Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಿಜೆಪಿಗೆ ಬಂದವರೆಲ್ಲರೂ ನಾಯಕರಾಗಿದ್ದಾರೆ- ಡಿಕೆಶಿಗೆ ನಳಿನ್ ಕುಮಾರ್ ತಿರುಗೇಟು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಬಿಜೆಪಿಗೆ ಬಂದವರೆಲ್ಲರೂ ನಾಯಕರಾಗಿದ್ದಾರೆ- ಡಿಕೆಶಿಗೆ ನಳಿನ್ ಕುಮಾರ್ ತಿರುಗೇಟು

Karnataka

ಬಿಜೆಪಿಗೆ ಬಂದವರೆಲ್ಲರೂ ನಾಯಕರಾಗಿದ್ದಾರೆ- ಡಿಕೆಶಿಗೆ ನಳಿನ್ ಕುಮಾರ್ ತಿರುಗೇಟು

Public TV
Last updated: November 3, 2022 4:33 pm
Public TV
Share
3 Min Read
DK SHIVAKUMAR NALIN KUMAR KATEEL
SHARE

ಬೆಂಗಳೂರು: ಡಿ.ಕೆ ಶಿವಕುಮಾರ್ (D.K Shivakumar) ಅವರು ಬಿಜೆಪಿಗೆ ಹಾರಿದ ಮಿತ್ರಮಂಡಳಿ ತಂಡಕ್ಕೆ ಮರಳಿ ಬರುವಂತೆ ಮುಕ್ತ ಆಹ್ವಾನ ನೀಡಿದ್ದಾರೆ. ಇತ್ತ ಡಿಕೆಶಿ ಆಹ್ವಾನ ಬೆನ್ನಲ್ಲೇ ಬಿಜೆಪಿ (BJP) ಅಲರ್ಟ್ ಆಗಿದೆ. ಬಿಜೆಪಿಗೆ ಬಂದವರೆಲ್ಲರೂ ನಾಯಕರಾಗಿದ್ದಾರೆ ಎಂದು ಡಿಕೆಶಿ ಆಹ್ವಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ತಿರುಗೇಟು ನೀಡಿದ್ದಾರೆ. ಬಿಜೆಪಿ ಕಚೇರಿಯಲ್ಲಿಂದು ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಟೀಲ್ ಮಾತಾಡಿ, ಹಾಲಿನೊಳಗೆ ಸಕ್ಕರೆ ಬೆರೆತಂತೆ ಸಿಹಿ ಮಾತ್ರ ಇರಬೇಕು. ನಮ್ಮ ಪಕ್ಷಕ್ಕೆ ಬಂದವರೆಲ್ಲರೂ ನಮ್ಮೊಳಗೆ ವಿಲೀನರಾಗಿದ್ದಾರೆ. ಬಂದವರು ನಾಯಕರಾಗಿದ್ದಾರೆ. ನೀವೂ ಸಹ ಹೊದಾಣಿಕೆಯಿಂದ ನಮ್ಮೊಳಗೆ ಒಂದಾಗಬೇಕು ಮುದ್ದಹನುಮೇಗೌಡರಿಗೆ ಕಾಂಗ್ರೆಸ್ (Congress) ಪಕ್ಷ ಅನ್ಯಾಯ ಮಾಡಿತ್ತು. ಅವರಿಗೆ ಕಾಂಗ್ರೆಸ್ ಪಕ್ಷದ ನೈಜ ಬಣ್ಣದ ಅರಿವಾಗಿದೆ ಎಂದು ಹೇಳಿದರು.

BASAVARAJ BOMMAI 6

ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ (Basavaraj Bommai) ಮತ್ತು ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ, ಕನ್ನಡ ಚಲನಚಿತ್ರ ನಟ ಮತ್ತು ಮಾಜಿ ಸಂಸದ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್. ಅನಿಲ್ ಕುಮಾರ್, ಶೀಲಾ ದೀಕ್ಷಿತ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ರಮೇಶ್ ಮುನಿಯಪ್ಪ, ಕಾಂಗ್ರೆಸ್ ಸೇವಾದಳದ ರಾಜ್ಯ ಉಪಾಧ್ಯಕ್ಷ ಹನುಮಂತರಾವ್ ಜವಳಿ ಮತ್ತಿತರರು ಬಿಜೆಪಿ ಸೇರಿದರು. ಇವರಲ್ಲದೆ ಕೆ.ಪಿ.ಸಿ.ಸಿ ಸದಸ್ಯ ಹಾಗೂ ತೆಂಗು ನಾರು ಮಂಡಳಿ ಮಾಜಿ ಅಧ್ಯಕ್ಷ ಜಿ.ವೆಂಕಟಾಚಲಯ್ಯ, ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹೆಚ್.ವೈ.ರವಿಕುಮಾರ್, ರಾಜ್ಯ ರೈತ ಸಂಘದ ನಾಯಕ ಸಂಜೀವ ರೆಡ್ಡಿ, ದಲಿತ ಮುಖಂಡ ವೆಂಕಟೇಶಮೂರ್ತಿ ಪಕ್ಷ ಸೇರಿದರು.

