರಾಜ್. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ
- Advertisement
- Advertisement
ಕರ್ನಾಟಕ ಪೋಷಕ ಕಲಾವಿದರ ಸಂಘದ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡೆಗೆ ಸಿನಿಮಾ ಹಾಗೂ ಕಿರುತೆರೆ ನಟಿ ರಾಣಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಣಿ, ‘ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಆರೋಪ ಮಾಡಿದ್ದು, ತಮ್ಮದು ಪೋಷಕ ಕಲಾವಿದರ ಸಂಘದ ಮೇಲೆ ಆರೋಪ ಮಾಡುವುದಿಲ್ಲ’ ಎಂದಿದ್ದಾರೆ. ಮಹಿಳೆಯರನ್ನು ಅಗೌರವದಿಂದ ಇವರು ನಡೆಸಿಕೊಳ್ಳುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿ ಇರುವಂತಹ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.