ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯೊಳಗೆ (Gyanvapi Mosque) ಪತ್ತೆಯಾದ ಶಿವಲಿಂಗವನ್ನು (Shivling) ಕಾರ್ಬನ್ ಡೇಟಿಂಗ್ (Carbon Dating) ಸೇರಿದಂತೆ ವೈಜ್ಞಾನಿಕ ಸಮೀಕ್ಷೆಗೆ (Scientific Survey) ಒಳಪಡಿಸುವಂತೆ ಅಲಹಬಾದ್ ಹೈಕೋರ್ಟ್ (Allahabad High Court) ಶುಕ್ರವಾರ ಆದೇಶಿಸಿದೆ.
ಅಲಹಬಾದ್ ಹೈಕೋರ್ಟ್ ಶುಕ್ರವಾರ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಜ್ಞಾನವಾಪಿ ಮಸೀದಿಯೊಳಗೆ ಪತ್ತೆಯಾಗಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಅನುಮತಿ ನೀಡಿದೆ.
Advertisement
Advertisement
ಕಳೆದ ವರ್ಷ ಜ್ಞಾನವಾಪಿ ಮಸೀದಿಯ ಆವರಣದೊಳಗೆ ವೀಡಿಯೋ ಸಮೀಕ್ಷೆಯನ್ನು ನಡೆಸಲಾಗಿತ್ತು. ಈ ವೇಳೆ ಶಿವಲಿಂಗದAತಹ ಆಕೃತಿಯೊಂದು ಪತ್ತೆಯಾಗಿದ್ದು, ಬಳಿಕ ಭಾರೀ ವಿವಾದಕ್ಕೆ ಕಾರಣವಾಯಿತು. ಹಿಂದೂ ಕಡೆಯವರು ಪತ್ತೆಯಾದ ಆಕೃತಿಯನ್ನು ಶಿವಲಿಂಗ ಎಂದು ಹೇಳಿಕೊಂಡರೆ ಮುಸ್ಲಿಂ ಕಡೆಯವರು ಇದು ಕಾರಂಜಿ ಎಂದು ವಾದಿಸಿದರು. ಬಳಿಕ ಆ ಆಕೃತಿಯನ್ನು ವೈಜ್ಞಾನಿಕ ಸಮೀಕ್ಷೆಗೆ ಒಳಪಡಿಸಬೇಕು ಎಂದು ಹಿಂದೂ ಪರ ಅರ್ಜಿದಾರರು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸಿಬಿಐನಿಂದ ಭ್ರಷ್ಟಾಚಾರ ಕೇಸ್ ದಾಖಲು
Advertisement
Advertisement
ಮಸೀದಿ ಸಂಕೀರ್ಣದೊಳಗಿನ ದೇಗುಲದಲ್ಲಿ ವರ್ಷಪೂರ್ತಿ ಪೂಜೆ ಮಾಡಲು 5 ಹಿಂದೂ ಮಹಿಳೆಯರು ಮನವಿ ಮಾಡಿಕೊಂಡಿದ್ದರು. 5 ಅರ್ಜಿದಾರರಲ್ಲಿ ನಾಲ್ವರು ಶಿವಲಿಂಗ ಎಷ್ಟು ವರ್ಷ ಹಳೆಯದು ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾರ್ಬನ್ ಡೇಟಿಂಗ್ ಒಳಗೊಂಡAತೆ ವೈಜ್ಞಾನಿಕ ತನಿಖೆ ನಡೆಸುವಂತೆ ಕೋರಿಕೊಂಡಿದ್ದರು. ಇದನ್ನೂ ಓದಿ: ಫಲಿತಾಂಶ ಹೊರಬೀಳುವ ಹೊತ್ತಿನಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್ – ವಿದ್ಯುತ್ ದರ ಹೆಚ್ಚಳ