ಹುಬ್ಬಳ್ಳಿ: ಅದ್ಯಾಕೋ ಏನು ಗುತ್ತಿಗೆದಾರರಿಗೆ ಮತ್ತು ಬಿಜೆಪಿ ಸರ್ಕಾರ (BJP Government) ಕ್ಕೆ ಸರಿಬರುತ್ತಿಲ್ಲ. 40% ಕಮಿಷನ್ ದಂಧೆ ಹೊರಬಂದು ಬಿಜೆಪಿ ನಾಯಕರು ರಾಜ್ಯದ ಜನತೆ ಮುಂದೆ ತಲೆ ತಗ್ಗಿಸುವಂತಾಯಿತು. ಈಗ ಇಂತದ್ದೇ ಮತ್ತೊಂದು ಪ್ರಕರಣ ಹೊರಬಂದಿದ್ದು, 40% ಕಮಿಷನ್ ಬೇಡಿಕೆ ವಿಚಾರ ರಾಷ್ಟ್ರಪತಿ (Presidemt) ಭವನ ತಲುಪಿದೆ. ಇಷ್ಟೇ ಅಲ್ಲದೇ ಗುತ್ತಿಗೆದಾರ ದಯಾಮರಣಕ್ಕೂ ಬೇಡಿಕೊಂಡಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರಕ್ಕೂ 40% ಕಮೀಷನ್‍ಗೂ ಬಿಡಿಸಲಾರದ ನಂಟು ಅನಿಸುತ್ತೆ. ಈ ಮಾತನ್ನ ಹೇಳೊಕೆ ಈಗ ಮತ್ತೊಂದು ಪುರಾವೆ ಸಿಕ್ಕಿದೆ. ಕೈನಿಂದ ಬಂಡವಾಳ ಹಾಕಿ ಮಾಡಿದ್ದ ಕಾಮಗಾರಿಗೆ ಬಿಲ್ ಆಗದೆ ಮಾನನೊಂದ ಗುತ್ತಿಗೆದಾರನೊಬ್ಬ ನೇರವಾಗಿ ಪ್ರಧಾನಿ ಮೋದಿ (Narendra Modi) ಅವರ ಮೊರೆಹೋಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಗುತ್ತಿಗೆದಾರ ಎ.ಬಸವರಾಜು 2020-21ರಲ್ಲಿ ಕೋವಿಡ್ ಪರಿಕರಗಳನ್ನ ಸರಬರಾಜು ಮಾಡಿದ್ದರು. ಅದರಲ್ಲಿ ಮೂಡಗೆರಿ ತಾಲೂಕಿಗೆ 27 ಲಕ್ಷ ಕಡೂರು ತಾಲೂಕಿಗೆ 85 ಲಕ್ಷ ರೂಪಾಯಿಯ ಪರಿಕರ ಪೂರೈಕೆ ಮಾಡಿದ್ದರು. ಆದರೆ ಪರಿಕರ ಸರಬರಾಜು ಮಾಡಿ 2ವರ್ಷ ಗತಿಸಿದರೂ ಬಿಲ್ ಪಾವತಿ ಮಾತ್ರ ಆಗಿಲ್ಲ. ಇದಕ್ಕೆ ಕಾರಣ ಕಮೀಷನ್ ಕರಾಳತೆ. ಇದನ್ನೂ ಓದಿ: ಇನ್ಮುಂದೆ KSRTCಯಲ್ಲಿ ನಾಯಿ ಕೊಂಡೊಯ್ದರೆ ಫುಲ್, ನಾಯಿ ಮರಿಯಾದರೆ ಹಾಫ್ ಟಿಕೆಟ್
ಹೌದು, ಬಸವರಾಜುಗೆ ಬರಬೇಕಾದ ಬಿಲ್ ಪಾವತಿ ಮಾಡಲು ಇಓ ಕಮಿಷನ್‍ಗೆ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಅಲ್ಲದೆ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ ಹೆಸರಿನಲ್ಲಿ 40 ಪರ್ಸಂಟೇಜ್‍ಗಿಂತ ಹೆಚ್ಚಿನ ಹಣಕ್ಕೆ ಕಡೂರು ಇಓ ದೇವರಾಜ್ ನಾಯಕ್ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ಬಸವರಾಜ್‍ಗೆ ಸಾಲಗಾರರ ಕಾಟ ಸಹ ಹೆಚ್ಚಾಗಿದ್ದು, ಇದ್ರಿಂದ ಮಾನಸಿಕವಾಗಿ ನೊಂದ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಅರ್ಜಿ ಬರೆದಿದ್ದಾರೆ.
ಈ ಅರ್ಜಿ ಜೊತೆಗೆ ಕಾಮಗಾರಿಯ ಎಲ್ಲಾ ದಾಖಲೆ ಮತ್ತು ಪರ್ಸಂಟೇಜ್‍ಗಾಗಿ ಬೇಡಿಕೆ ಇಟ್ಟ ಆಡಿಯೋ ರೆಕಾಡ್ರ್ನನನ್ನು ರಿಜಿಸ್ಟರ್ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಪ್ರಕರಣ ರಾಜ್ಯದಲ್ಲಿ ಮತ್ಯಾವ ರೀತಿಯ ಸಂಚಲನ ಹುಟ್ಟು ಹಾಕುತ್ತೆ ಅಂತ ಕಾದುನೋಡಬೇಕು.