– ದೇಶದಲ್ಲಿ ವಕ್ಫ್ ವಿರುದ್ಧ ಹೋರಾಟ ಆರಂಭವಾಗಿದ್ದೇ ವಿಜಯಪುರದಿಂದ
– ಎಲ್ಲರೂ ಗಟ್ಟಿಯಾದರೆ ರೈತರ, ಮಠಗಳ ಆಸ್ತಿ ಉಳಿಯುತ್ತೆ
ವಿಜಯಪುರ: ವಕ್ಫ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ಸ್ವಾಮೀಜಿಗಳು ಕೈಜೋಡಿಸಬೇಕು. ಆದರೆ ನಮ್ಮ ಸ್ವಾಮೀಜಿಗಳು ಹೋರಾಟ ಮಾಡುತ್ತಿಲ್ಲ. ವಕ್ಫ್ ವಿರುದ್ಧ ದೊಡ್ಡ ಹೋರಾಟ ನಡೆಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.
Advertisement
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹೋರಾಟದಲ್ಲಿ ಕನ್ಹೇರಿ ಸ್ವಾಮಿಜಿ ಮುಂಚೂಣಿ ವಹಿಸಿಕೊಂಡಿದ್ದರೆ, ಇತರೆ ಸ್ವಾಮೀಜಿಗಳು ಕೊಂಕು ಹೇಳುತ್ತಿದ್ದಾರೆ. ಮಠಗಳಿಗೆ ದಾನ ನೀಡುವವರು ಹಿಂದೂಗಳು, ಮುಸ್ಲಿಂರಲ್ಲ. ಮುಸ್ಲಿಂರೆಲ್ಲ ಸ್ವಾಮೀಜಿಗಳಿಗೆ ನಮಸ್ಕಾರ ಮಾಡಲ್ಲ ಎಂದರು.
Advertisement
ಕೇಂದ್ರ ಸಚಿವೆ ಕರಂದ್ಲಾಜೆ (Shobha Karandlaje), ನಾನು ಇತರರು ಸೇರಿ ಅಹೋರಾತ್ರಿ ಹೋರಾಟ ಮಾಡುತ್ತೇವೆ. ವಕ್ಫ್ ಹೋಗುವವರೆಗೂ ಹೋರಾಟ ನಿಲ್ಲಲ್ಲ, ಇದು ಕೂಡ ಚರ್ಚೆಗೆ ಗ್ರಾಸವಾಗಲಿದೆ. ಮುಂದೆ ರಾಜ್ಯದಲ್ಲಿ ನಮ್ಮದೇ ಕಾಂಬಿನೇಷನ್ ನಾಯಕತ್ವ ಎಂದರು.ಇದನ್ನೂ ಓದಿ: ಮೈಸೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ – ಕೇಸ್ ದಾಖಲು
Advertisement
Advertisement
ದೇಶದಲ್ಲಿ ವಕ್ಫ್ ವಿರುದ್ಧ ಹೋರಾಟ ಆರಂಭವಾಗಿದ್ದೇ ವಿಜಯಪುರದ (Vijayapura) ಪವಿತ್ರ ಭೂಮಿಯಿಂದ. ವಕ್ಫ್ ಕರಾಳ ಶಾಸನದ ಅನುಭವ ಆಗುತ್ತಿದೆ. ಇದರ ವಿರುದ್ಧ ದೊಡ್ಡ ಹೋರಾಟದ ಅವಶ್ಯಕತೆಯಿದೆ. ಎಲ್ಲರೂ ಗಟ್ಟಿಯಾದರೆ ರೈತರ ಜಮೀನು, ಮಠಗಳು ಉಳಿಯುತ್ತವೆ. ಯಾರ ಪಹಣಿಯೂ ಸಿಗದಂತೆ ಸರ್ವರ್ ಡೌನ್ ಮಾಡಿದ್ದಾರೆ. ಇದರಿಂದ ಸರ್ಕಾರವೇ ಡೌನ್ ಆಗಲಿದೆ. ಜನರೇ ಬುತ್ತಿ ಕಟ್ಟಿಕೊಂಡು ಹೋರಾಟ ಮಾಡೋಣ. ಮುಂದೆ ಧರ್ಮಯುದ್ಧ ಆಗುತ್ತದೆ. ಎಲ್ಲರೂ ಹೋರಾಟದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.
