ದೇವಸ್ಥಾನ: ಮುಕ್ತಿ ಗುಹೇಶ್ವರ ದೇವಾಲಯ (ಶಿವದೇವಾಲಯ)
ಸ್ಥಳ: ಮಿಂಟೋ, ಆಸ್ಟ್ರೇಲಿಯಾ
ಪ್ರವೇಶ: ಉಚಿತ
ಪ್ರವೇಶ ಸಮಯ: ಬೆಳಗ್ಗೆ 10 ರಿಂದ 12 ಗಂಟೆ
ಸಂಜೆ 5 ರಿಂದ 7 ಗಂಟೆ
ವಾರಾಂತ್ಯ & ರಜಾದಿನಗಳಲ್ಲಿ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆ
ಭೇಟಿಗೆ ಸೂಕ್ತ ಸಮಯ: ಫೆಬ್ರವರಿಯಿಂದ ಮಾರ್ಚ್ ಮಹಾ ಶಿವ ರಾತ್ರಿ ಅಥವಾ ಮಾರ್ಚ್ ನಿಂದ ಏಪ್ರಿಲ್ ಗಣೇಶ ಚತುರ್ಥಿಯ ಸಮಯ.
`ಜಟೆಯಲ್ಲಿ ಕಟ್ಟಿದ ನದಿಯ, ತಲೆಯಲ್ಲಿ ಮುಡಿದ ಶಶಿಯ, ಕಣ್ಣೊಳಗೆ ಉರಿವಾ ಬೆಂಕಿಯಾ, ಬಚ್ಚಿಟ್ಟುಕೊಂಡು ನಗುವಾ ನಮ್ಮ ಶಿವನಾ ಕಂಡೆಯಾ, ಅಮ್ಮಮ್ಮ ಅವನಾ ಮಹಿಮೆಯನು ನೀನೂ ಬಲ್ಲೆಯಾ…’ 982ರಲ್ಲಿ ತೆರೆಕಂಡ ಚೆಲ್ಲಿದರಕ್ತ ಸಿನಿಮಾದ ಈ ಗೀತೆಯಲ್ಲಿ ಶಿವನ ಮಹಿಮೆಯನ್ನು ಹಾಡಿಹೊಗಳಿದ್ದಾರೆ. ಭಾರತದಲ್ಲಿ ಶಿವನಿಲ್ಲದ (Lord Shiva) ಊರೇ ಇಲ್ಲ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಿರ್ಮಾಣಗೊಂಡಿರುವ ದೇವಾಲಯಗಳು ಒಂದಕ್ಕಿಂದ ಒಂದು ಮೀರಿಸಿದಂತಿವೆ. ಭಾರತದಲ್ಲಿ ಮಾತ್ರವಲ್ಲದೇ ಪಾಕಿಸ್ತಾನನದ ಪಂಜಾಬ್, ಆಸ್ಟ್ರೇಲಿಯಾದ ಮಿಂಟೋ, ನೇಪಾಳದ ಕಠ್ಮಂಡು, ಶ್ರೀಲಂಕಾದಲ್ಲಿಯೂ, ಮಾರಿಶಸ್‌ಗಳಲ್ಲು ಶಿವನ ಅದ್ಧೂರಿ ದೇವಾಲಗಳು ನೆಲೆಯೂರಿದ್ದು, ಇಂದಿಗೂ ಅವರು ಶಿವನ ಭಕ್ತಿಯನ್ನು ಜನರಿಗೆ ಸಾರುತ್ತಿವೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ನಿರ್ಮಾಣಗೊಂಡಿರುವ ಮುಕ್ತಿ ಗುಹೇಶ್ವರ ದೇವಾಲಯ (Mukti Gupteshwar Mandir) ಜನಮನ ಸೆಳೆದಿದೆ.
Advertisement
Advertisement
ಸಿಡ್ನಿಯ ಹೊರವಲಯದಲ್ಲಿರುವ ಮಿಂಟೋ ಎಂಬ ನಗರದಲ್ಲಿ (Minto City) 1999ರಲ್ಲಿ ಈ ದೇವಾಲಯದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಸುಮಾರು 15 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಗುಹಾದೇವಾಲಯ ನಿರ್ಮಾಣಗೊಂಡಿದೆ. ಹೆಸರೇ ಹೇಳುವಂತೆ ಈ ದೇವಾಲಯ ಗುಹೆಯಲ್ಲಿ ಇದೆ. ಈ ಅಪೂರ್ವ ದೇವಾಲಯದ ನೆಲದ ಮೇಲೆ ಇರುವುದು ಗಣೇಶನ ಒಂದು ಗುಡಿ ಮಾತ್ರ. ಉಳಿದವು ಮೆಟ್ಟಿಲುಗಳನ್ನು ಇಳಿದು ಭೂಗತ ಶಿವದೇವಾಲಯಕ್ಕೆ ಹೋಗಬೇಕಾಗುತ್ತದೆ.
