ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ಈಗ ಕಮಿಷನ್ (Commission) ಆರೋಪ ಕೇಳಿ ಬಂದಿದೆ. ಇದರಿಂದ ಸರ್ಕಾರದ ಮೌಖಿಕ ಆದೇಶ ಎಂಬ ಹೆಸರಿನಲ್ಲಿ ಕಮಿಷನ್ ವಸೂಲಿ ಶುರುವಾಗಿದೆಯಾ ಎಂಬ ಅನುಮಾನ ಕೂಡ ದಟ್ಟವಾಗಿದೆ.
ಸೆಸ್ಕಾಂ (SESCOM) ವ್ಯವಸ್ಥಾಪಕ ನಿರ್ದೇಶಕರಿಂದಲೇ (MD) ಕಮಿಷನ್ ಸಂಗ್ರಹ ಆರೋಪವಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ (Siddaramaiah) ತವರು ಜಿಲ್ಲೆಯಲ್ಲೇ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಕೇಳಿ ಬಂದಿದೆ. ವಿದ್ಯುತ್ ಗುತ್ತಿಗೆದಾರ (Contractor) ಸಂಘದ ಸದಸ್ಯ ಮಂಜುನಾಥ್ ಈ ಗಂಭೀರ ಆರೋಪ ಮಾಡಿದ್ದಾರೆ. ಸಂಪುಟದ ಆದೇಶವಿದ್ದರೂ ಗುತ್ತಿಗೆದಾರರಿಗೆ ಕೆಲಸ ಕೊಡಲು ಮೀನಮೇಷ ಮಾಡಲಾಗುತ್ತಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆಗೆ ನೀಡಿದ್ದ ಗಡುವು ಅಂತ್ಯ – ಕೋರ್ಟ್‌ಗೆ ವರದಿ?
Advertisement
Advertisement
2022-23ನೇ ಸಾಲಿನಲ್ಲಿ ಕೃಷಿ ನೀರಾವರಿ ಪಂಪ್‌ಸೆಟ್‌ಗಳ ಅಕ್ರಮ ಸಕ್ರಮ ವಿಚಾರವಾಗಿ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆ ಕೂಡ ಮುಕ್ತಾಯವಾಗಿದ್ದು, ಈಗ ಸರ್ಕಾರದ ಮೌಖಿಕ ಆದೇಶ ಇದೆ ಎಂದು ಸೆಸ್ಕಾಂ ಎಂಡಿ ಎಂ.ಶ್ರೀಧರ್ ಅದನ್ನು ತಡೆ ಹಿಡಿದಿದ್ದಾರೆ. ಇದರ ಹಿಂದೆ ಕಮಿಷನ್ ಹೆಚ್ಚಿಸಿಕೊಳ್ಳುವ ಉದ್ದೇಶವಿದೆ. ಮೂರನೇ ವ್ಯಕ್ತಿಗಳನ್ನು ಬಿಟ್ಟು ಕಮಿಷನ್‌ಗೆ ಒತ್ತಡವಿದೆ ಎಂದು ಮಂಜುನಾಥ್ ಆರೋಪಿಸಿದ್ದಾರೆ. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಮಾಸ್ಟರ್ ಪ್ಲ್ಯಾನ್ – ಏನಿದು ರ‍್ಯಾಟ್‌ಹೋಲ್ ಮೈನಿಂಗ್?
Advertisement