– ದಲಿತ ಮುಖಂಡರ ಆಕ್ರೋಶ
ಚಿತ್ರದುರ್ಗ: ರಾಜ್ಯಾದ್ಯಂತ ವಿವಿಧ ಸಮುದಾಯಗಳ ಆಸ್ತಿಗಳನ್ನು ವಕ್ಫ್ ಕಬಳಿಸುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ಪಟ್ಟಣದಲ್ಲಿ ಸಹ ದಲಿತರ ಆಸ್ತಿ (Dalit Property) ಕಬಳಿಸಲು ವಕ್ಫ್ (Waqf Board) ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.
2023ರಲ್ಲಿ ಚರ್ಮ ಕೈಗಾರಿಕಾ ಪ್ರದೇಶದ ನಾಲ್ಕು ಎಕರೆ ಜಮೀನು, ಜನತಾ ಕಾಲೋನಿ ಹಾಗು ಖಬರಸ್ಥಾನ್‌ನ 30 ಗುಂಟೆ ಜಾಗವನ್ನು ಜಾಮಿಯ ಮಸೀದಿಗೆ ನೀಡುವಂತೆ ನಗರಸಭೆಗೆ ಮನವಿ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಜಯಪುರದಲ್ಲಿ ರೈತರಿಗೆ ನೀಡಿರೋ ನೋಟಿಸ್ ವಾಪಸ್ ಪಡೆಯುತ್ತೇವೆ: ಸಿಎಂ ಘೋಷಣೆ
ಈ ಬಗ್ಗೆ ಚಳ್ಳಕೆರೆಯಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ದಲಿತ ಮುಖಂಡ ಶಿವಮೂರ್ತಿ, ನಮ್ಮ ಜಾಗಗಳನ್ನು ನಾವು ಬಿಟ್ಟು ಕೊಡಲ್ಲ. ರಕ್ತ ಕ್ರಾಂತಿಯಾದರು ನಮ್ಮ ಜಾಗವನ್ನು ಜಾಮಿಯಾ ಮಸೀದಿಗೆ ಬಿಟ್ಟು ಕೊಡಲ್ಲ. ಆ ಜಾಗಗಳು ನಮಗೆ ಮೈಸೂರು ಒಡೆಯರಿಂದ ಬ್ರಿಟೀಷರ ಕಾಲದಲ್ಲೇ ಬಂದಿವೆ. ಆದರೆ ನಾವು ಅಸ್ಪೃಶ್ಯರು, ಅನಕ್ಷರಸ್ತರು, ಅಸಹಾಯಕರು ಎಂದು ಈ ಜಾಗಗಳನ್ನು ಕಬಳಿಸುವ ಯತ್ನ ನಡೆದಿದ್ದು, ಕೋರ್ಟಿಗೆ ಎಳೆದು ದಲಿತರ ಜಾಗ ಕಬಳಿಸುವ ಹುನ್ನಾರವಿದು. ಹೀಗಾಗಿ ಕ್ಷೇತ್ರದ ಶಾಸಕ ರಘುಮೂರ್ತಿ ಹಾಗು ಅಧಿಕಾರಿಗಳು ಈ ಜಾಗವನ್ನು ದಲಿತರಿಗೆ ಉಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ: ಸಿಎಂ