ಕೊಪ್ಪಳ: ಆಳವಾದ ಅಧ್ಯಯನ, ನಿರಂತರ ಓದು, ಶ್ರಮದಿಂದ ಕಷ್ಟಪಟ್ಟು ಓದಿ, ಇಷ್ಟಪಟ್ಟು ಅನುಭವಿಸಿ ಬರೆದರೆ ಮಾತ್ರ ಸಾಹಿತಿಗಳು ಆಗಲು ಸಾಧ್ಯ. ಕೇವಲ ಐಡೆಂಟಿಟಿ ಕಾರ್ಡ್‌ಗಳನ್ನ ಇಟ್ಟುಕೊಂಡವರೆಲ್ಲ ಸಾಹಿತಿಗಳಾಗಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅಭಿಪ್ರಾಯಪಟ್ಟರು.
ಕೊಪ್ಪಳದ (Koppala) ಕಾರಟಗಿ ಪಟ್ಟಣದಲ್ಲಿ ಭಾನುವಾರ ತಾಲೂಕು ಕಸಾಪ ಆಯೋಜಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಭಾಜನರಾಗಿರುವ ತಾಲೂಕಿನ ಕಥೆಗಾರ ಮಂಜು ನಾಯಕ ಚಳ್ಳೂರು ಅವರಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: ತತ್ವ-ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಅಧಿಕಾರಕ್ಕೆ ಬರಲು ವಿಪಕ್ಷಗಳ ಪ್ರಯತ್ನ: ಎನ್.ರವಿಕುಮಾರ್
Advertisement
Advertisement
ಯಾರು ಕಷ್ಟ, ಬಡತನ ಸವಿದಿರುತ್ತಾರೋ ಅವರು ಮೇಲೆ ಬಂದು ಸಾಧನೆ ಮಾಡಲು ಸಾಧ್ಯ. ತಂದೆ-ತಾಯಿ ಮತ್ತು ಕಲಿಸಿದ ಗುರುಗಳಿಗೆ ಹೆಸರು ತರುವಂಥ ಕೆಲಸವನ್ನು ಮಾಡಬೇಕು. ಮಕ್ಕಳಿಗೆ ತಂದೆ-ತಾಯಿ ಸಂಸ್ಕಾರ, ಸಂಸ್ಕೃತಿ ಕಲಿಸಿದರೆ ಅಂಥ ಮಕ್ಕಳು ಮುಂದೆ ಹೆತ್ತವರಿಗೆ ಹೆಸರು ತರುತ್ತಾರೆ. ಸಾಧನೆ ಮಾಡಿದಾಗ ಹೆಚ್ಚು ಖುಷಿ ಪಡುವುದು ತಂದೆ-ತಾಯಿ ಮತ್ತು ಕಲಿಸಿದ ಗುರುಗಳು. ಯಾವುದೇ ಕ್ಷೇತ್ರವಿರಲಿ ಸತತ ಶ್ರಮದ ಮೂಲಕ ಏನಾದರೂ ಸಾಧಿಸಬೇಕು. ಅಲ್ಪ ಜ್ಞಾನ ಪಡೆದು ದೊಡ್ಡದಾಗಿ ಸಾಹಿತಿಗಳೆಂದು ಬಿಂಬಿಸುವವರೇ ಹೆಚ್ಚು ಇರುವಂಥ ಈ ಕಾಲದಲ್ಲಿ ಕಷ್ಟದ ಜೀವನ ಸವಿದು, ಸಣ್ಣ ವಯಸ್ಸಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಪಾತ್ರರಾದ ನಮ್ಮ ಕ್ಷೇತ್ರದ ಚೆಳ್ಳೂರು ಗ್ರಾಮದ ಯುವಕ ಕಥೆಗಾರ ಮಂಜುನಾಥ ನಾಯಕ ಭಿನ್ನವಾಗುತ್ತಾರೆ ಎಂದು ಬಣ್ಣಿಸಿದರು.
Advertisement
ನಮ್ಮ ಕೊಪ್ಪಳ ಜಿಲ್ಲೆಯ ನನ್ನ ಕ್ಷೇತ್ರದ ಯುವಕ ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಕೀರ್ತಿ ತಂದಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ಮಂಜುನಾಥ ಅವರ ಶತತ ಅಭ್ಯಾಸ, ಕಲಿಕೆಯಿಂದಲೇ ಈ ಮಟ್ಟಕ್ಕೆ ಸಾಧನೆ ಮಾಡಲು ಸಾಧ್ಯ. ಈ ರಾಜ್ಯದಲ್ಲಿ ಏನಾದರೂ ಒಂದು ಉತ್ತಮ ಕೆಲಸ, ಸಾಧನೆ ಮಾಡಲು ಸಾಧ್ಯವಾದರೆ ಅದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ. ಅದಕ್ಕಾಗಿ ಈ ಖಾತೆಯನ್ನು ಸಿದ್ದರಾಮಯ್ಯನವರು ನನಗೆ ನಿರ್ವಹಣೆ ಮಾಡಲು ಕೊಟ್ಟಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಖಾದರ್‌ಗೆ ‘ದಿ ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿ ಪ್ರದಾನ
Advertisement
ಕನ್ನಡ ಸಾಹಿತಿಗಳು, ನಾಟಕಕಾರರು, ಕಥೆಗಾರರು, ಕಲಾವಿದರು, ಜನಪದ ಕಲಾವಿದರು ಸೇರಿದಂತೆ ವಿವಿಧ ಪ್ರಾಕಾರಗಳ ಕಲಾವಿದರಿಗೆ ಈ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ನಂಟಿದೆ. ಇಷ್ಟೆಲ್ಲ ಬುದ್ಧಿವಂತರ ಜೊತೆಗೆ ನಾನು ನಿತ್ಯ ಕೆಲಸ ಮಾಡಬೇಕಾಗಿದೆ. ಇದಲ್ಲದೇ 6 ರಂಗಾಯಣ,14 ನಿಗಮ ಮಂಡಳಿ, 6 ಪ್ರಾಧಿಕಾರ, 7 ಗಡಿನಾಡ ಕನ್ನಡ ಪ್ರಾಧಿಕಾರಗಳ ಅಧ್ಯಕ್ಷನೂ ನಾನೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಬದ್ಧವಾಗಿದ್ದು, ಅವುಗಳನ್ನು ಆದ್ಯತೆ ಮೇರೆಗೆ ಜಾರಿ ಮಾಡುತ್ತೇವೆ. ಇವುಗಳ ಜಾರಿಗಾಗಿ ಉಳಿದ ಅಭಿವೃದ್ಧಿ ಕೆಲಸಗಳಿಗೆ ಸ್ವಲ್ಪ ಅನುದಾನದ ಕೊರತೆಯಾಗುತ್ತಿರುವುದ ನಿಜ. ಸ್ವಲ್ಪ ತಡವಾದರೂ ಪರವಾಗಿಲ್ಲ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನೂ ಬದ್ಧ. ಕಾರಟಗಿಯಲ್ಲಿ ಕನ್ನಡ ಭವನ, ಉತ್ತಮ ಗ್ರಂಥಾಲಯ, 100 ಹಾಸಿಗೆ ಆಸ್ಪತ್ರೆ ಜೊತೆಗೆ ಪದವಿ ಕಾಲೇಜು, ವಿವಿಧ ವಸತಿ ನಿಲಯಗಳನ್ನು ಮಂಜೂರು ಮಾಡಲಾಗುವುದು ಎಂದರು.
Web Stories