BollywoodCinemaDistrictsKarnatakaLatestMain PostSandalwood

`ಕೆಜಿಎಫ್ 2′ 1000 ಕೋಟಿ: ಟೀಸರ್ ಮೂಲಕ ಅಧಿಕೃತ ಮುದ್ರೆ ಒತ್ತಿದ ಹೊಂಬಾಳೆ

ರಾಕಿಂಗ್ ಸ್ಟಾರ್ ಯಶ್ ವೃತ್ತಿಜೀವನದ ದಿಕ್ಕೆನ್ನೇ ಬದಲಿಸಿದ `ಕೆಜಿಎಫ್ 2′ ಸಿನಿಮಾ. ದಿನದಿಂದ ದಿನಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಹೈಪ್ ಕ್ರಿಯೇಟ್ ಮಾಡ್ತಿದೆ. ಬರೋಬ್ಬರಿ ಒಂದು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ಇದೀಗ ಟೀಸರ್ ಮೂಲಕ ಹೊಂಬಾಳೆ ಬ್ಯಾನರ್ 1 ಸಾವಿರ ಕೋಟಿ ಕಲೆಕ್ಷನ್ ಕುರಿತು ಸಂಭ್ರಮ ಹಂಚಿಕೊಂಡಿದೆ.

ಎಲ್ಲೆಲ್ಲೂ `ಕೆಜಿಎಫ್ 2′ ಹಬ್ಬ ಜೋರಾಗಿದೆ. ಸಿನಿಮಾ ರಿಲೀಸ್ 3 ವಾರ ಕಳೆದರು ರಾಕಿಭಾಯ್ ಖದರ್ ಮಾತ್ರ ಕಮ್ಮಿಯಾಗಿಲ್ಲ ಎಂಬುದಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ತಾಜಾ ಉದಾಹರಣೆ. ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಹಿಂದಿ ಸಿನಿಮಾಗಳೇ ಮಾಡಿರದ ದಾಖಲೆಯನ್ನ `ಕೆಜಿಎಫ್ 2′ ಸಿನಿಮಾ ಮಾಡಿ ತೋರಿಸಿದೆ. ಇದೀಗ ಯಶ್ ಸಿನಿಮಾ ಸಾವಿರ ಕೋಟಿಗೂ ಅಧಿಕ ಕ್ಲಬ್ ಸೇರಿದೆ. ಆದರೆ 1 ಸಾವಿರ ಕೋಟಿ ತಲುಪಿ ಕೆಲವು ದಿನಗಳ ಬಳಿಕ ಆಫಿಷಿಯಲ್ ಅನೌನ್ಸ್ಮೆಂಟ್ ಮಾಡಿದೆ ಚಿತ್ರತಂಡ.

kgf 2

ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ನರಾಚಿ ಅಧಿಪತಿ ಕಥೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಬಾಕ್ಸಾಫೀಸ್‌ನಲ್ಲೂ ಈಗಾಗಲೇ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ ಹೊಂಬಾಳೆ ಟೀಮ್ ಆಫಿಷಿಯಲ್ ಆಗಿ ಯಶ್ ಇರುವ ಚಿತ್ರದ ಸಣ್ಣ ತುಣುಕಿನೊಂದಿಗೆ ಟೀಸರ್ ಮೂಲಕ ಸಾವಿರ ಕೋಟಿಯ ಕಲೆಕ್ಷನ್ ಸಂಭ್ರಮ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬ್ಯಾಡ್ ಬಾಯ್ ಗೆ ಸಾರ್ವಜನಿಕವಾಗಿ ಕಿಸ್: ವೈರಲ್ ಆದ ನಟಿ ಶೆಹನಾಜ್ ಗಿಲ್

ಇದೀಗ 1000 ಕೋಟಿಗೂ ಅಧಿಕ ತಲುಪಿ ಗಲ್ಲಾಪೆಟ್ಟಿಗೆಯಲ್ಲಿ ಹಣದ ಭೇಟೆ `ಕೆಜಿಎಫ್ 2′ ಮುಂದುವರೆಸಿದೆ. ಇನ್ನು ಯಶ್ ಬಾಕ್ಸ್ಆಫೀಸ್‌ನ ಮಾನ್‌ಸ್ಟಾರ್ ಆಗಿ ಮುನ್ನುಗ್ಗುತ್ತಿದ್ದಾರೆ. ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ಚಿತ್ರಕ್ಕೆ ಫಿದಾ ಆಗಿರೋ ಅಭಿಮಾನಿಗಳು ಕೆಜಿಎಫ್ 3ಗಾಗಿ ಎದುರು ನೋಡ್ತಿದ್ದಾರೆ.

Leave a Reply

Your email address will not be published.

Back to top button