ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ಬೇಸತ್ತಿರುವ ಪಾಕಿಸ್ತಾನದ (Pakistan) ಪ್ರಜೆಯೊಬ್ಬರು ಇದೀಗ `ಅಲ್ಲಾ (Allah) ಮೋದಿಯನ್ನು (Narendra Modi) ನಮಗೆ ಕೊಡು, ಅವರೇ ನಮ್ಮ ದೇಶವನ್ನಾಳಲಿ’ ಎಂದು ದೇವರ ಮೊರೆ ಹೋಗಿರುವ ಪ್ರಸಂಗವೊಮದು ನಡೆದಿದೆ.
Advertisement
ಹೌದು. ವಿಶ್ವದಾದ್ಯಂತ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನಪ್ರಿಯತೆ ಹೆಚ್ಚಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದ ಪ್ರಜೆಯೊಬ್ಬ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಹಾಡಿಹೊಗಳಿದ ವೀಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು – ನಮ್ಮ ದೇಶ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ
Advertisement
“Hamen Modi Mil Jaye bus, Na hamen Nawaz Sharif Chahiye, Na Imran, Na Benazir chahiye, General Musharraf bhi nahi chahiye”
Ek Pakistani ki Khwahish ???? pic.twitter.com/Wbogbet2KF
— Meenakshi Joshi ( मीनाक्षी जोशी ) (@IMinakshiJoshi) February 23, 2023
Advertisement
ಸ್ವತಃ ತಮ್ಮ ದೇಶದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಮೋದಿ ಅವರೇ ಪಾಕಿಸ್ತಾನವನ್ನು ಆಳುತ್ತಿದ್ದರೆ ಚೆನ್ನಾಗಿರುತ್ತಿತ್ತು. ಮೋದಿ ಪಾಕ್‌ನಲ್ಲಿ ಇದ್ದಿದ್ದರೇ ಸಮಂಜಸವಾದ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಬಹುದಿತ್ತು ಎಂದು ಅಲವತ್ತುಕೊಂಡಿದ್ದಾರೆ. ಇದನ್ನೂ ಓದಿ: ಯೋಧರಿಗೆ ಆಹಾರ ನೀಡಲು ಒದ್ದಾಡುತ್ತಿದೆ ಪಾಕ್!
Advertisement
ಪಾಕಿಸ್ತಾನವು ಭಾರತದಿಂದ ಬೇರ್ಪಟ್ಟಿಲ್ಲ ಎಂದು ನಾನು ಭಾವಿಸುತ್ತೇನೆ. ನಾವಿಲ್ಲಿ ಟೊಮೆಟೋವನ್ನ ಕೆ.ಜಿ 20 ರೂ., 1 ಕೆಜಿ ಕೋಳಿ 150 ರೂ. ಮತ್ತು ಪೆಟ್ರೋಲ್‌ಗೆ 1 ಲೀಟರ್ 50 ರೂ.ಗೆ (ಪಾಕಿಸ್ತಾನದ ರೂಪಾಯಿ ದರದಲ್ಲಿ) ಖರೀದಿಸುತ್ತೇವೆ ಎಂದಿದ್ದಾರೆ.
ನಾವು ಇಸ್ಲಾಂ ರಾಷ್ಟ್ರವನ್ನು ಪಡೆದಿರುವುದು ದುರದೃಷ್ಟಕರ, ಇಲ್ಲಿ ಇಸ್ಲಾಂ ಅನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. `ಅಲ್ಲಾ ನಮಗೆ ಮೋದಿ ಸಿಕ್ಕರೇ ಸಾಕು ನವಾಜ್ ಷರೀಫ್, ಇಮ್ರಾನ್‌ಖಾನ್, ಬೆನಜೀರ್, ಜನರಲ್ ಮುಷರಫ್ ಯಾರೊಬ್ಬರೂ ಬೇಡ. ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರ ಆಡಳಿತದಲ್ಲಿ ಬದಕುಲು ನಾವು ಬಯಸುತ್ತೇವೆ. ಮೋದಿ ಎಲ್ಲ ರೀತಿಯ ಅಂಶಗಳನ್ನು ನಿಭಾಯಿಸುತ್ತಿದ್ದಾರೆ. ಆದ್ದರಿಂದಲೇ ಭಾರತ ಆರ್ಥಿಕತೆಯಲ್ಲಿ ವಿಶ್ವದ 5ನೇ ಅತಿದೊಡ್ಡ ರಾಷ್ಟ್ರವಾಗಿದೆ. ಅದಕ್ಕಾಗಿ `ಅಲ್ಲಾ ಮೋದಿಯನ್ನು ನಮಗೆ ನೀಡಿ, ಅವರೇ ನಮ್ಮ ದೇಶವನ್ನು ಆಳಲಿ’ ಎಂದು ನಾನು ಸರ್ವಶಕ್ತನನ್ನ ಪ್ರಾರ್ಥಿಸುವುದಾಗಿ ಭಾವುಕರಾಗಿದ್ದಾರೆ.
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಸ್ವತಃ ರಕ್ಷಣಾ ಸಚಿವರೇ ನಗದು ಕೊರತೆಯಿಂದ ನಮ್ಮ ದೇಶ ದಿವಾಳಿಯಾಗಿದೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k