ಗದಗ: ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿನಿಯರು (Student) ಮುಖ್ಯ ಶಿಕ್ಷಕಿಯನ್ನು (Head Teacher) ಕೂಡಿ ಹಾಕಿ, ಶಾಲೆ ಕೊಠಡಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗದಗ (Gadag) ಜಿಲ್ಲೆಯ ಗಜೇಂದ್ರಗಢ ಪಟ್ಟಣದಲ್ಲಿ ನಡೆದಿದೆ.
ಜಿಲ್ಲೆಯ ಗಜೇಂದ್ರಗಢ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಮುಖ್ಯ ಶಿಕ್ಷಕಿ ಅನ್ನಪೂರ್ಣ ರಾಠೋಡ್ ಎಂಬುವವರನ್ನು ಕೂಡಿಹಾಕಿದ್ದಾರೆ. ಶಿಕ್ಷಕಿ ಅನ್ನಪೂರ್ಣ ಅವರು ವಿದ್ಯಾರ್ಥಿಗಳಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಮನಬಂದಂತೆ ಹೊಡೆದು ಚಿತ್ರಹಿಂಸೆ ಕೊಡುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಪಾಲಕರು ಶಿಕ್ಷಕಿಯನ್ನು ಪ್ರಶ್ನಿಸಲು ಬಂದರೆ, ನಿಮ್ಮ ಮಕ್ಕಳು ನಮಗೆ ಗೊತ್ತಿಲ್ಲ, ಒಳಗೆ ಬರಬೇಡಿ, ಕಂಪೌಂಡ್ ಹೊರಗೆ ನಿಂತು ಮಾತನಾಡಿ ಎಂದು ಉಡಾಫೆ ಉತ್ತರಗಳನ್ನು ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
Advertisement
Advertisement
ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿ ಅನ್ನಪೂರ್ಣ ದುರಾಡಳಿತದಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಒಟ್ಟಾಗಿ ಕ್ಲಾಸ್ ಬಹಿಷ್ಕರಿಸಿ, ಅವರನ್ನು ಕೂಡಿ ಹಾಕಿ ಶಾಲಾ ಕೊಠಡಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಪಾಲಕರು ಸಹ ಸಾಥ್ ನೀಡಿದರು. ಅಷ್ಟೇ ಅಲ್ಲದೇ ನನ್ನ ವಿಷಯ ನಿಮ್ಮ ಪಾಲಕರಿಗೆ ತಿಳಿಸಿದರೇ ಆ ವಿದ್ಯಾರ್ಥಿನಿ ಹೆಸರು ಹಾಗೂ ಆ ಪಾಲಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದರಂತೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬೇಕೇ ಬೇಕು ನ್ಯಾಯ ಬೇಕು, ಈ ಹೆಡ್‍ಮಾಸ್ಟರ್ ಬೇಡ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು. ಇದನ್ನೂ ಓದಿ: ಮೂಡಿಗೆರೆ ಬಿಜೆಪಿ ಶಾಸಕ ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ
Advertisement
Advertisement
ಈ ಬಗ್ಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದ ಬಿಇಓ ಗಾಯತ್ರಿ ಸಜ್ಜನ್ ವಿರುದ್ಧ ಸಹ ಘೋಷಣೆ ಕೂಗಿದರು. ಕೂಡಲೇ ಸ್ಥಳಕ್ಕೆ ಡಿಡಿಪಿಐ, ಬಿಇಓ, ತಹಶೀಲ್ದಾರ್ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ಕೂಡಲೇ ಮುಖ್ಯ ಶಿಕ್ಷಕಿ ಅನ್ನಪೂರ್ಣಳನ್ನು ಅಮಾನತು ಮಾಡುವಂತೆ ವಿದ್ಯಾರ್ಥಿನಿಗಳು ಹಾಗೂ ಪಾಲಕರ ಆಗ್ರಹಿಸಿದರು. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಎಸ್‌ಡಿಪಿಐ ಟಿಕೆಟ್ – ಜೈಲಿನಿಂದಲೇ ಸ್ಪರ್ಧೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k