ಅಹಮದಾಬಾದ್: ವಿಶ್ವಕಪ್ (World Cup 2023) ಇತಿಹಾಸದಲ್ಲಿ ಟೀಂ ಇಂಡಿಯಾವನ್ನು (Team India) ಪಾಕ್ (Pakistan) ತಂಡ ಸೋಲಿಸಿಲ್ಲ. ಇಲ್ಲಿಯವರೆಗೂ ಮುಖಾಮುಖಿಯಾಗಿರುವ 7 ಪಂದ್ಯಗಳ ಪೈಕಿ ಭಾರತ ತಂಡ ಎಲ್ಲಾ ಪಂದ್ಯಗಳನ್ನು ಗೆದ್ದು 7-0 ಅಂತರದಲ್ಲಿ ಮುಂದಿದೆ. ಇದರ ಹೊರತಾಗಿಯೂ ಭಾರತ ತಂಡದ ವಿರುದ್ಧ ಉತ್ತಮವಾಗಿ ಬ್ಯಾಟ್ ಬೀಸಿ ಗೆಲ್ಲುವ ವಿಶ್ವಾಸವನ್ನು ಪಾಕ್ ತಂಡದ ನಾಯಕ ಬಾಬರ್ ಅಜಂ (Babar Azam) ವ್ಯಕ್ತಪಡಿಸಿದ್ದಾರೆ. ದಾಖಲೆಗಳಿರುವುದೇ ಮುರಿಯಲು ಈ ಬಾರಿ ಆ ದಾಖಲೆಯನ್ನು ಮುರಿಯುತ್ತೇವೆ ಎಂದು ಅವರು ಹೇಳಿದ್ದಾರೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕ್ ತಂಡಗಳು ಶನಿವಾರ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೆಣಸಲಿವೆ. ಈ ಪಂದ್ಯದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಾಬರ್ ಆಝಮ್ ಮಾತಾಡಿದ್ದಾರೆ. ಈ ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ನಾವು ಗಮನ ಕೊಡುವುದಿಲ್ಲ. ಮುಂದೆ ಏನು ಬರಲಿದೆ ಎಂಬುದರ ಬಗ್ಗೆ ಗಮನ ಹರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Breaking: ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆ
Advertisement
Advertisement
ಈ ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಗಮನ ಕೊಡುತ್ತೇನೆ. ದಾಖಲೆಗಳು ಇರುವುದೇ ಮುರಿಯಲು, 0-7 ಈ ಹಿಂದೆ ಇದ್ದ ದಾಖಲೆಯನ್ನು ನಾವು ಮುರಿಯುತ್ತೇವೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆಂಬ ಬಗ್ಗೆ ನಮಗೆ ವಿಶ್ವಾಸವಿದೆ ಎಂದಿದ್ದಾರೆ.
Advertisement
Advertisement
ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಮುಂದೆ ಪಂದ್ಯ ಆಡುವುದು ನಮ್ಮ ಪಾಲಿಗೆ ಸುವರ್ಣಾವಕಾಶ. ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಲು ನಮಗೆ ಉತ್ತಮ ಅವಕಾಶ ಲಭಿಸಿದೆ ಎಂದು ಬಾಬರ್ ಅಜಂ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ 7-0 ಮುನ್ನಡೆಯಲ್ಲಿ ಭಾರತ – ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ
Web Stories