ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತು ಐಎನ್‍ಎಸ್ ಕಿಲ್ತಾನ್: ವಿಶೇಷತೆ ಏನು?

Public TV
2 Min Read
INS KILTON 4

ನವದೆಹಲಿ: ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿರೋಧಕ  ಯುದ್ಧ ನೌಕೆ ಐಎನ್‍ಎಸ್ ಕಿಲ್ತಾನ್ ಇಂದು ನೌಕಪಡೆಗೆ ಸೇರ್ಪಡೆಯಾಗಿದ್ದು, ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಂಧ್ರ ಪ್ರದೇಶ ವಿಶಾಖಪಟ್ಟಣಂ ಹಡುಗುಕಟ್ಟೆಯಲ್ಲಿ ಕಿಲ್ತಾನ್ ನ್ನು ದೇಶಕ್ಕೆ ಸಮರ್ಪಿಸಿದರು.

ಭಾರತೀಯ ನೌಕಾಪಡೆಯ ಸಂಸ್ಥೆ ನೌಕಾ ವಿನ್ಯಾಸದ ನಿರ್ದೇಶನಾಲಯದಿಂದ ವಿನ್ಯಾಸಗೊಂಡಿರುವ ಐಎನ್‍ಎಸ್ ಕಿಲ್ತಾನ್ ದೇಶೀ ನಿರ್ಮಿತ ನೌಕೆಯಾಗಿದ್ದು, ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಗಳು ಮತ್ತು ಇಂಜಿನಿಯರ್ಸ್ (ಜಿಆರ್ ಎಸ್‍ಇ) ಯಿಂದ ನಿರ್ಮಿಸಲ್ಪಟ್ಟಿದೆ. ಲೋಕಾರ್ಪಣೆ ಸಮಾರಂಭದಲ್ಲಿ ಅಡ್ಮಿರಲ್ ಸುನಿಲ್ ಲಾನ್ಬಾ, ಪಿವಿಎಸ್‍ಎಂ, ಎವಿಎಸ್‍ಎಂ, ಎಡಿಸಿ, ನೌಕಾ ಸಿಬ್ಬಂದಿ ಮುಖ್ಯಸ್ಥ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.

INS KILTON 1

ಐಎನ್‍ಎಸ್ ಕಿಲ್ತಾನ್ ವಿಶೇಷತೆ ಏನು?
ಸ್ವದೇಶದಲ್ಲಿ ನಿರ್ಮಿಸಲಾಗಿರುವ ಪ್ರಮುಖ ನಾಲ್ಕು ಜಲಾಂತರ್ಗಾಮಿ ನಿರೋಧಕ  ಯುದ್ಧ ನೌಕೆಗಳ ಪೈಕಿ 3ನೆಯ ಜಲಾಂತರ್ಗಾಮಿ ನೌಕೆ (ಎಎಸ್ ಡಬ್ಲ್ಯೂ) ಐಎನ್‍ಎಸ್ ಕಿಲ್ತಾನ್ ಇದಾಗಿದೆ. ಪ್ರಾಜೆಕ್ಟ್ 28 ಅಡಿಯಲ್ಲಿ ಐಎನ್‍ಎಸ್ ಕಿಲ್ತಾನ್ ಅನ್ನೂ ನಿರ್ಮಾಣ ಮಾಡಲಾಗಿದೆ. ಸಮುದ್ರದೊಳಗೆ ಯಾವುದೇ ಶಬ್ಧವನ್ನು ಮಾಡದೇ ಗುಪ್ತವಾಗಿ ಚಲಿಸುವ ಮೂಲಕ ವಿರೋಧಿ ಸಬ್ ಮೇರಿನ್‍ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಕಾರ್ಬನ್ ಫೈಬರ್ ಸಂಯುಕ್ತ ವಸ್ತುಗಳಿಂದ ನೌಕೆಯನ್ನು ನಿರ್ಮಾಣ ಮಾಡಲಾಗಿದ್ದು, ಕಡಿಮೆ ತೂಕ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಸುಧಾರಿತ ರಹಸ್ಯ ವೈಶಿಷ್ಟ್ಯತೆಗಳನ್ನು ಹೊಂದಿದೆ.

ಕಿಲ್ತಾನ್ ಒಟ್ಟು ತೂಕ- 3500 ಟನ್, ಉದ್ದ-109 ಮೀಟರ್, ಅಗಲ-14 ಮೀಟರ್ ಹೊಂದಿದೆ. ಅಲ್ಲದೇ 3 ಸಾವಿರ ಕಿಲೋವ್ಯಾಟ್ ಶಕ್ತಿಯನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ನೌಕೆಯಲ್ಲಿ ಅಣ್ವಸ್ತ್ರ ಹಾಗೂ ರಾಸಾಯನಿಕ ದಾಳಿಯನ್ನು ತಡೆಯಬಲ್ಲ ತಂತ್ರಜ್ಞಾನವನ್ನು ಹೊಂದಿದೆ. ಶತ್ರುಗಳನ್ನು ಗುರುತಿಸಿ ಹೊಡೆದುರುಳಿಸಲು ಸಾಧ್ಯವಾಗುವಂತಹ ಟೊರ್ಪೆಡೋ ಟ್ಯೂಬ್ ಲಾಂಚರ್ಸ್, ಎಎಸ್‍ಡಬ್ಲೂ ರಾಕೆಟ್ ಲಾಂಚರ್, 76 ಎಂಎಂ ಕ್ಯಾಲಿಬರ್ ಮಿಡಿಯಂ ರೇಜ್ ಗನ್ ಮತ್ತು ಮಲ್ಟಿ ಬ್ಯಾರೆಲ್ 30 ಮಿ.ಮೀ. ಗನ್ ವ್ಯವಸ್ಥೆ ಇದೆ. ಅಲ್ಲದೇ ಸೋನಾರ್ ಅಂಡ್ ಏರ್ ಸರ್ವೆಸಲೆನ್ಸ್ ರೇಡಾರ್‍ಗಳನ್ನು ಹೊಂದಿದೆ.

ಶಿವಾಲಿಕ್ ಕ್ಲಾಸ್, ಕೋಲ್ಕತ್ತಾ ಕ್ಲಾಸ್, ಐಎನ್ ಎಸ್ ಕಮೋರ್ಟಾ ಕ್ಲಾಸ್ ನೌಕೆಗಳು ಸೇರ್ಪಡೆಯಾದ ನಂತರ ನೌಕಾದಳಕ್ಕೆ ಸೇರ್ಪಡೆಯಾಗುತ್ತಿರುವ ಇತ್ತೀಚಿನ ದೇಶಿ ನಿರ್ಮಿತ ನೌಕೆ ಇದಾಗಿದೆ.

 

 

INS KILTON 2

 

INS KILTON 3

INS KILTON 4 1

INS KILTON 5

 

INS KILTON 6

 

Share This Article
Leave a Comment

Leave a Reply

Your email address will not be published. Required fields are marked *