ಗದಗ: ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ (Waqf Board) ಭೂ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ವಕ್ಫ್ ಬೋರ್ಡ್ ವಿರುದ್ಧ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ರೈತರು ಸೇರಿಕೊಂಡು ಗದಗ-ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು, ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
6ನೇ ವಿಕ್ರಮಾದಿತ್ಯನ ಕಾಲದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ (Someshwara Temple) ಜಮೀನು ವಕ್ಫ್‌ಗೆ ಸೇರಿಸುವ ಹುನ್ನಾರ ನಡೆಸಿದ್ದಾರೆ. ಇದು ಸಂಸ್ಕೃತ ವಿಶ್ವವಿದ್ಯಾಲಯ ಕೇಂದ್ರವಾಗಿತ್ತು. ಕವಿ ಚಾಮರಸಾ ಬರೆದ ಪ್ರಭುಲಿಂಗಲೀಲೆ ಪುರಾಣ ಇದೇ ದೇವಸ್ಥಾನದಲ್ಲಿ ಬರೆದಿರುವ ಇತಿಹಾಸವಿದೆ. ಅಂತಹ ಐತಿಹಾಸಿಕ ದೇವಸ್ಥಾನದ ಭೂಮಿಯನ್ನು ವಕ್ಫ್‌ಗೆ ಪರಭಾರೆ ಮಾಡಲು ಹೊರಟಿರುವುದು ಖಂಡನೀಯ. ಇದನ್ನೂ ಓದಿ: ಮಹಿಳೆಯರಿಗೆ ಫ್ರೀ ಬಸ್ ಕೊಟ್ಟರು, ಪಾಪ ಪುರುಷರಿಗೆ ಏನ್ ಮಾಡಿದ್ರು? – ಸರ್ಕಾರಕ್ಕೆ ನಟಿ ತಾರಾ ಪ್ರಶ್ನೆ
ಗೆಜೆಟ್‌ನಲ್ಲಿ ಸೋಮೇಶ್ವರ ದೇವಸ್ಥಾನಕ್ಕೆ ಸೇರಿದ ಸರ್ವೆ ನಂ.562 ರ 12 ಎಕರೆ 22 ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ಎಲ್ಲದರಿಂದ ಆಕ್ರೋಶಕ್ಕೆ ಒಳಗಾದ ಜನರು ರಾಜ್ಯ ಹೆದ್ದಾರಿ ತಡೆದು ವಕ್ಫ್ ಬೋರ್ಡ್, ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹಾಗೂ ರಾಜ್ಯ ಸರ್ಕಾರದ ವಿರುಧ್ಧ ಧಿಕ್ಕಾರ ಕೂಗಿದರು. ನಡು ರಸ್ತೆಯಲ್ಲೇ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ – ತಾಯಿ, ಮಗಳಿಗೆ ಗಂಭೀರ ಗಾಯ
ಗಂಟೆ ಗಟ್ಟಲೆ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತವು. ಕೆಲಕಾಲ ವಾಹನ ಸವಾರರು ಪರದಾಡಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಗದಗ ತಹಶೀಲ್ದಾರ್‌ಗೆ ಸ್ಥಳಿಯರು ತರಾಟೆಗೆ ತೆಗೆದುಕೊಂಡರು. ಸೋಮೇಶ್ವರ ದೇವಸ್ಥಾನದ ಜಾಗ ವಕ್ಫ್ ಹೇಗೆ ಆಯಿತು? ಶೀಘ್ರದಲ್ಲೇ ಇದನ್ನು ರದ್ದು ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬೀದಿ ನಾಯಿ ಜೊತೆ ಅಸಭ್ಯ ವರ್ತನೆ – ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು
ಈ ವೇಳೆ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಧರ್ ಕುಲಕರ್ಣಿ ಸೇರಿದಂತೆ ಅನೇಕ ಸಂಘಟಿಕರು, ಸೋಮೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು, ರೈತರು ಉಪಸ್ಥಿತರಿದ್ದರು. ಇದನ್ನೂ ಓದಿ: ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ-‘ದಿ ಟಾಸ್ಕ್’ನಲ್ಲಿ ನವಪ್ರತಿಭೆಗಳ ಸಂಗಮ