ಕೊಪ್ಪಳ: ನಮ್ಮ ದೇಶದ ಆಧಾರ್ ಕಾರ್ಡ್ ಇರುವವರೆಲ್ಲರೂ ಭಾರತೀಯರು. ಧರ್ಮ ಎನ್ನುವುದು ಅವರ ವ್ಯಕ್ತಿಗತ. ಭಾರತದಲ್ಲಿ ಇರುವವರೆಲ್ಲ ನಮ್ಮವರು ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ, ಆಧಾರ್ ಕಾರ್ಡ್ ಯಾರ ಬಳಿ ಇದೆ ಅವರಿಗೆ ನಮ್ಮ ಮಠಕ್ಕೆ ಅವಕಾಶ ಇದೆ. ಭಾರತೀಯರೆಲ್ಲರೂ ಒಂದೇ ಎಂದರು.
Advertisement
ಶಾಸಕ ಬಸವರಾಜ್ ಯತ್ನಾಳ್ ನಿಮ್ಮ ಬಗ್ಗೆ ಹಗುರವಾಗಿ ಮಾತಾಡುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಗುರ ವ್ಯಕ್ತಿಗಳು ಹಗುರವಾಗಿ ಮಾತನಾಡುತ್ತಾರೆ. ಅಂತಹ ಹಗುರ ವ್ಯಕ್ತಿಗಳನ್ನು ಕೈ ಬಿಡಬೇಕು. ಪಂಚಮಸಾಲಿ ಸಮುದಾಯ ಯಾರ ಕೈಯಲ್ಲೂ ಇಲ್ಲ. ಅಲ್ಪರ ಬಗ್ಗೆ ನಾವು ವಿಚಾರ ಮಾಡುವುದಿಲ್ಲ. ನಾವು ಅವರ ಮಾತನ್ನು ಸೀರಿಯಸ್ ಆಗಿ ತಗೆದುಕೊಳ್ಳಲ್ಲ ಎಂದು ಯತ್ನಾಳ್‌ಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಧರೆಗೆ ಉರುಳಿದ ಮರ
Advertisement
Advertisement
ಭಗವದ್ಗೀತೆ ಪಠ್ಯದಲ್ಲಿ ಸೇರಿಸಬೇಕಾ ಎಂಬ ಪ್ರಶ್ನೆಗೆ ಉತ್ತರಿಸಿ, ಭಗವದ್ಗೀತೆಯನ್ನು ಎಲ್ಲರೂ ಓದಬೇಕು. ಅದನ್ನು ವಿರೋಧ ಮಾಡಿದವರು ಅದನ್ನು ಓದಿಲ್ಲ. ಹೀಗಾಗಿ ವಿರೋಧ ಮಾಡುವುದಕ್ಕಿಂತಲೂ ಮೊದಲು ಎಲ್ಲರೂ ಅದನ್ನು ಓದಬೇಕು. ಬದುಕಿಗೆ ಭಗವದ್ಗೀತೆ ಬಹಳ ಹತ್ತಿರ ಇದೆ. ಪಠ್ಯದಲ್ಲಿ ಸೇರಿಸುವುದಕ್ಕೆ ನಮ್ಮ ಬೆಂಬಲ ಇದೆ ಎಂದರು. ಇದನ್ನೂ ಓದಿ: ಕಲಾವಿದನ ನಾಲಿಗೆಯಿಂದ ಅರಳಿತು ಅಂಬೇಡ್ಕರ್ ಚಿತ್ರ
Advertisement
ಈ ಮೊದಲು ಮಾತನಾಡಿದ ಸ್ವಾಮೀಜಿ, ಏಪ್ರಿಲ್ 16 ರಂದು ಅಂಜನಾದ್ರಿ ಬೆಟ್ಟದಲ್ಲಿ ವಚನ ಮಹೋತ್ಸವ ನಡೆಯಲಿದೆ. ಯೋಗವನ್ನು ಪ್ರಚಾರ ಮಾಡುವುದಕ್ಕಾಗಿ ರಾಜ್ಯದ 75 ಐಕಾನಿಕ್ ಸ್ಥಳದಲ್ಲಿ ಯೋಗ ಮಹೋತ್ಸವ ಮಾಡಲಾಗುವುದು ಎಂದು ಮಾಹಿತಿ ನೀಡಿದರು.