ಬಿಗ್ ಬಾಸ್ (Big Boss) ಶೋ ಮೇಲೆಯೇ ಪಕ್ಷಪಾತದ ಆರೋಪ ಮಾಡಿದ್ದಾರೆ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿ ಆಲಿಯಾ ಸಿದ್ದಿಕಿ (Alia Siddiqui). ಅವರು ನೇರವಾಗಿ ಸಲ್ಮಾನ್ ಖಾನ್ ಮೇಲೆಯೇ ಗೂಬೆ ಕೂರಿಸಿದ್ದು, ನನ್ನೊಳಗಿನ ಹಲವು ಸತ್ಯಗಳು ಆಚೆ ಬರುತ್ತಿದ್ದವು. ಅದು ಸಲ್ಮಾನ್ ಖಾನ್ ಗೆ ಇಷ್ಟವಿರಲಿಲ್ಲ. ಹಾಗಾಗಿ ಎರಡನೇ ವಾರಕ್ಕೆ ನನ್ನನ್ನು ಮನೆಯಿಂದ ಆಚೆ ಹಾಕಿದರು ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ.
ಆಲಿಯಾ ಸಿದ್ದಿಕಿ ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರ ಮಾಜಿ ಪತ್ನಿ. ನವಾಜುದ್ದೀನ್ ಅವರು ಸಲ್ಮಾನ್ ಖಾನ್ (Salman Khan)ಗೆ ತೀರಾ ಆಪ್ತರು. ಬಿಗ್ ಬಾಸ್ ಮನೆಯಲ್ಲಿ ಪತಿ ನವಾಜುದ್ದೀನ್ ಬಗ್ಗೆ ಹಲವಾರು ವಿಚಾರಗಳನ್ನು ಮಾತನಾಡುವುದಕ್ಕೆ ಶುರು ಮಾಡಿದ್ದರು. ತಮ್ಮ ಪತಿ ಎಂಥವರು ಎನ್ನುವ ವಿಚಾರವನ್ನು ಹೇಳಿಕೊಳ್ಳಲು ಹೊರಟಿದ್ದರು. ಅದನ್ನು ತಡೆಯುವುದಕ್ಕಾಗಿಯೇ ತಮ್ಮನ್ನು ಮನೆಯಿಂದ ಆಚೆ ಹಾಕಲಾಗಿದೆ ಎಂದು ಆಲಿಯಾ ಮಾತನಾಡಿದ್ದಾರೆ. ಇದನ್ನೂ ಓದಿ:ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಜೊತೆ ಕನ್ನಡಿಗ ಡ್ಯಾನಿಶ್ ನಟನೆ
ನವಾಜುದ್ದೀನ್ ಜೊತೆಗಿನ ಬಾಂಧವ್ಯವನ್ನು ಮುರಿದುಕೊಂಡು ಆಲಿಯಾ ದೂರವಿದ್ದಾರೆ. ಈಗಾಗಲೇ ಪತಿಯ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಅವೆಲ್ಲವನ್ನೂ ಆಲಿಯಾ ದೊಡ್ಮನೆಯಲ್ಲಿ ಹೇಳಿಕೊಳ್ಳುತ್ತಿದ್ದರು. ಮೊದಲ ದಿನವೇ ಒಂದಷ್ಟು ಸಂಗತಿಗಳನ್ನು ಬಹಿರಂಗ ಪಡಿಸಿದ್ದರು. ಇನ್ನೂ ಹಲವು ವಿಷಯಗಳನ್ನು ಹಂಚಿಕೊಳ್ಳುವುದಾಗಿಯೂ ಅವರು ತಿಳಿಸಿದ್ದರು.
ನವಾಜುದ್ದೀನ್ ವಿಷಯಗಳು ಆಚೆ ಬರುತ್ತವೆ ಎನ್ನುವ ಕಾರಣದಿಂದಾಗಿಯೇ ಸಲ್ಮಾನ್ ಖಾನ್ ಮಧ್ಯ ಪ್ರವೇಶ ಮಾಡಿ ತಮ್ಮನ್ನು ಮನೆಯಿಂದ ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಂತ ನಾನು ಸುಮ್ಮನೆ ಇರಲಾರೆ. ಆಚೆ ಬಂದರೂ, ನನ್ನ ಜೀವನದಲ್ಲಿ ನಡೆದ ಸಂಗತಿಗಳನ್ನು ತಿಳಿಸುತ್ತಲೇ ಇರುತ್ತೇನೆ ಅಂದಿದ್ದಾರೆ ಆಲಿಯಾ. ಇಂತಹ ಪಕ್ಷಪಾತಗಳು ಶೋಗಳಲ್ಲಿ ಇರಬಾರದು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ.
Web Stories