ಲಕ್ನೋ: ಕೋವಿಡ್-19 ರೋಗಿ ಆಸ್ಪತ್ರೆಗೆ ದಾಖಲಾದ ಬಳಿಕ ಸಾವನ್ನಪ್ಪಿದರೆ, ಸಾವಿನ ಕಾರಣ ಯಾವುದೇ ಇದ್ದರೂ ಅವರ ಸಾವನ್ನು ಕೋವಿಡ್ ಸಾವು ಎಂದೇ ಪರಿಗಣಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಕೋವಿಡ್ ರೋಗಿಯ ಸಾವಿಗೆ ಕಾರಣ ಹೃದಯಾಘಾತ ಅಥವಾ ಇನ್ನಾವುದೇ ಕಾರಣ ಇದ್ದರೂ ಅದನ್ನು ನಿರ್ಲಕ್ಷಿಸಿ, ಅದನ್ನು ಕೋವಿಡ್ ಸಾವು ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಹಾಕಿಸಿಕೊಂಡವರಿಗೆ ಉಚಿತ ಪುರಿ ಸಾಗು
Advertisement
Advertisement
ನ್ಯಾಯಮೂರ್ತಿ ಎ.ಆರ್ ಮಸೂದಿ ಮತ್ತು ನ್ಯಾಯಮೂರ್ತಿ ವಿಕ್ರಮ್ ಡಿ ಚೌಹಾಣ್ ಅವರ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ನೀಡಿದೆ. ಕೋವಿಡ್-19 ರೋಗಿಯ ಮರಣದ ನಂತರ, ಅವರ ಕುಟುಂಬಕ್ಕೆ 30 ದಿನಗಳ ಒಳಗೆ ಪರಿಹಾರ ಮೊತ್ತವನ್ನು ಪಾವತಿಸಬೇಕು. 1 ತಿಂಗಳಿನಲ್ಲಿ ಪರಿಹಾರ ನೀಡಲು ಸಾಧ್ಯವಾಗದೇ ಹೋದರೆ, ಬಳಿಕ ಶೇ.9 ರಷ್ಟು ಬಡ್ಡಿ ಸೇರಿಸಿ ನೀಡಬೇಕು ಎಂದು ತೀರ್ಪು ನೀಡಿದೆ. ಇದನ್ನೂ ಓದಿ: ಆ.2 ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ನಿಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಿ: ಮೋದಿ
Advertisement
ಕೋವಿಡ್-19 ರೋಗಿಯ ಯಾವುದೇ ಅಂಗದ ಮೇಲೆ ಪರಿಣಾಮ ಬೀರಬಹುದು ಹಾಗೂ ಹಾನಿಯನ್ನು ಉಂಟುಮಾಡಬಹುದು. ಇದರಿಂದಾಗಿ ರೋಗಿಯ ಸಾವಾಗಬಹುದು ಎಂದು ನ್ಯಾಯಾಲಯ ಹೇಳಿದೆ. ಕೋವಿಡ್ ರೋಗಿಯ ಅಂಗಾAಗ ವೈಫಲ್ಯದಿಂದ ಉಂಟಾಗುವ ಸಾವನ್ನು ಪ್ರತ್ಯೇಕ ಕಾರಣ ನೀಡಿ ಪರಿಗಣಿಸಲಾಗುವುದಿಲ್ಲ ಎಂದು ತೀರ್ಮಾನಿಸಿದೆ.