ಕೊಪ್ಪಳ: ಕಳ್ಳತನ ಮಾಡಿ ಹಣ ಕೊಡೋಕೆ ಆಗುತ್ತಾ, ಗ್ಯಾರಂಟಿ ಯೋಜನೆಗಳಿಂದಾಗಿ (Guarantee Scheme) ಟಿಕೆಟ್ ದರ ಹೆಚ್ಚಳ ಆರೋಪ ಸುಳ್ಳು ಎಂದು ಸಚಿವ ಎನ್.ಎಸ್ ಬೋಸರಾಜು (NS Bosaraju) ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ (Koppal) ತಾಲೂಕಿನ ನಾರಾಯಣಪೇಟೆ ಜಾಕವೆಲ್‌ಗೆ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ವೀಕ್ಷಣೆ ಮಾಡಿದರು. ಈ ಯೋಜನೆ ಕೊಪ್ಪಳ ತಾಲೂಕಿನ 3, ಯಲಬುರ್ಗಾ ತಾಲೂಕಿನ 10 ಕೆರೆಗಳನ್ನು ತುಂಬಿಸುತ್ತದೆ. ಈ ಕುರಿತು ಅಧಿಕಾರಿಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಸಚಿವರು ಹಾಗೂ ಸಂಸದ ರಾಜಶೇಖರ ಹಿಟ್ನಾಳ್ ಜೊತೆಗೂಡಿ ಭೇಟಿ ನೀಡಿದರು.ಇದನ್ನೂ ಓದಿ: ಚಿತ್ರದುರ್ಗ| ಕಿಡ್ನ್ಯಾಪ್ ಕೇಸ್‌ಗೆ ಟ್ವಿಸ್ಟ್ – ಹೋಂವರ್ಕ್, ಟ್ಯೂಷನ್‌ನಿಂದ ತಪ್ಪಿಸಿಕೊಳ್ಳಲು ಕಥೆ ಕಟ್ಟಿದ ಬಾಲಕರು
Advertisement
Advertisement
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಬಸ್ ದರ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದಾಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿರುವುದು ಸುಳ್ಳು ಆರೋಪ. ಗ್ಯಾರಂಟಿ ಯೋಜನೆಗಳಿಗೆ ಕೂಡಾ ಜನರ ತೆರಿಗೆ ಹಣವನ್ನೇ ನಾವು ಕೊಡುತ್ತಿದ್ದೇವೆ. ಕಳ್ಳತನ ಮಾಡಿ ಹಣ ಕೊಡೋಕೆ ಆಗುತ್ತಾ? ಡೀಸೆಲ್ ಬೆಲೆ ಹೆಚ್ಚಳವಾಗಿದೆ, ಖರ್ಚು ವೆಚ್ಚ ಹೆಚ್ಚಾಗಿದೆ. ಹೀಗಾಗಿ ಬಸ್ ದರ ಹೆಚ್ಚಳ ಮಾಡುತ್ತಿದ್ದಾರೆ ಎಂದು ಹೇಳಿದರು.
Advertisement
ಸಂಪುಟ ಪುನಾರಚನೆ ವಿಚಾರವಾಗಿ, ಖಾಲಿ ಇರುವ ಹುದ್ದೆ ಮಾತ್ರ ಭರ್ತಿ ಎಂದು ಸಿಎಂ ಹೇಳಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಬಗ್ಗೆ ಅಪಾರ್ಥ ಕಲ್ಪಿಸೋದು ಬೇಡ. ನಿನ್ನೆ ಕ್ಯಾಬಿನೆಟ್ ನಂತರ ಎಲ್ಲರನ್ನು ಊಟಕ್ಕೆ ಕರೆದಿದ್ದರು. ಬೆಂಗಳೂರಿನಲ್ಲಿ ಇದ್ದವರು ಊಟ ಮಾಡಿ ಬಂದಿದ್ದಾರೆ. ಇನ್ನೂ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಪ್ರಹ್ಲಾದ್ ಜೋಶಿ ಸಹೋದರನ ಮೇಲೆ ಆರೋಪ ಬಂದಿತ್ತು. ಹಾಗಂತ ಪ್ರಹ್ಲಾದ್ ಜೋಶಿ ರಾಜೀನಾಮೆ ನೀಡಿದ್ರಾ? ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಿದ್ರಾ? ಸರ್ಕಾರದ ಬಗ್ಗೆ ಮಾತನಾಡೋಕೆ ಬಿಜೆಪಿಯವರಿಗೆ ಏನು ಸಿಗ್ತಿಲ್ಲ. ಹೀಗಾಗಿ ಹೆಸರೇ ಇಲ್ಲದೇ ಇದ್ದರೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಸಿಎಂ ಇರಲಿ, ಡಿಸಿಎಂ ಆಗಿಯೂ ಡಿಕೆಶಿ ಉಳಿಯಲ್ಲ: ಶಹಜಾದ್ ಪೂನಾವಾಲಾ