ಬಿಗ್ ಬಾಸ್ ಮನೆಯ ವಿಡಿಯೋ ತುಣುಕೊಂದನ್ನು ಕಲರ್ಸ್ ವಾಹಿನಿಯು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದೆ. ಅದು ಆರ್ಯವರ್ಧನ್ ಗುರೂಜಿಗೆ ಸಂಬಂಧಿಸಿದ ವಿಡಿಯೋ. ಬಿಗ್ ಬಾಸ್ ಮನೆಯಲ್ಲಿ ಇದ್ದವರಿಗೆ ಟಾಸ್ಕ್ ಹೇಗೆ ಗೆಲ್ಲೋದು ಎನ್ನುವುದು ಚಿಂತೆಯಾದರೆ, ಆರ್ಯವರ್ಧನ್ ಗುರೂಜಿದ್ದು ತಮ್ಮ ಹೊಟ್ಟೆಯನ್ನು ಹೇಗೆ ಕರೆಗಿಸೋದು ಎನ್ನುವ ಚಿಂತೆ. ಹಾಗಾಗಿಯೇ ಯಾವಾಗಲೂ ತಮ್ಮ ಹೊಟ್ಟೆಯನ್ನು ಅಲ್ಲಾಡಿಸುತ್ತಾ ಅದನ್ನು ಕರಗಿಸೋ ಪ್ರಯತ್ನ ಮಾಡುತ್ತಲೇ ಇರುತ್ತಾರೆ.
ಒಂದು ಸಲ ಅಂಗಾತ ಮಲಗಿಕೊಂಡು ಹೊಟ್ಟೆ ಅಲ್ಲಾಡಿಸಿದರೆ, ಮತ್ತೊಂದು ಸಲ ಸೈಡ್ ಗೆ ಮಲಗಿ ಹೊಟ್ಟೆಯನ್ನು ಮುಟ್ಟಿಕೊಳ್ಳುತ್ತಾರೆ. ಇಂತಹ ಹೊಟ್ಟೆ ಇರುವ ಕಾರಣದಿಂದಾಗಿಯೇ ತಮಗೆ ಪದೇ ಪದೇ ಅಡುಗೆ ಮನೆ ನೆನಪಾಗುತ್ತಿದೆ ಎಂದು ಹೇಳುತ್ತಾರೆ. ಅವರಿಗೆ ಹೊಟ್ಟೆಯದ್ದೇ ಬಹುದೊಡ್ಡ ಚಿಂತೆಯಾಗಿದೆ. ಏನಾದರೂ ಮಾಡಿ, ಇದನ್ನು ಕರಗಿಸಲೇಬೇಕಲ್ಲ ಎಂದು ಪಣತೊಟ್ಟಿರುವ ರೀತಿಯಲ್ಲಿ ಹೊಟ್ಟೆಯನ್ನು ಸದಾ ಮುಟ್ಟಿಕೊಂಡು ಅಲ್ಲಾಡಿಸ್ತಾ ಇರುತ್ತಾರೆ. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್
ಕೇವಲ ಆರ್ಯವರ್ಧನ್ ಗುರೂಜಿಗೆ ಮಾತ್ರ ಹೊಟ್ಟೆ ಬಗ್ಗೆ ಯೋಚನೆ ಇಲ್ಲ. ಸಹ ಸ್ಪರ್ಧಿಗಳು ಕೂಡ ಗುರೂಜಿ ಹೊಟ್ಟೆಯ ಬಗ್ಗೆಯೇ ಮಾತಾಡುವಂತಾಗಿದೆ. ಕೆಲವರು ಆರ್ಯವರ್ಧನ್ ಅವರ ಡೊಳ್ಳು ಹೊಟ್ಟೆನ್ನು ಮುಟ್ಟಿ, ಏನ್ ಸಖತ್ತಾಗಿ ಬೆಳೆಸಿದ್ದೀರಿ ಸರ್ ಎಂದು ತಮಾಷೆ ಮಾಡುತ್ತಾರೆ. ಹೊಟ್ಟೆ ಮುಟ್ಟಿ ಮುಟ್ಟಿ ತಮಾಷೆ ತಗೆದುಕೊಳ್ಳುತ್ತಾರೆ. ಏನೇ ಇರಲಿ, ಪಾಪ ಅಂತಹ ಹೊಟ್ಟೆ ಇಟ್ಟುಕೊಂಡು ಗುರೂಜಿ ಸಖತ್ ಆಗಿಯೇ ಆಟ ಆಡುತ್ತಿದ್ದಾರೆ.