ನವದೆಹಲಿ: ದೇಶದಲ್ಲಿ ಮಹಿಳೆಯರ ಗರ್ಭಪಾತದ (Abortion) ಕುರಿತಾಗಿ ಸುಪ್ರೀಂಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದ್ದು, ವಿವಾಹಿತರು ಅಥವಾ ಅವಿವಾಹಿತ ಎಲ್ಲಾ ವರ್ಗದ ಮಹಿಳೆಯರೂ ಸುರಕ್ಷಿತವಾದ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿದೆ.
Advertisement
ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಗರ್ಭದಾರಣೆ ಕುರಿತಾಗಿ ಸಲ್ಲಿಸಿದ್ದ ಅರ್ಜಿ ಒಂದರ ವಿಚಾರಣೆ ವೇಳೆ ಈ ಮಹತ್ವದ ತೀರ್ಪನ್ನು ನೀಡಿದೆ. ಮದುವೆಯಾಗದ ಮಹಿಳೆಯರು ಸುರಕ್ಷಿತ ಮತ್ತು ವೈದ್ಯಕೀಯವಾಗಿ ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಲು ಕಾನೂನಿನಡಿಯಲ್ಲಿ ಹಕ್ಕು ಹೊಂದಿದ್ದಾರೆ. ಮದುವೆ ಆದವರು, ಮತ್ತು ಆಗದವರು ಎಂಬ ಬೇಧವನ್ನು ಗರ್ಭಪಾತ ಕಾನೂನಿನಲ್ಲಿ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಇದನ್ನೂ ಓದಿ: ಗರ್ಭಪಾತದ ಹಕ್ಕನ್ನು ರದ್ದುಗೊಳಿಸಿದ ಅಮೆರಿಕ – ಭುಗಿಲೆದ್ದ ಪ್ರತಿಭಟನೆ
Advertisement
Advertisement
ಬಲವಂತದ ಗರ್ಭಧಾರಣೆಯನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಬೇಕು. ಸಂತ್ರಸ್ಥೆ ಗರ್ಭಪಾತಕ್ಕೆ ಇಚ್ಚಿಸಿದರೆ ಅದನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಿ ಅವಕಾಶ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಮದುವೆಯ ಕಟ್ಟುಪಾಡುಗಳು ಪೂರ್ವ ನಿರ್ಧರಿತ ಎಂದು ಕಾನೂನಿನಲ್ಲಿ ಅಭಿಪ್ರಾಯ ಹೊಂದಲು ಸಾಧ್ಯವಿಲ್ಲ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಬೇಕಿದೆ. ಸಮಾಜದಲ್ಲಿ ಇಂದಿನ ನೈಜತೆಯನ್ನು ಪರಿಗಣಿಸಬೇಕು ಮತ್ತು ಹಳೆಯ ಕಟ್ಟುಪಾಡುಗಳನ್ನು ಮುಂದುವರಿಸಬಾರದು. ಸಾಮಾಜಿಕ ಬದಲಾವಣೆಗಳು ಮತ್ತು ಪರಿಸ್ಥಿತಿಗೆ ತಕ್ಕಂತೆ ಕಾನೂನಿನ ಜಾರಿ ಮತ್ತು ನಿರ್ಧಾರ ಬದಲಾಗಬೇಕು. ಕಾನೂನು ನಿಂತ ನೀರಾಗಬಾರದು ಹಾಗಾಗಿ ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡುತ್ತಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ- ಮಹಿಳಾ ಐಎಎಸ್ ಅಧಿಕಾರಿ ವೀಡಿಯೋ ವೈರಲ್
Advertisement
ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ವೈದ್ಯಕೀಯ ಗರ್ಭಪಾತ ಮತ್ತು ಮಸೂದೆ ಮತ್ತು ನಿಯಮದ ಅಡಿಯಲ್ಲಿ ಗರ್ಭಪಾತ ಮಾಡಿಸಬಹುದಾದ ಹಕ್ಕನ್ನು 24 ವಾರದವರೆಗೂ ಹೊಂದಿರುತ್ತಾರೆ ಎಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಪತಿಯ ಅನುಮತಿಯಿಲ್ಲದೇ ಪತ್ನಿ ಗರ್ಭಪಾತ ಮಾಡಿಸಿಕೊಳ್ಳಬಹುದು – ಕೇರಳ ಹೈಕೋರ್ಟ್
ಅಮೆರಿಕದಲ್ಲಿ ಏನಾಗಿತ್ತು:
ಕೆಲದಿನಗಳ ಹಿಂದೆ ಅಮೆರಿಕದ (America) ಸುಪ್ರೀಂಕೋರ್ಟ್ ಇತ್ತೀಚೆಗೆ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿತ್ತು. ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಈ ಆದೇಶದಿಂದ ಕೆಲವು ಪ್ರಮುಖ ನಗರಗಳಲ್ಲಿ ಮಹಿಳೆಯರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಬಳಿಕ ಗರ್ಭಪಾತದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿತ್ತು. ಅಮೆರಿಕದಲ್ಲಿ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಕೆಲವು ಕಾನೂನು ನಿಬಂಧನೆಗಳನ್ನು ವಿಧಿಸಿದೆ. ಈ ಹಿಂದೆ ಗರ್ಭಪಾತದ ಸಂಪೂರ್ಣ ಹಕ್ಕು ಮಹಿಳೆಯರಿಗಿತ್ತು. ಆ ಬಳಿಕ ಸುಪ್ರೀಂಕೋರ್ಟ್ ಈ ಬಗ್ಗೆ ಕೆಲ ಬದಲಾವಣೆ ಮಾಡಿರುವುದರಿಂದ ಮಹಿಳೆಯರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.