ನಮ್ಮ ದೇವರ ಕೈಯಲ್ಲಿ ಅಸ್ತ್ರಗಳು ಇವೆ. ಶಿವನ ಕೈಯ್ಯಲ್ಲಿ ಏನಿದೆ? ಚಾಮುಂಡಿ ಕೈಯ್ಯಲ್ಲಿ ಏನಿದೆ? ಬಾಂಗ್ಲಾದಲ್ಲಿ ಹಿಂದೂ ಸರ್ಕಾರಿ ನೌಕರರು ರಾಜೀನಾಮೆ ತೆಗೆದುಕೊಳ್ಳುತ್ತಿದ್ದಾರೆ. ನ.3 ರಂದು ದೆಹಲಿಯಲ್ಲಿ ಮುಸ್ಲಿಂ ಮೌಲ್ವಿಗಳು ಸಭೆ ನಡೆಸಿ ಮೋದಿಗೆ ಎಚ್ಚರಿಕೆ ನೀಡಿದ್ದಾರೆ. ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಅವರಿಗೂ ಮೋದಿ ಅವರು ಜಾರಿಗೆ ತರುವ ಕಾಯ್ದೆಯನ್ನು ಬೆಂಬಲಿಸಬಾರದು. ಆಂಧ್ರದಲ್ಲಿ ಐದು ಲಕ್ಷ ಜನರು ಸೇರಿ ಹೋರಾಟ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಪಾರ್ಟಿಷನ್ ಆಫ್ ಪಾಕಿಸ್ತಾನ ಎಂಬ ಪುಸ್ತಕ ಅಂಬೇಡ್ಕರ್ ಬರೆದಿದ್ದರು. ಭಾರತ ಪಾಕಿಸ್ತಾನ ವಿಭಜನೆ ಬೇಡ ಎಂದಿದ್ದರು. ವಿಭಜನೆ ಮಾಡಿದರೆ ಪಾಕಿಸ್ತಾನದ ಹಿಂದೂಗಳನ್ನು ಇಲ್ಲಿಗೆ ಇಲ್ಲಿರುವ ಮುಸ್ಲಿಂಮರನ್ನು ಪಾಕಿಸ್ತಾನಕ್ಕೆ ರವಾನೆ ಮಾಡಬೇಕೆಂದು ಹೇಳಿದ್ದರು ಎಂದು ತಿಳಿಸಿದರು.
ಜಮೀರ್ ಖಬರಸ್ಥಾನ್ ಹರಾ ರಂಗ್ ಎನ್ನುತ್ತಾರೆ ಎಂದು ಜಮೀರ್ ಮಾತನಾಡುವ ರೀತಿಯನ್ನು ಮಿಮಿಕ್ರಿ ಮಾಡಿದರು. ಸಿಎಂ ಭೇಟಿಗೆ ಹೋಗಿದ್ದಾಗ ಜಮೀರ್ ಮತ್ತು ನನ್ನ ಮಧ್ಯೆ ವಾಗ್ವಾದ ಆಯ್ತು. ಖಬರಸ್ಥಾನ್‌ಗೆ ಹಸಿರು ಬಣ್ಣ ಹಾಕಬೇಕೆಂದು ಜಮೀರ್ ಹೇಳ್ತಾರೆ. ಸೈತಾನ್‌ಗೆ ಅದು ಕಾಣಿಸಬೇಕೆಂದು ಹೇಳುತ್ತಾರೆ. ಖಾವಿ ಹಾಕಿದವರು ನಾವೇ ಸೈತಾನಗಳಾ? ರಾಜ್ಯದಲ್ಲಿ ಒಂದು ಲಕ್ಷ ಎಕರೆ ಭೂಮಿ ಮಾತ್ರ ಇದೆ ಎನ್ನುತ್ತಾರೆ. ಆದರೆ ಜಮೀರ್ ಐದು ಲಕ್ಷಕ್ಕೂ ಅಧಿಕ ಜಮೀನು ಕಬಳಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಜನ್ನತ್ ಕುರಿತು ಮುಸ್ಲಿಂ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ದೇಶ, ಧರ್ಮ ದೊಡ್ಡದು ನಂತರ ನಮ್ಮ ಪಾರ್ಟಿ. ದೇಶ ಉಳಿದರೆ ಎಲ್ಲ ಉಳಿದಂತೆ. ದೇಶಕ್ಕಿಂತ ಕುರಾನ್ ದೊಡ್ಡದು ಎಂದು ಮುಸ್ಲಿಂಮರು ಹೇಳುತ್ತಾರೆ. ಆದರೆ ನಾವು ಸಂವಿಧಾನ ದೊಡ್ಡದು ಎನ್ನುತ್ತೇವೆ. ನಮ್ಮ ಜಿಲ್ಲೆಯಲ್ಲಿ ಶಂಶುದ್ದೀನ್ ಪಟೇಲ್ ಎಂಬ ಮಂತ್ರಿ ಇದ್ದಾನೆ. ಹಾವೇರಿಯಲ್ಲಿ ಮುಗ್ದ ಮುಸ್ಲಿಂ ಮೇಲೆ ಹಿಂದೂಗಳು ಹಲ್ಲೆ ಮಾಡಿದರು ಎಂದು ಹೇಳಿದ್ದಾನೆ ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಉತ್ತಮ ಗಾಳಿ ಇರುವ ಟಾಪ್ 10 ಸಿಟಿಗಳಲ್ಲಿ ಚನ್ನರಾಯಪಟ್ಟಣ ನಂ.1!