Advertisement
65,000 ಘನ ಮೀಟರ್‌ನಷ್ಟು ಮಣ್ಣನ್ನು ಕೊರೆದು, ನೆಲದಡಿಯಲ್ಲಿ ಗುಹೆಗಳನ್ನು ರೂಪಿಸಿ, ಅದರೊಳಗೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇಂದಿಗೂ ಜಗತ್ತಿನ ಏಕಮಾತ್ರ ಮಾನವ ನಿರ್ಮಿತ ಗುಹಾ ದೇವಾಲಯ ಎಂಬುದು ಇದರ ಖ್ಯಾತಿ. ಇದನ್ನೂ ಓದಿ: ಅಯೋಧ್ಯೆ ಮಾದರಿ ಮಹಾಶಿವರಾತ್ರಿಗೆ ಶಿವಶರಣರ ನಾಡು ಅಣಿ
Advertisement
ನೇಪಾಳದ (Nepal) ರಾಜಮನೆತನದ ಬಳಿ ಒಂದು ಪ್ರಾಚೀನ ಶಿವಲಿಂಗವಿತ್ತು. ಈ ಶಿವಲಿಂಗವು ಭಾರತದ 12 ಜ್ಯೋತಿರ್ಲಿಂಗಗಳ ಜೊತೆಗೆ 13ನೇ ಮತ್ತು ಕೊನೆಯ ಜ್ಯೋತಿರ್ಲಿಂಗ ಎಂದು ಹೇಳಲಾಗಿದೆ. ಜ್ಯೋತಿರ್ಲಿಂಗದ ಜೊತೆಗೆ 7996 ಶ್ಲೋಕಗಳ 8 ಸಂಪುಟಗಳ ವಿಶೇಷ ಗ್ರಂಥವನ್ನೂ ಇಲ್ಲಿ ಇರಿಸಲಾಗಿದೆ. ಈ ಶಿವಲಿಂಗವನ್ನು ದಕ್ಷಿಣ ಗೋಳಾರ್ಧದಲ್ಲಿ ಹೆಬ್ಬಾವಿನ ಮುಖದ ಬಳಿ ಸ್ಥಾಪಿಸಬೇಕೆಂದು ಈ ಶ್ಲೋಕಗಳು ನಿಗದಿಸಿದ್ದವು. ಇದರಲ್ಲಿ ವಿವರಿಸಿದ ಲಕ್ಷಣಗಳ ಆಧಾರದಲ್ಲಿ ಆಸ್ಟ್ರೇಲಿಯಾದಲ್ಲಿ ಜಾಗ ಹುಡುಕಿ ಅದರಂತೆಯೇ ಲಿಂಗವನ್ನು ನಿರ್ಮಿಸಲಾಯಿತು.
1999ರಲ್ಲಿ ನೇಪಾಳದ ಆಗಿನ ರಾಜ ಬೀರೇಂದ್ರ ಬೀರ್ ಬಿಕ್ರಮ್ ಶಾ ದೇವ್ (Birendra Bir Bikram Shah Dev) ಅವರು ಆಸ್ಟ್ರೇಲಿಯಾದ ಹಿಂದೂ ಭಕ್ತರಿಗೆ ಈ ಶಿವಲಿಂಗವನ್ನು ಕಾಣಿಕೆಯಾಗಿ ನೀಡಿದರು. ಅಲ್ಲಿ ಈ ಶಿವಲಿಂಗಕ್ಕಾಗಿ ಒಂದು ಬೃಹತ್ ಗುಹಾ ದೇವಾಲಯ ನಿರ್ಮಾಣದ ಯೋಜನೆ ತಯಾರಿಸಲಾಗಿತ್ತು. ಸುಮಾರು 15 ಸಾವಿರ ಚದರಡಿ ವ್ಯಾಪ್ತಿಯ ಈ ಗುಹಾದೇವಾಲಯದಲ್ಲಿ 13ನೇ ಜ್ಯೋತಿರ್ಲಿಂಗದ ಜೊತೆಗೆ ಉಳಿದ 12 ಜ್ಯೋತಿರ್ಲಿಂಗಗಳ ಪ್ರತಿಕೃತಿಗಳಿವೆ, ಕೃಷ್ಣಶಿಲೆಯಲ್ಲಿ ರಚಿಸಿದ 108 ಶಿವಲಿಂಗಗಳಿವೆ.
ಗರ್ಭಗುಡಿಯಲ್ಲಿ ಶಿವಲಿಂಗದ ಸಮೀಪ 10 ಮೀಟರ್ ಆಳದ ಪೆಟಾರಿಯನ್ನು (ಮರದಲ್ಲಿ ತಯಾರಿಸಲಾದ ಪೆಟ್ಟಿ) ನೆಲದೊಳಗೆ ಹೂಳಲಾಗಿದೆ. ಇದರೊಳಗೆ ಆಸ್ಟ್ರೇಲಿಯಾದ ಭಕ್ತಸಮುದಾಯ 21 ಲಕ್ಷ ಬಾರಿ ಕೈಯಲ್ಲೇ ಬರೆದ `ಓಂ ನಮಃ ಶಿವಾಯ’ ಮಂತ್ರದ ಪುಟಗಳಿವೆ. ಇಂದಿಗೂ ಕೋಟ್ಯಂತರ ಹಿಂದೂ ಭಕ್ತರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ವಿದೇಶಿಗರೂ ಸಹ ಇಲ್ಲಿಗೆ ಭೇಟಿ ನೀಡಿ ಪೂಜೆ, ಹರಕೆ ತೀರಿಸುತ್ತಾರೆ ಎಂಬುದು ವಿಶೇಷ.
ಶಿವದೇವಾಲಯದಲ್ಲಿ ಆಚರಿಸಲಾಗುವ ಹಬ್ಬಗಳು: ಆಸ್ಟ್ರೇಲಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಶಿವದೇವಾಲಯದಲ್ಲಿ ಮಹಾಶಿವರಾತ್ರಿ, ಗಣೇಶ ಚತುರ್ಥಿ, ರಾಮನವಮಿ, ಶ್ರಾವಣಮಾಸದಂದು ಅದ್ಧೂರಿ ಪೂಜಾ ಕೈಂಕರ್ಯಗಳು ನೆರವೇರುತ್ತವೆ.