ತುಮಕೂರು: ಕರ್ತವ್ಯ ಲೋಪ (Dereliction Of Duty) ಎಸಗಿದ ಹಿನ್ನೆಲೆ ಮೂವರು ಪಿಎಸ್‌ಐ (PSI) ಸೇರಿ ಒಟ್ಟು ಐವರು ಪೊಲೀಸರನ್ನು (Police) ತುಮಕೂರು (Tumakuru) ಎಸ್ಪಿ ಕೆವಿ ಅಶೋಕ್ ಅಮಾನತುಗೊಳಿಸಿ (Suspension) ಆದೇಶ ಹೊರಡಿಸಿದ್ದಾರೆ.
ತುರುವೇಕೆರೆ (Turuvekere) ಠಾಣಾ ಪಿಎಸ್‌ಐಗಳಾದ ಗಣೇಶ್ ಹಾಗೂ ರಾಮಚಂದ್ರ ಮತ್ತು ಹೆಡ್‌ಕಾನ್ಸ್ಟೇಬಲ್ ರಘುನಂದನ್ ಅವರನ್ನು ಅಮಾನತು ಮಾಡಲಾಗಿದೆ. ಮಹಿಳೆಯೊಬ್ಬರು ನಾಪತ್ತೆಯಾದ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳದೇ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ – ಕುಡಿದು ವಾಹನ ಚಾಲನೆ ಮಾಡಿದ್ರೆ ಜಪ್ತಿಯಾಗುತ್ತೆ ವಾಹನ
Advertisement
Advertisement
ಇನ್ನೊಂದು ಪ್ರಕರಣದಲ್ಲಿ ಬಡವನಹಳ್ಳಿ ಠಾಣಾ ಪಿಎಸ್‌ಐ ನಾಗರಾಜು ಹಾಗೂ ಎಎಸ್‌ಐ ಸುರೇಶ್ ಅವರನ್ನು ಅಮಾನತು ಮಾಡಲಾಗಿದೆ. ದಲಿತರ ಮೇಲೆ ಸವರ್ಣಿಯರು ಹಲ್ಲೆ ಮಾಡಿದ್ದ ದೂರನ್ನು ದಾಖಲಿಸದೇ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಎಸ್ಪಿ ಅಶೋಕ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ಕೊರಿಯರ್‌ಗಳು ಅಂಚೆ ಕಚೇರಿ ಕಾಯ್ದೆ ವ್ಯಾಪ್ತಿಗೆ – ಇನ್ಮುಂದೆ ಸರ್ಕಾರವೂ ನಿಮ್ಮ ಪತ್ರಗಳನ್ನು ತೆರೆದು ನೋಡ್ಬೋದು