ನಾನ್‍ವೆಜ್ ಪ್ರಿಯರಿಗೆ ಕುಷ್ಕಾ ಮಾಡುವ ವಿಧಾನ ತುಂಬಾ ಸುಲಭವಾಗಿದೆ. ಇದು ಎಲ್ಲ ನಾನ್‍ವೆಜ್ ಪ್ರಿಯರಿಗೆ ತುಂಬಾ ಇಷ್ಟವಾದ ಪಾಕವಿಧಾನವಾಗಿದೆ. ‘ಕುಷ್ಕಾ’ ತಿನ್ನಲು ಇಷ್ಟಪಡದವರೂ ಸಹ ಇಂದು ನಾವು ಹೇಳಿಕೊಡುವ ರೆಸಿಪಿ ಮಾಡಿ ಸವಿದ್ರೆ, ಇಷ್ಟಪಡುತ್ತಾರೆ.
Advertisement
ಬೇಕಾಗಿರುವ ಪದಾರ್ಥಗಳು:
* ಬಾಸ್ಮತಿ ಅಕ್ಕಿ – 1 ಕಪ್
* ನೀರು – 2 ಕಪ್
* ಕಟ್ ಮಾಡಿದ ಈರುಳ್ಳಿ – 1 ಕಪ್
* ಕಟ್ ಮಾಡಿದ ಟೊಮೆಟೊ – ಅರ್ಧ ಕಪ್
Advertisement
* ಹಸಿರು ಮೆಣಸಿನಕಾಯಿ – 1
* ಎಣ್ಣೆ – 2 ಟೀಸ್ಪೂನ್
* ದಾಲ್ಚಿನ್ನಿ – 1
* ಲವಂಗ – 4
* ಏಲಕ್ಕಿ – 3
* ಮೊಸರು – 2 ಟೀಸ್ಪೂನ್
* ರೆಡ್ ಚಿಲ್ಲಿ ಪೌಡರ್ – 2 ಟೀಸ್ಪೂನ್
Advertisement
* ಅರಿಶಿನ ಪುಡಿ – 1 ಟೀಸ್ಪೂನ್
* ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
* ಪುದೀನ ಸೊಪ್ಪು – 1 ಕಪ್
* ಅಗತ್ಯವಿರುವಷ್ಟು ಉಪ್ಪು
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
* ಹಸಿರು ಮೆಣಸಿನಕಾಯಿ – 2
Advertisement
ಮಾಡುವ ವಿಧಾನ:
* ಬಾಸ್ಮತಿ ಅಕ್ಕಿಯನ್ನು 2 ಕಪ್ ನೀರಿನಲ್ಲಿ ತೊಳೆದು 15-20 ನಿಮಿಷಗಳ ಕಾಲ ನೆನೆಸಿಡಿ. ಕುಷ್ಕಾ ಮಸಾಲಾ ಪೇಸ್ಟ್‌ಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ, ದಾಲ್ಚಿನ್ನಿ, ಏಲಕ್ಕಿ, ಲವಂಗ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ರೆಡಿ ಮಾಡಿಕೊಳ್ಳಿ.
* ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ. ಮೆಂತ್ಯ ಎಲೆ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ.
* ನಂತರ ಕಟ್ ಮಾಡಿದ ಈರುಳ್ಳಿ, ಟೊಮೆಟೊ ಜೊತೆಗೆ ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಫ್ರೈ ಮಾಡಿ.
* ಮಸಾಲಾ ಮಿಶ್ರಣವನ್ನು ಪೇಸ್ಟ್ ಅನ್ನು ಹಾಕಿ, ಹಸಿ ವಾಸನೆ ಹೋಗುವವರೆಗೆ ಕೆಲವು ನಿಮಿಷಗಳ ಕಾಲ ಫ್ರೈ ಮಾಡಿ.
* ನಂತರ ಅದಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಅಗತ್ಯಕ್ಕೆ ಉಪ್ಪು ಸೇರಿಸಿ. 2-3 ನಿಮಿಷಗಳ ಕಾಲ ಫ್ರೈ ಮಾಡಿ.
* ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಒಂದೆರಡು ನಿಮಿಷ ಬೇಯಿಸಿ. ಈಗ ಸಣ್ಣಗೆ ಕತ್ತರಿಸಿದ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಫ್ರೈ ಮಾಡಿ.
* ನಂತರ ನೆನೆಸಿದ ಬಾಸ್ಮತಿ ಅಕ್ಕಿಯಿಂದ ನೀರನ್ನು ಸುರಿಯಿರಿ ಮತ್ತು ಅಗತ್ಯವಿದ್ದರೆ ಉಪ್ಪನ್ನು ಹಾಕಿ. ನೀರು ಕುದಿಯಲು ಪ್ರಾರಂಭಿಸಿದಾಗ, ನೆನೆಸಿದ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
* ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ 12-15 ನಿಮಿಷ ಬೇಯಿಸಿ.
* ಶಾಖವನ್ನು ಆಫ್ ಮಾಡಿ ಮತ್ತು ಅದನ್ನು ತೆರೆಯುವ ಮೊದಲು 5-10 ನಿಮಿಷಗಳ ಕಾಲ ಬಿಡಿ.
– ಕುಷ್ಕಾ ಈಗ ಸವಿಯಲು ಸಿದ್ಧವಾಗಿದ್ದು, ಈರುಳ್ಳಿ ಮತ್ತು ರೈಯಿತಾ ಜೊತೆಗೆ ಬಿಸಿಯಾಗಿ ಬಡಿಸಿ.