ಬೆಂಗಳೂರು: ಸಿಎಂ ಹೆಸರು ಹಾಳು ಮಾಡಲು ಬಿಜೆಪಿಯವರು (BJP) ಮುಡಾ (MUDA) ಕೇಸ್ನಲ್ಲಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಬೆಂಗಳೂರು ನಗರ ನಿಮ್ಮ ಜಹಗೀರು ಅಂದುಕೊಂಡಿದ್ದೀರಾ? – ಡಿಕೆಶಿ ವಿರುದ್ಧ ಆರ್.ಅಶೋಕ್ ವಾಗ್ದಾಳಿ
Advertisement
ಲೋಕಾಯುಕ್ತ ತನಿಖೆ (Lokayuktha Enquiry) ವಿಚಾರಣೆಗೆ ಸಿಎಂ ಹಾಜರಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಎಲ್ಲದರಲ್ಲಿಯೂ ಸಿಎಂ ಹೆಸರನ್ನು ಹಾಳು ಮಾಡಬೇಕು ಎಂದು ನೋಡುತ್ತಿದ್ದಾರೆ. ಅದಕ್ಕಾಗಿಯೇ ಸಿಎಂ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಕೇಂದ್ರದ ಏಜೆನ್ಸಿಗಳನ್ನು ಬಿಟ್ಟು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮಾಧ್ಯಮದವರು, ರಾಜಕಾರಣಿಗಳು, ಎನ್ಜಿಓ ಯಾರನ್ನು ಬಿಜೆಪಿಯವರು ಬಿಟ್ಟಿಲ್ಲ. ಅಧಿಕಾರ ಬಳಸಿ ಹೆದರಿಕೆ, ಬೆದರಿಕೆ ಹಾಕುತ್ತಿದ್ದಾರೆ. ಇದು ಮೋದಿ ಸರ್ಕಾರ ದೇಶದ ಪರಿಸ್ಥಿತಿ ಎಂದು ಕಿಡಿಕಾರಿದರು.
Advertisement
ತುರ್ತುಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿ ಇವತ್ತು ದೇಶದಲ್ಲಿದೆ. ಇಡಿ, ಐಟಿ ಬಳಸಿಕೊಂಡು ಅವರ ವಿರೋಧಿಗಳನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಅಜೆಂಡಾ ಸಿದ್ದರಾಮಯ್ಯ ಅವರನ್ನು ಮುಗಿಸುವುದು ಎಂದು ಆರೋಪಿಸಿದರು.ಇದನ್ನೂ ಓದಿ: ಕೃಷಿ ಭೂಮಿ ಭೂಸ್ವಾಧೀನ ಮಾಡದಂತೆ ಸಚಿವ ಮುನಿಯಪ್ಪ ಮನೆ ಮುಂದೆ ರೈತರ ಪ್ರತಿಭಟನೆ