ನವದೆಹಲಿ: ಹಣಕಾಸು ವರ್ಷಾಂತ್ಯದ ತಿಂಗಳು ಆಗಿರುವ ಮಾರ್ಚ್‍ನಲ್ಲಿ ಬರೋಬ್ಬರಿ 1.42 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
Advertisement
ಮಾರ್ಚ್ ಒಂದು ತಿಂಗಳಲ್ಲಿ ಒಟ್ಟು 1,42,095 ಲಕ್ಷ ಕೋಟಿ ರೂ ಜಿಎಸ್‍ಟಿ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್‍ಟಿ 25,830 ಕೋಟಿ ರೂ, ಎಸ್‍ಜಿಎಸ್‍ಟಿ 32,378 ಕೋಟಿ ರೂ, ಐಜಿಎಸ್‍ಟಿ 74,470 ಕೋಟಿ (ಇದರಲ್ಲಿ ಸರಕು ಆಮದಿನ ಮೇಲೆ ಸಂಗ್ರಹವಾದ 39,131 ಕೋಟಿ ರೂ, ಹಣವೂ ಸೇರಿದೆ.) ಮತ್ತು ಸೆಸ್ ಮೇಲಿನ ಶುಲ್ಕ 9,417 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹವಾದ 981 ಕೋಟಿ ಶುಲ್ಕ ಸೇರಿದೆ) ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಭಾರತಕ್ಕೆ ರಿಯಾಯಿತಿ ದರದಲ್ಲಿ ರಷ್ಯಾ ಕಚ್ಚಾ ತೈಲ
Advertisement
Advertisement
ಈ ಮೂಲಕ ಕಳೆದ ವರ್ಷ ಇದೇ ತಿಂಗಳು ಸಂಗ್ರಹವಾದ ಜಿಎಸ್‍ಟಿ ಆದಾಯಕ್ಕಿಂತ ಈ ವರ್ಷದ ಜಿಎಸ್‍ಟಿ ಆದಾಯ ಶೇ.15ರಷ್ಟು ಹೆಚ್ಚಳವಾಗಿದೆ. ಈವರೆಗೆ ಕಳೆದ ಜನವರಿ ತಿಂಗಳಲ್ಲಿ ಸಂಗ್ರಹವಾದ ಜಿಎಸ್‍ಟಿ ತೆರಿಗೆ 1,40,986 ಕೋಟಿ ರೂ. ದಾಖಲೆಯಾಗಿತ್ತು. ಈ ದಾಖಲೆಯನ್ನು ಮಾರ್ಚ್ ತಿಂಗಳು ಮುರಿದಿದ್ದು, ಈ ಒಂದು ತಿಂಗಳಲ್ಲಿ 1.42,095 ಕೋಟಿ ರೂ. ಸಂಗ್ರಹವಾಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇದನ್ನೂ ಓದಿ: ಶಾಲೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿ 20 ಮಕ್ಕಳು ಅಸ್ವಸ್ಥ
Advertisement
ರಾಜ್ಯಗಳ ಪೈಕಿ ಮಹರಾಷ್ಟ್ರದಲ್ಲಿ 20,305 ಕೋಟಿ ರೂ. ಅತೀ ಹೆಚ್ಚು ಜಿಎಸ್‍ಟಿ ಸಂಗ್ರವಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.19ರಷ್ಟು ಏರಿಕೆ ಕಂಡಿದೆ. ಮಹರಾಷ್ಟ್ರ ಬಳಿಕ ಗುಜರಾತ್‍ನಲ್ಲಿ 9,158 ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದ್ದು, ಕಳೆದ ಬಾರಿಗಿಂತ ಶೇ.12 ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಕಳೆದ ವರ್ಷ 7,915 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ 8,750 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗುವ ಮೂಲಕ ಶೇ.11ರಷ್ಟು ಏರಿಕೆ ಕಂಡಿದೆ.
✅ All time high Gross #GSTCollection in March 2022, breaching earlier record of ₹1,40,986 crore collected in January 2022
✅ ₹1,42,095 crore gross #GST revenue collected in the month
Read more ➡️ https://t.co/WVBKPBkmTO
(1/2) pic.twitter.com/ywPJxQfElw
— Ministry of Finance (@FinMinIndia) April 1, 2022
ಇನ್ವರ್ಟೆಡ್ ಡ್ಯೂಟಿ ರಚನೆಯನ್ನು ಸರಿಪಡಿಸಲು ಕೌನ್ಸಿಲ್ ತೆಗೆದುಕೊಂಡ ವಿವಿಧ ಕ್ರಮಗಳಿಂದಾಗಿ ಆದಾಯದಲ್ಲಿ ಸುಧಾರಣೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.