Nalinkumar Kateel 1

ಪಕ್ಷ ಸೇರ್ಪಡೆ ಬಳಿಕ ಮಾತಾಡಿದ ನಳಿನ್ ಕುಮಾರ್ ಕಟೀಲ್, ಇನ್ನು 15- 20 ದಿನಗಳಲ್ಲಿ ಅಥವಾ ಚುನಾವಣೆಯ ಒಳಗೆ ಕಾಂಗ್ರೆಸ್ ಮನೆಯ ಬಾಗಿಲು ಮುಚ್ಚುತ್ತಾರೆ. ಕಾಂಗ್ರೆಸ್ಸಿನ ಹತ್ತಾರು ಜನ ನಮ್ಮ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍‌ ಕುಮಾರ್ ಕಟೀಲ್ ಅವರು ತಿಳಿಸಿದರು. ಇದೊಂದು ವಿಶೇಷ ಸಂದರ್ಭ ಮಾತ್ರವಲ್ಲ; ರಾಜಕೀಯ ಬದಲಾವಣೆಯ ಸಂಕೇತವೂ ಆಗಿದೆ. ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಯಾತ್ರೆ (Bharat Jodo Yatre) ಮೂಲಕ ತೆರಳಿದಲ್ಲೆಲ್ಲ ಕಾಂಗ್ರೆಸ್ ಪಕ್ಷ ಸೋತಿದೆ. ಕೊಳ್ಳೇಗಾಲದಲ್ಲಿ 7ರಲ್ಲಿ ಆರು ಸ್ಥಾನಗಳನ್ನು ಬಿಜೆಪಿ ಗೆದ್ದಿರುವುದೇ ಇದಕ್ಕೆ ಸಾಕ್ಷಿ ಎಂದರು. ಇದನ್ನೂ ಓದಿ: ಜಾರಕಿಹೊಳಿ ಯಾವಾಗ ಸರ್ಕಾರ ಕೆಡವುತ್ತಾರೋ? ಯಾವಾಗ ಸರ್ಕಾರ ತರುತ್ತಾರೋ?: ಜಯಮೃತ್ಯುಂಜಯ ಸ್ವಾಮೀಜಿ

BJP FLAG

ವಿಜಯಪುರದಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದಿದೆ. ಕಾಂಗ್ರೆಸ್ ಮನೆ ಖಾಲಿ ಆಗುವುದರ ಸಂಕೇತ ಇದಾಗಿದೆ. ಬಿಜೆಪಿ ಕಮಲ ಮತ್ತೆ ಮುಂದಿನ ವರ್ಷದ ಅಸೆಂಬ್ಲಿ ಚುನಾವಣೆಯಲ್ಲಿ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟ್ರದಲ್ಲಿ ಮೋದಿಜಿ (Narendra Modi) ಅವರ ಆಡಳಿತವನ್ನು ಜನರು ಒಪ್ಪಿದ್ದಾರೆ. ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಬೊಮ್ಮಾಯಿ ಅವರು ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಹಾಗೂ ಪೌರಕಾರ್ಮಿಕರಿಗೆ ನ್ಯಾಯ ನೀಡಿದ್ದಾರೆ. ಅದರ ನಂತರ ರಾಜ್ಯದ ಚಿತ್ರಣ ಬದಲಾಗಿದೆ. ಬಿಜೆಪಿ ಗೆಲುವು ಖಚಿತವಾಗಿದೆ ಎಂದರು.

BJP CONGRESS FLAG

ಕಾಂಗ್ರೆಸ್ ಪಕ್ಷವು ತನ್ನ ತಲೆತಲಾಂತರದ ಮತಗಳೆಂದು ನಂಬಿದ್ದ ಮತಗಳು ಕೈಬಿಟ್ಟು ಹೋಗಿವೆ. ಕಾರ್ಯಕರ್ತರೇ ಆ ಪಕ್ಷವನ್ನು ಕೈಬಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ನುಡಿದರು. ಕಲಬುರಗಿಯ ಒಬಿಸಿ ಸಮಾವೇಶದಲ್ಲಿ 4ರಿಂದ 5 ಲಕ್ಷ ಜನ ಸೇರಿದ್ದರು. 40- 50 ಸಾವಿರ ಜನ ಎಂದಿರುವ ಸಿದ್ದರಾಮಣ್ಣನಿಗೆ ವೈದ್ಯರಾದ ಅಶ್ವತ್ಥನಾರಾಯಣ್ ಅವರು ಬೇರೆ ಕನ್ನಡಕ ಕೊಡಿಸಬೇಕು ಎಂದು ವ್ಯಂಗ್ಯವಾಗಿ ತಿಳಿಸಿದರು. ಇದನ್ನೂ ಓದಿ: ಕೆಂಪುಕೋಟೆಯ ಮೇಲೆ ದಾಳಿ – ಲಷ್ಕರ್‌ ಉಗ್ರ ಅಶ್ಫಾಕ್ ಆರಿಫ್‌ ಗಲ್ಲು ಖಾಯಂ

DK SHIVAKUMAR 3

ಕಾಂಗ್ರೆಸ್ ನವರಂತೆ ನಾವು ಬಿರಿಯಾನಿ, ಹೆಂಡ ಕೊಟ್ಟು ಜನ ತರಿಸಲಿಲ್ಲ. ಜನ ಸ್ವಯಂಪ್ರೇರಿತರಾಗಿ ಬಂದಿದ್ದಾರೆ ಎಂದು ವಿವರಿಸಿದರು. ಕರ್ನಾಟಕದ ಕಾಂಗ್ರೆಸ್ ಪಕ್ಷವು ಸಿದ್ರಾಮಣ್ಣನ ನಾಟಕ ಕಂಪೆನಿ ಮತ್ತು ಡಿಕೆಶಿ ನಾಟಕ ಕಂಪೆನಿಯಾಗಿ ಎರಡು ಗುಂಪಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುತ್ತದೆ ಎಂದು ತಿಳಿಸಿದರು.

Live Tv
[brid partner=56869869 player=32851 video=960834 autoplay=true]

TAGGED:bengalurucongressDK Shivakumarಕಾಂಗ್ರೆಸ್ಡಿ.ಕೆ.ಶಿವಕುಮಾರ್ಬೆಂಗಳೂರು
Share This Article
Facebook Whatsapp Whatsapp Telegram

Cinema news

Rashika
ರಾಶಿಕಾ ಹೇಳೋ ಆ 5 ಫೈನಲಿಸ್ಟ್‌ಗಳ್ಯಾರು?
Cinema Districts Karnataka Latest Sandalwood Top Stories
Allu Arjun Lokesh Kanagaraj
ಅಲ್ಲು ಅರ್ಜುನ್, ಲೋಕೇಶ್ ಕಾಂಬಿನೇಷನ್ ಅದ್ಧೂರಿ ಬಜೆಟ್ ಚಿತ್ರ..!
Cinema Latest South cinema Top Stories
yash
ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ FIR
Bengaluru City Cinema Districts Karnataka Latest Main Post Sandalwood
YASH 5
ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಾಕಿಭಾಯ್
Cinema Sandalwood

You Might Also Like

Three killed in Swift car KSRTC bus collision Bharathipura Cross Thirthahalli Shivamogga
Districts

ತೀರ್ಥಹಳ್ಳಿ| ಕಾರು, ಬಸ್‌ ಮಧ್ಯೆ ಭೀಕರ ಅಪಘಾತ – ಮೂವರು ಸಾವು

Public TV
By Public TV
24 minutes ago
Lakkundi Gold How many grams does each piece of jewelry weigh
Districts

Lakkundi Gold – ಯಾವ ಆಭರಣ ಎಷ್ಟು ಗ್ರಾಂ ಹೊಂದಿದೆ?

Public TV
By Public TV
51 minutes ago
Lalbagh Flower Show
Bengaluru City

ಲಾಲ್‌ಬಾಗ್ ಫ್ಲವರ್ ಶೋಗೆ ಹೈ ಅಲರ್ಟ್ – ಗಾಜಿನ ಮನೆ ಸುತ್ತ ನೋ ಎಂಟ್ರಿ

Public TV
By Public TV
54 minutes ago
HD Revanna
Districts

ಈ ಗಿರಾಕಿ ಎಲ್ಲಿದ್ದ? ಇವ್ನಿಗೆ ನಾನು ಹೆದರುತ್ತೀನಾ – ಶಿವಲಿಂಗೇಗೌಡ ವಿರುದ್ಧ ರೇವಣ್ಣ ಕೆಂಡಾಮಂಡಲ

Public TV
By Public TV
1 hour ago
Makara Jyothi Sabarimala
Latest

ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ – ದಿವ್ಯಜ್ಯೋತಿ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತಗಣ

Public TV
By Public TV
2 hours ago
Sankranthi Bhavishya Horoscope 2026
Astrology

ಸಂಕ್ರಾಂತಿ ಭವಿಷ್ಯ – ಯಾವ ರಾಶಿಯವರಿಗೆ ಏನು?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?